ಗೋವಾ: ತುಂಡುಡುಗೆಯಲ್ಲಿ ಚಾರು, ಸೀರೆ ಹಾಕಿ ಹಾಕಿ ಬೇಜಾರಾಯ್ತಾ ಕೇಳ್ತಿದ್ದಾರೆ ಫ್ಯಾನ್ಸ್!

Published : Dec 11, 2023, 04:16 PM IST

ರಾಮಾಚಾರಿ ಖ್ಯಾತಿಯ ಚಾರು ಆಲಿಯಾಸ್ ಮೌನ ಗುಡ್ಡೆ ಮನೆ ಸದ್ಯ ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡು ಗೋವಾ ಟೂರ್ ಮಾಡುತ್ತಿದ್ದು, ಅಲ್ಲಿನ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.   

PREV
17
ಗೋವಾ: ತುಂಡುಡುಗೆಯಲ್ಲಿ ಚಾರು, ಸೀರೆ ಹಾಕಿ ಹಾಕಿ ಬೇಜಾರಾಯ್ತಾ ಕೇಳ್ತಿದ್ದಾರೆ ಫ್ಯಾನ್ಸ್!

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್ ನಾಯಕಿ ಚಾರು ಆಲಿಯಾನ್ ಮೌನ ಗುಡ್ಡೆಮನೆ, ತಮ್ಮ ನಟನೆಯಿಂದ, ಮುಗ್ಧ ಪಾತ್ರದ ಮೂಲಕ ಸಿಕ್ಕಾಪಟ್ಟೆ ಜನರ ಫೇವರಿಟ್ ನಟಿ ಅನಿಸಿಕೊಂಡಿದ್ದಾರೆ. 
 

27

ಮೊದಲು ಐಷರಾಮಿ ಜೀವನ ನಡೆಸುತ್ತಾ, ರಾಮಾಚಾರಿ ಮನೆ ಮುರಿಯೋಕೆ ಕಾಯ್ತಿದ್ದ ಚಾರು ಈಗ ಸಂಪೂರ್ಣ ಬದಲಾಗಿ ಗಂಡನ ಹಾಗೂ ಮನೆಯವರ ಒಳಿತಿಗಾಗಿ ಏನು ಬೇಕಾದಾರೂ ಮಾಡುವಂತಹ ಅಪ್ಪಟ್ಟ ಮನೆ ಮಗಳು ಚಾರು ಆಗಿದ್ದಾಳೆ. 
 

37

ನಾರಾಯಣಾಚಾರ್ಯರ ಮನೆಯ ಸೊಸೆ ಆಗಿರೋದ್ರಿಂದ ಚಾರು ತನ್ನ ಹಿಂದಿನ ಮಾಡರ್ನ್ ಜೀವನವನ್ನು ದೂರ ಮಾಡಿ, ಯಾವಾಗಲೂ ಸೀರೆಯನ್ನೆ ಉಡುತ್ತಿದ್ದು, ಜನರಂತೂ ಮಾಡರ್ನ್ ಚಾರುಗಿಂತ ಹೆಚ್ಚಾಗಿ, ಸೀರೆಯಲ್ಲಿ ಮುದ್ದು ಮುದ್ದಾಗಿ ಕಾಣಿಸುವ ಚಾರುವನ್ನು ಇಷ್ಟಪಟ್ಟಿದ್ದಾರೆ. 

47

ಇದೀಗ ಚಾರು ಅಂದ್ರೆ ಮೌನ ಗುಡ್ಡೆಮನೆ (Mouna Guddemane) ಸೀರಿಯಲ್ ನಿಂದ ಸಣ್ಣ ಬ್ರೇಕ್ ತೆಗೆದುಕೊಂಡು ಫ್ರೆಂಡ್ಸ್ ಜೊತೆ ಗೋವಾ ಟೂರ್ ಮಾಡಿದ್ದು, ಅಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಮೌನ ತಮ್ಮ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. 
 

57

ಸೀರಿಯಲ್ ನಲ್ಲಿ (serial) ಹೆಚ್ಚಾಗಿ ಸೀರೆಯಲ್ಲೇ ಕಾಣಿಸುವ ಮೌನ, ಇದೀಗ ತುಂಡುಡುಗೆಯಲ್ಲಿನ ಫೋಟೋಗಳನ್ನು ಶೇರ್ ಮಾಡಿದ್ದು, ನೋಡಿ, ಅಯ್ಯೋ ಚಾರು ನಿಂಗೆ ಸೀರೆ ಹಾಕಿ ಹಾಕಿ ಬೇಜಾರಾಯ್ತ? ಅದಿಕ್ಕೆ ಈ ರೀತಿಯಾಗಿ ಡ್ರೆಸ್ ಮಾಡಿದ್ದೀರಾ ಎಂದು ಕೇಳಿದ್ದಾರೆ. 
 

67

ಇನ್ನು ಹಲವಾರು ಅಭಿಮಾನಿಗಳು, ಚಾರು ಅಂದ್ರೆ ಏಂಜಲ್, ನೀವು ತುಂಬಾನೆ ಚೆನ್ನಾಗಿ ಕಾಣಿಸುತ್ತೀರಿ. ನಿಮ್ಮ ಡ್ರೆಸ್ಸಿಂಗ್ ಸೆನ್ಸ್ (Dressing Sense) ತುಂಬಾನೆ ಚೆನ್ನಾಗಿದೆ, ನಿಮಗೆ ಮಾಡರ್ನ್, ಟ್ರೆಡಿಷನಲ್ (Tredtional) ಎರಡೂ ಚೆನ್ನಾಗಿ ಒಪ್ಪುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. 
 

77

ಇನ್ನು ಸೀರಿಯಲ್ ವಿಷಯಕ್ಕೆ ಬಂದ್ರೆ ಸದ್ಯ ರಾಮಾಚಾರಿಯನ್ನು ಹೋಲುವ ಕಿಟ್ಟಿ ಎಂಟ್ರಿಯಾಗಿದೆ. ರಾಮಾಚಾರಿಯ ಜಾಗದಲ್ಲಿ ಕಿಟ್ಟಿಯನ್ನು ನಿಲ್ಲಿಸಲು ಮಾನ್ಯತಾ ಏನೇನೋ ಕಿತಾಪತಿ ಮಾಡ್ತಿದ್ದಾಳೆ. ಮುಂದೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು. 
 

Read more Photos on
click me!

Recommended Stories