ರಾಮ್ ಜಿ ಅವರ ಕೂಡು ಕುಟುಂಬದ ಕಥೆ ಮೂಲಕವೇ ಭಾರಿ ಕುತೂಹಲ ಹುಟ್ಟು ಹಾಕಿದ್ದ ಬೃಂದಾವನ ಸೀರಿಯಲ್ (Brundavana serial), ಶುರುವಾದ ನಂತರ ಮಾತ್ರ ಹಲವಾರು ಕಾರಣಕ್ಕೆ ಸುದ್ದಿಯಾಗಿದ್ದೆ ಜಾಸ್ತಿ, ಅದರಲ್ಲೂ ಹೀರೋ ವಿಷ್ಯದಲ್ಲೇ ಹೆಚ್ಚು ಸುದ್ದಿಯಲ್ಲಿರುತ್ತೆ.
ಮೂವತ್ತಾರು ಜನರು ಇರೋ ಕೂಡು ಕುಟುಂಬದ ಪ್ರೀತಿಯ ಸಣ್ಣ ಮಗ ಆಕಾಶ್ ನ ಮದುವೆಗಾಗಿ ಹುಡುಗಿ ಹುಡುಕುವ ಕಥೆಯ ಮೂಲಕ ಆರಂಭವಾದ ಧಾರಾವಾಹಿ ಇದು. ಈ ಸೀರಿಯಲ್ ನಲ್ಲಿ ಮೊದಲು ಗಾಯಕ ವಿಶ್ವನಾಥ್ ಹಾವೇರಿ (Vishwanath Haveri) ನಾಯಕ ಆಕಾಶ್ ಆಗಿ ನಟಿಸುತ್ತಿದ್ದರು.
ಇನ್ನೂ ಚಾಕಲೇಟ್ ಬಾಯ್ ತರ ಇರೋ ಹೀರೋನ ನೋಡಿ ಜನರಂತೂ ಇನ್ನೂ ಶಾಲೆಗೆ ಹೋಗೋ ಹುಡುಗನ ತರ ಇದ್ದಾನೆ, ಹೀರೋನ ತಮ್ಮನ ತರ ಇದ್ದಾನೆ, ದಯವಿಟ್ಟು ಹೀರೋ ಬದಲಾಯಿಸಿ, ಎಂದು ಮೆಸೇಜ್, ಕಾಮೆಂಟ್ ಮೂಲಕ ಎಷ್ಟೊಂದು ಸುದ್ದಿ ಮಾಡಿದ್ರು ಅಂದ್ರೆ, ಕೊನೆಗೆ ನಿರ್ದೇಶಕರು ಹೀರೋನನ್ನೆ ಬದಲಾಯಿಸಿದ್ರು.
ನಂತರ ನಾಯಕನ ಸ್ಥಾನಕ್ಕೆ ಆಯ್ಕೆಯಾಗಿದ್ದು, ತಮ್ಮ ರೀಲ್ಸ್ ಮೂಲಕ ಸೋಶಿಯಲ್ ಮೀಡೀಯಾದಲ್ಲಿ ಸುದ್ದಿಯಾಗಿದ್ದ ವರುಣ್. ಆದರೆ ನಾಯಕನ ಸ್ಥಾನದಲ್ಲಿ ವರುಣ್ (Varun Aradhya) ನೋಡಿದ ಜನ ಮತ್ತೆ ಹೀರೋ ಬದಲಾಯಿಸಿ, ವಿಶ್ವಾನಥ್ ಅವರೇ ಚೆನ್ನಾಗಿತ್ತು, ಇವರನ್ನ ನೋಡೋಕೆ ಆಗ್ತಿಲ್ಲ ಅಂತಿದ್ದಾರೆ.
ಹೆಚ್ಚಿನ ಜನರು ಕಾಮೆಂಟ್ ಮಾಡಿ, ಹೀರೋಗೆ ನಟನೆ ಬರೋದೆ ಇಲ್ಲ, ಅವರ ಕನ್ನಡ ಮಾತಲ್ಲಿ ಸ್ಪಷ್ಟತೇನೆ ಇಲ್ಲ, ಏನು ಮಾತಾಡ್ತಾರೆ ಅಂತಾನೆ ಅರ್ಥ ಆಗಲ್ಲ, ಈ ಸೀರಿಯಲ್ ನೋಡೋದಿಕ್ಕೆ ಸಾಧ್ಯ ಆಗ್ತಿಲ್ಲ ಎಂದು ಕಾಮೆಂಟ್ ಮೇಲೆ ಕಾಮೆಂಟ್ ಮಾಡ್ತಿದ್ದಾರೆ.
ನಾಯಕಿ ಪುಷ್ಪ ತುಂಬಾನೆ ಚೆನ್ನಾಗಿ ನಟಿಸ್ತಾರೆ, ಆದ್ರೆ ಹೀರೋನ ಓವರ್ ಆಕ್ಟಿಂಗ್ ಮಾತ್ರ ನೋಡೊದಿಕ್ಕೆ ಕಷ್ತ ಆಗ್ತಿದೆ ಅಂತಿದ್ದಾರೆ ಜನ. ಅಷ್ಟೇ ಅಲ್ಲ ಇವನಿಗೆ ಆಕ್ಟಿಂಗ್ ಮಾಡೋಕೆ ಬರ್ತಿಲ್ಲ ಸರಿಯಾಗಿ ಇವನ್ನ ಏನ್ ಅಂತಾ ತೊಗೊಂಡರೋ ಗೊತ್ತಿಲ್ಲಾ ಅಂತಾನೂ ಹೇಳ್ತಿದ್ದಾರೆ.
ಇನ್ನೂ ಕೆಲವರು ರೀಲ್ಸ್ ನಲ್ಲಿ ಹಾಡುಗಳಿಗೆ ಲಿಪ್ ಸಿಂಕ್ ಮಾಡೋದು ಮಾತ್ರ ಕರೆಕ್ಟ್ ಆಗಿ ಗೊತ್ತಿತ್ತು ಇವನಿಗೆ, ಆದ್ರೆ ಈವಾಗ ರಿಯಲ್ ಆಗಿ ಡೈಲಾಗ್ ಕೇಳಿದ್ರೆ, ಸ್ಪಷ್ಟತೇನೆ ಇಲ್ಲ. ರೀಲ್ಸ್ ನೋಡಿ ನಾಯಕನ ಆಯ್ಕೆ ಮಾಡಿದ್ರೆ ಹೀಗೆ ಆಗೋದು ಅಂತಿದ್ದಾರೆ.