ನಗುವಿನಲಿ ಮನ ಸೆಳೆದ ಮಿಸಸ್ ರಾಮಾಚಾರಿ. ನಿಮ್ಮ ಹೆಸರು ಮುದ್ದಮ್ಮ ಅಂತಿರ್ಬೇಕಿತ್ತು ಎಂದ ಫ್ಯಾನ್ಸ್

First Published | Jul 31, 2024, 8:55 PM IST

ರಾಮಾಚಾರಿ ಧಾರಾವಾಹಿಯಲ್ಲಿ ಚಾರುವಾಗಿ ಮಿಂಚುತ್ತಿರುವ ಬೆಡಗಿ ಮೌನ ಗುಡ್ಡೆಮನೆ, ತಮ್ಮ ಬೆಸ್ಟ್ ಫ್ರೆಂಡ್ ಮದುವೆ ಸಂಭ್ರಮದ ಫೋಟೋಗಳನ್ನು ಶೇರ್ ಮಾಡಿದ್ದು ಫ್ಯಾನ್ಸ್ ತುಂಬಾನೆ ಇಷ್ಟಪಟ್ಟಿದ್ದಾರೆ. 
 

ರಾಮಾಚಾರಿ ಧಾರಾವಾಹಿ ಜನರು ಇಷ್ಟ ಪಟ್ಟು ನೋಡೋ ಧಾರಾವಾಹಿಗಳಲ್ಲಿ ಒಂದು. ಅದರಲ್ಲೂ ಚಾರು ಮತ್ತು ರಾಮಾಚಾರಿ ಜೋಡಿ ಸಖತ್ ಫೇವರಿಟ್. ಚಾರು ಪಾತ್ರ ನಿರ್ವಹಿಸುತ್ತಿರುವ ಮೌನ ಗುಡ್ಡೆಮನೆಗಂತೂ (Mouna Guddemane) ಫ್ಯಾನ್ಸ್ ಫಾಲೋವರ್ಸ್ ಸಿಕ್ಕಾಪಟ್ಟೆ ಇದ್ದಾರೆ. 
 

ಇತ್ತೀಚೆಗೆ ಮೌನ ಗುಡ್ಡೆಮನೆ ಬೆಸ್ಟ್ ಫ್ರೆಂಡ್ ಮದುವೆ ನಡೆದಿದ್ದು, ಅಲ್ಲಿ ತೆಗೆದಂತಹ ಒಂದಷ್ಟು ಕ್ಯಾಂಡಿಟ್ ಫೋಟೋಗಳನ್ನು (candid photos) ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಮುದ್ದಾದ ಫೋಟೋಗಳು ಸಾಕಷ್ಟು ವೈರಲ್ ಆಗುತ್ತಿವೆ. 
 

Tap to resize

ತಾವು ಬೇರೆ ಬೇರೆ ಸಂದರ್ಭಗಳಲ್ಲಿ ನಗುತ್ತಿರುವ ಫೋಟೋಗಳನ್ನ ಶೇರ್ ಮಾಡಿರುವ ಮೌನ ನನ್ನ ಬೆಸ್ಟ್ ಫ್ರೆಂಡ್ ಮದ್ವೇಲಿ ನಾನೇ ಚೀಫ್ ಲಾಫರ್ ಆಫೀಸರ್ (CLO) ಆಗಿದ್ದೆ ಎಂದು ಬರೆದು ಕೊಂಡಿದ್ದಾರೆ. (At my best friend’s wedding, I’m the chief laughter officer). 
 

ನ್ಯೂಡ್ ಬಣ್ಣದ ವಿ ಶೇಪ್ ನೆಕ್ ಸ್ಲೀವ್ ಲೆಸ್ ಬ್ಲೌಸ್ ಮತ್ತು ಪ್ಲೇನ್ ಲಂಗ ಧರಿಸಿರುವ ಮೌನ, ತಮ್ಮ ನಗುವಿನ ಮೂಲಕವೇ ಅಭಿಮಾನಿಗಳ ಮನಸನ್ನ ಗೆದ್ದಿದ್ದಾರೆ. ಇವರ ನಗುವಿಗೆ ಸೋತ ಫ್ಯಾನ್ಸ್ ಅಷ್ಟೇ ಪ್ರೀತಿಯಿಂದ ಕಾಮೆಂಟ್ ಮಾಡಿದ್ದು, ಎಲ್ಲರಿಗೂ ಅಷ್ಟೇ ಪ್ರೀತಿಯಿಂದ ರಿಪ್ಲೈ ನೀಡಿದ್ದಾರೆ ಮೌನ. 
 

ಒಬ್ರು ಅಭಿಮಾನಿ ಮುದ್ದಾದ ನಗುವಿನ ಅಪ್ಪಟ ಅಪರಂಜಿ ಎಂದರೆ, ಇನ್ನೊಬ್ಬರು ನಿಮಗೆ ಮೌನ ಗುಡ್ಡೆಮನೆ ಅಂತಲ್ಲ, ಮೌನ ಮುದ್ದಮ್ಮ ಅಂತ ಹೆಸರಿಡಬೇಕಿತ್ತು, ಎಷ್ಟೊಂದು ಮುದ್ದಾಗಿದ್ದೀರಿ, ನಿಮ್ಮ ಸ್ಮೈಲ್ ನೋಡಿ, ನನ್ನ ಹಾರ್ಟ್ ಕರಗಿ ಹೋಯ್ತು ಎಂದಿದ್ದಾರೆ. 
 

ಮತ್ತೊಂದಿಷ್ಟು ಜನ ಕಾಮೆಂಟ್ ಮಾಡಿ ಆಹಾ ಸೂಪರ್ ಚಾರು ಲುಕಿಂಗ್ ಸೂಪರ್, ನಿಮ್ಮ ನಗುವಿಗೆ ಕಳೆದು ಹೋದೆ, ಮುದ್ದಾದ ನಗುವಿನಲ್ಲಿ ಮಳೆಯ ಸುರಿಸುವ ಹುಡುಗಿ, ಅಪ್ಸರೆಯ ನಗುಮುಖದವಳು, ಬಾಲಿವುಡ್ ಹೀರೋಯಿನ್ ಥರ ಇದೀರಾ, ಕ್ಯೂಟಿ, ಚಾರ್ಮಿಂಗ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಸೋಶಿಯಲ್ ಮೀಡೀಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಮೌನ ಗುಡ್ಡೆಮನೆ, ಹೆಚ್ಚಾಗಿ ಸೀರೆಯುಟ್ಟು ಫೋಟೋ ಶೂಟ್ ಮಾಡಿಸುತ್ತಿರುತ್ತಾರೆ. ಚಾರು ಪಾತ್ರಕ್ಕಾಗಿ ನಟಿ ಸೀರೆಯನ್ನೇ ಉಡೋದ್ರಿಂದ ಅದೇ ಸೀರೆಯಲ್ಲಿನ ಫೋಟೋಗಳನ್ನು, ತಮ್ಮ ಸೀರಿಯಲ್ ಟೀಮ್ ಜೊತೆಗಿನ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ ನಟಿ. 
 

Latest Videos

click me!