ರೀಲ್ ಅಲ್ಲ…. ರಿಯಲ್ ಗಂಡನ ಜೊತೆಗೆ ರೊಮ್ಯಾಂಟಿಕ್ ಪೋಸ್ ಕೊಟ್ಟ ರಾಮಾಚಾರಿಯ ವಿಲನ್ ವೈಶಾಖ

Published : Jul 31, 2024, 09:27 PM IST

ರಾಮಾಚಾರಿ ಧಾರಾವಾಹಿಯ ವಿಲನ್ ವೈಶಾಖ ಪಾತ್ರಧಾರಿ ಐಶ್ವರ್ಯ ವಿನಯ್ ಸದ್ಯ ಮಳೆ ನಡುವೆ ಗಂಡನ ಜೊತೆ ಟ್ರಿಪ್ ಮಾಡಿದ್ದು, ಮುದ್ದಾದ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.   

PREV
17
ರೀಲ್ ಅಲ್ಲ…. ರಿಯಲ್ ಗಂಡನ ಜೊತೆಗೆ ರೊಮ್ಯಾಂಟಿಕ್ ಪೋಸ್ ಕೊಟ್ಟ ರಾಮಾಚಾರಿಯ ವಿಲನ್ ವೈಶಾಖ

ರಾಮಾಚಾರಿ ಧಾರಾವಾಹಿಯಲ್ಲಿ ನಾರಾಯಣಾಚಾರಿ ಮತ್ತು ಕುಟುಂಬವನ್ನ ಸರ್ವ ನಾಶ ಮಾಡೋಕೆ ಬಂದ ಸೊಸೆ ವಿಲನ್ ವೈಶಾಖ ಪಾತ್ರದಲ್ಲಿ ನಟಿಸುತ್ತಿರುವ ಐಶ್ವರ್ಯ ವಿನಯ್ (Aishwarya vinay) ವಿಲನ್ ಪಾತ್ರಕ್ಕೆ ಹೇಳಿ ಮಾಡಿಸಿದ ನಟಿ. ತಮ್ಮ ನೆಗೆಟಿವ್ ಶೇಡ್ ಮೂಲಕವೇ ಜನಮನ ಗೆದ್ದಿದ್ದಾರೆ. 

27

ಧಾರಾವಾಹಿಯಲ್ಲಿ ಗರ್ಭಿಣಿ, ಗರ್ಭಪಾತ ಎಂದು ಗಂಡ ಸೇರಿ ಮನೆಯವರಿಗೆಲ್ಲಾ ಮೋಸ ಮಾಡುತ್ತಿರುವ ವೈಶಾಖ ಸದ್ಯ ರಿಯಲ್ ಲೈಫಲ್ಲಿ ತಮ್ಮ ಗಂಡನ ಜೊತೆ ಟ್ರಿಪ್ ಮಾಡ್ತಾ ಎಂಜಾಯ್ ಮಾಡ್ತಿದ್ದಾರೆ ಜೊತೆಗೆ ಒಂದಷ್ಟು ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

37

ಐಶ್ವರ್ಯ ತಮ್ಮ ಗಂಡ ಹಾಗೂ ನಟ ವಿನಯ್  (Vinay) ಜೊತೆಗೆ ಇತ್ತೀಚೆಗೆ ಮಡಿಕೇರಿ ಪ್ರವಾಸ ಮಾಡಿದ್ದು, ಅಲ್ಲಿನ ಕೇವ್ ರೆಸಾರ್ಟ್ ಒಂದರಲ್ಲಿ ಉಳಿದುಕೊಂಡಿದ್ದು, ಅಲ್ಲಿ ಇಬ್ಬರು ಜೊತೆಯಾಗಿ ರೊಮ್ಯಾಂಟಿಕ್ ಆಗಿ ತೆಗೆದಿರುವ ಒಂದಷ್ಟು ಫೋಟೋಗಳನ್ನು ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 
 

47

ಗಂಡನ ಕೆನ್ನೆಗೆ ಮುತ್ತನಿಡುವ, ಗಂಡನ ಬೆನ್ನಿಗೆ ಬೆನ್ನು ಹಾಕಿ ಕುಳಿತ ಹಾಗೂ ವಿನಯ್ ಕೈ ಹಿಡಿದ ಹೀಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ನಟಿ ನಿನ್ನ ಹೃದಯವನ್ನು ಕದ್ದಿದ್ದು ಪರ್ಫೆಕ್ಟ್ ಕ್ರೈಮ್ ಎಂದು (Stealing your Heart was the perfect crime) ಬರೆದುಕೊಂಡಿದ್ದಾರೆ. 
 

57

ಧಾರಾವಾಹಿಯಲ್ಲಿ ಸದಾ ಸೀರೆಯುಟ್ಟೆ ಕಾಣಿಸಿಕೊಳ್ಳುವ ಐಶ್ವರ್ಯ ತಮ್ಮ ರೈನಿ ಟೂರ್ ನಲ್ಲಿ ಕರ್ನಾಟಕ ಸ್ಕಾಟ್ ಲ್ಯಾಂಡ್ ಆಗಿರುವ ಚುಮುಚುಮು ಚಳಿಯ ಅನುಭವ ನೀಡುವ ಕೂರ್ಗ್ ನಲ್ಲಿ ಡೆನಿಮ್ ಮಿನಿ ಸ್ಕರ್ಟ್ ಮತ್ತು ಪರ್ಪಲ್ ಬಣ್ಣದ ವೂಲನ್ ಸ್ವೆಟ್ ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. 
 

67

ಸೆಲೆಬ್ರಿಟಿ ಜೋಡಿಯ ಫೋಟೋಕ್ಕೆ ರಾಮಾಚಾರಿ ಖ್ಯಾತಿಯ ರಿತ್ವಿಕ್ ಕೃಪಾಕರ್ ಕ್ಯೂಟೀಸ್ ಎಂದು ಕಾಮೆಂಟ್ ಮಾಡಿದ್ರೆ, ಇತರ ಜನರು ಮುದ್ದಾದ ಜೋಡಿ, ಇಬ್ಬರಿಗೂ ಯಾರ ದೃಷ್ಟಿಯೂ ಬೀಳದಿರಲಿ ಎಂದು ಕಾಮೆಂಟ್ ಮಾಡಿದ್ದಾರೆ. 
 

77

ವಿನಯ್ ಸಿನಿಮಾ, ಸೀರಿಯಲ್ ಎಂದು ಬ್ಯುಸಿಯಾಗಿದ್ದರೆ, ಐಶ್ವರ್ಯ ಸಿರಿಯಲ್ ಗಳಲ್ಲೆ ಬ್ಯುಸಿಯಾಗಿದ್ದಾರೆ, ಇದೆಲ್ಲದರ ನಡುವೆ ಇಬ್ಬರು ಹೆಚ್ಚಾಗಿ ಬ್ರೇಕ್ ತೆಗೆದುಕೊಂಡು, ದೇಶದ ವಿವಿಧ ಪ್ರವಾಸಿ ತಾಣಗಳನ್ನ ಸುತ್ತಾಡಿಕೊಂಡು ಬರುತ್ತಾರೆ, ಇತ್ತೀಚೆಗಷ್ಟೇ ಈ ಜೋಡಿ ಕೇದಾರನಾಥನ ದರ್ಶನ ಪಡೆದು ಬಂದಿದ್ದರು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories