ತೆಲುಗು ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆದ ಏಕೈಕ ಕನ್ನಡತಿ ಶೋಭಾ ಶೆಟ್ಟಿ

Published : Dec 11, 2023, 11:22 AM ISTUpdated : Dec 11, 2023, 11:25 AM IST

ತೆಲುಗು ಬಿಗ್‌ಬಾಸ್‌ 7ನಲ್ಲಿ ಹವಾ ಸೃಷ್ಟಿಸಿದ ಕನ್ನಡತಿ ಶೋಭಾ ಶೆಟ್ಟಿ ಈಗ ಬಿಗ್‌ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಬಿಗ್‌ಬಾಸ್‌ ಮನೆ ಸೇರಿದಾಗಿನಿಂದಲೂ ತಮ್ಮ ಬಾಯಿ ಬೊಂಬಾಯಿಯಿಂದಾಗಿ ಶೋಭಾ ಶೆಟ್ಟಿ ತೆಲುಗು ಟ್ರೋಲ್ ಪೇಜ್‌ಗಳಲ್ಲಿ ಸಖತ್ ಟ್ರೋಲ್ ಆಗಿದ್ದರು.

PREV
19
ತೆಲುಗು ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆದ ಏಕೈಕ ಕನ್ನಡತಿ ಶೋಭಾ ಶೆಟ್ಟಿ

ತೆಲುಗು ಬಿಗ್‌ಬಾಸ್‌ 7ನಲ್ಲಿ ಹವಾ ಸೃಷ್ಟಿಸಿದ ಕನ್ನಡತಿ ಶೋಭಾ ಶೆಟ್ಟಿ ಈಗ ಬಿಗ್‌ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಬಿಗ್‌ಬಾಸ್‌ ಮನೆ ಸೇರಿದಾಗಿನಿಂದಲೂ ತಮ್ಮ ಬಾಯಿ ಬೊಂಬಾಯಿಯಿಂದಾಗಿ ಶೋಭಾ ಶೆಟ್ಟಿ ತೆಲುಗು ಟ್ರೋಲ್ ಪೇಜ್‌ಗಳಲ್ಲಿ ಸಖತ್ ಟ್ರೋಲ್ ಆಗಿದ್ದರು

29

ಕನ್ನಡದಲ್ಲಿ ಕಿಚ್ಚ ಸುದೀಪ್ ಬಿಗ್ಬಾಸ್ ಕಾರ್ಯಕ್ರಮ ಹೋಸ್ಟ್ ಮಾಡುತ್ತಿದ್ದರೆ, ತೆಲುಗಿನಲ್ಲಿ ನಟ ಅಕ್ಕಿನೇನಿ ನಾಗಾರ್ಜುನ್ ಅವರು ಈ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. 

39

ಇದೇ ಶೋನಲ್ಲಿದ್ದ ತೆಲುಗು ಮೂಲದವನಲ್ಲದ ತೆಲುಗು ಬಾರದ ಇನ್ನೋರ್ವ ಸ್ಪರ್ಧಿಯೂ ಕೂಡ ಡೇಂಜರ್ ಜೋನ್‌ನಲ್ಲಿ ಇದ್ದರು. ಆದರೆ ಅವರು ನಿನ್ನೆಯ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಎಲಿಮಿನೇಷನ್‌ನಿಂದ ಪಾರಾಗಿ ಮನೆಯಲ್ಲೇ ಉಳಿದಿದ್ದಾರೆ. 

49

ಈತನೂ ಈಗ ಬಿಗ್‌ಬಾಸ್‌ ಮನೆಯಲ್ಲಿರುವ ಐವರು ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಕನ್ನಡ ಬಿಗ್‌ಬಾಸ್‌ನಂತೆ ತೆಲುಗು ಬಿಗ್‌ಬಾಸ್‌ ಮನೆಯಲ್ಲೂ ಕೂಡ ಈ ವಾರ ಸ್ಪರ್ಧಿಗಳ ಅತಿರೇಕದ ವರ್ತನೆಯಿಂದ ವೀಕ್ಷಕರು ರೋಸಿ ಹೋಗಿದ್ದರು. 

59

 ಸ್ಪರ್ಧಿ ಅಮರ್‌ದೀಪ್‌ನ ಅವಾಚ್ಯ ಪದಗಳಿಂದ ಇತರ ಸ್ಪರ್ಧಿಗಳನ್ನು ನಿಂದಿಸಿದ್ದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಆದರ ವೀಕೇಂಡ್ ಕಾರ್ಯಕ್ರಮದಲ್ಲಿ ನಾಗಾರ್ಜುನ್ ಅವರು ಅಮರ್‌ದೀಪ್‌ಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದರು. ನಂತರ ಎಲ್ಲರ ಮುಂದೆ ಆತ ಕ್ಷಮೆ ಕೇಳಿದ್ದ.

69

ಈಗ ಶೋಭಾ ಶೆಟ್ಟಿ ಬಿಗ್‌ಬಾಸ್‌ ಮನೆಯಿಂದ ಔಟ್ ಆಗಿರುವುದಕ್ಕೆ  ಸಾಮಾಜಿಕ ಜಾಲತಾಣದಲ್ಲಿ ತೆಲುಗು ಬಿಗ್ಬಾಸ್ ವೀಕ್ಷಕರು ಕೆಲವರು ಖುಷಿಯಾಗಿದ್ದಾರೆ.   ಶೋಭಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ ಎಂದು ಪೋಸ್ಟ್ ಹಾಕಿದ ಟ್ರೋಲ್‌ ಪೇಜ್‌ಗಳಲ್ಲಿ  ಅನೇಕರು ಸಂತಸ ವ್ಯಕ್ತಪಡಿಸಿದ್ದು, ಇನ್ನು ಮೇಲೆ ನಾನು ಖುಷಿಯಿಂದ ಬಿಗ್‌ ಬಾಸ್ ನೋಡ್ತೇವೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

79

ಕಳೆದ ಕೆಲ ವಾರಗಳಿಂದಲೂ ಶೋಭಾ ಶೆಟ್ಟಿ ವಿರುದ್ಧ ಅನೇಕ ಟ್ರೋಲ್ ಪೇಜ್‌ಗಳು ಮೀಮ್ಸ್‌ ಪೋಸ್ಟ್ ಮಾಡಿ ಶೋಭಾ ವಿರುದ್ಧ ಪ್ರಚಾರ ಮಾಡಿದ್ದರು. 

89

ಆದರೂ ಶೋಭಾ ಶೆಟ್ಟಿ ಬಿಗ್‌ಬಾಸ್‌ ಮನೆಯಲ್ಲಿ ಮುಂದುವರಿಯುತ್ತಲೇ ಬಂದಿದ್ದರು. ಆದರೆ ನಿನ್ನೆಯ ಎಪಿಸೋಡ್‌ನಲ್ಲಿ ಶೋಭಾ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ. 

99


ಇನ್ನು ಎಲಿಮಿನೇಟ್ ಆದ ಶೋಭಾ ಶೆಟ್ಟಿ ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಪಲ್ಲವಿ ಪ್ರಶಾಂತ್ ಅವರನ್ನು ಆಗಾಗ ಕೀಳಾಗಿ ಕಂಡು ಅವಹೇಳನ ಮಾಡಿದ್ದೆ ಈ ರೀತಿ ಜನರು ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕಾರಣ ಎನ್ನಲಾಗಿದೆ. ಎಲಿಮಿನೇಟ್‌ ಆದ ನಂತರ ಮಾತ್ರ ಶೋಭಾ ಶೆಟ್ಟಿ ಎಲ್ಲರಿಗೂ ಕ್ಷಮಿಸುವಂತೆ ಕೇಳಿ ಬಿಗ್ಬಾಸ್‌ ಮನೆಯಿಂದ ಹೊರ ಬಿದ್ದಿದ್ದಾರೆ. 

Read more Photos on
click me!

Recommended Stories