ಮೌನ ಗುಡ್ಡೆಮನೆ ಬಳಿಕ 'ರಾಮಾಚಾರಿ’ಯ ನಾಯಕ ರಿತ್ವಿಕ್ ಕಿರುತೆರೆಗೆ ರೀ ಎಂಟ್ರಿ

Published : Apr 17, 2026, 11:09 AM IST

ರಾಮಾಚಾರಿ ಧಾರಾವಾಹಿ ಮುಗಿಯುತ್ತಿದ್ದಂತೆ ನಟಿ ಮೌನ ಗುಡ್ಡೆಮನೆ ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ಚಾನ್ಸ್ ಪಡೆದರು. ಇದೀಗ ನಾಯಕ ರಿತ್ವಿಕ್ ಕೃಪಾಕರ್ ಕೂಡ ಹೊಸ ಸೀರಿಯಲ್ ಗೆ ನಾಯಕನಾಗಿ ಶೀಘ್ರದಲ್ಲೆ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. 

PREV
16
ರಾಮಾಚಾರಿ ಧಾರಾವಾಹಿ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು 'ರಾಮಾಚಾರಿ’. ಬರೋಬ್ಬರಿ 1000 ಎಪಿಸೋಡ್ ಗಳನ್ನು ದಾಟಿದ್ದ ಧಾರಾವಾಹಿಯ ಪ್ರತಿಯೊಂದು ಪಾತ್ರಗಳನ್ನು ಜನ ಮೆಚ್ಚಿಕೊಂಡಿದ್ದರು. ನಾಯಕಿ ಮೌನ ಗುಡ್ಡೆಮನೆ, ನಾಯಕ ರಿತ್ವಿಕ್ ಕೃಪಾಕರ್ ಎಲ್ಲರೂ ಮೊದಲ ಧಾರಾವಾಹಿಯಲ್ಲೇ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು.

26
ಮೌನ ಬಳಿಕ ರಿತ್ವಿಕ್ ಕೃಪಾಕರ್ ರೀ ಎಂಟ್ರಿ

ಇದೀಗ ರಾಮಾಚಾರಿ ಧಾರಾವಾಹಿಯ ಚಾರು ಖ್ಯಾತಿ ಮೌನ ಗುಡ್ಡೆಮನೆ ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ರೀ ಎಂಟ್ರಿ ಕೊಟ್ಟಾಗಿದೆ. ಇದೀಗ ನಾಯಕ ರಿತ್ವಿಕ್ ಕೃಪಾಕರ್ ಕೂಡ ಹೊಚ್ಚ ಹೊಸ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ.

36
ಯಾವ ಧಾರಾವಾಹಿ

ಕಲರ್ಸ್ ಕನ್ನಡ, ಉದಯ ಟಿವಿ ಮತ್ತು ಜೀ ಕನ್ನಡದಲ್ಲಿ ಸುಮಾರು ಹೊಸ ಧಾರಾವಾಹಿಗಳು ಶುರುವಾಗಲಿದೆ ಎನ್ನುವ ಮಾಹಿತಿ ಇದೆ. ಆದರೆ ಯಾವ ವಾಹಿನಿಯ ಯಾವ ಧಾರಾವಾಹಿಯಲ್ಲಿ ರಿತ್ವಿಕ್ ನಟಿಸುತ್ತಿದ್ದಾರೆ ಎನ್ನುವ ಕುರಿತು ಮಾಹಿತಿ ಇಲ್ಲ.

46
ಸೀರಿಯಲ್ ಗಳಲ್ಲಿ ಅತಿಥಿ ಪಾತ್ರ

ರಿತ್ವಿಕ್ ಕೃಪಾಕರ್ ರಾಮಾಚಾರಿ ಧಾರಾವಾಹಿಯಲ್ಲಿ ಪುರೋಹಿತ ಆಗಿದ್ದುದರಿಂದ, ಅವರು ಭಾಗ್ಯಲಕ್ಷ್ಮೀ ಧಾರಾವಾಹಿ ಹಾಗೂ ನಂದಗೋಕುಲದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳಲು ತಯಾರಿ ನಡೆಸಿದ್ದಾರೆ.

56
ಡೆಡಿಕೇಟೆಡ್ ನಟ

ರಿತ್ವಿಕ್ ತುಂಬಾನೆ ಡೆಡಿಕೇಟೆಡ್ ನಟ. ತಮ್ಮ ಪಾತ್ರಕ್ಕೆ ಏನೇನು ಬೇಕು ಅದನ್ನೆಲ್ಲಾ ಅಚ್ಚುಕಟ್ಟಾಗಿ ಮಾಡಿರುವುದರಿಂದಲೇ ಅವರು ಮೊದಲ ಸೀರಿಯಲ್ ನಲ್ಲೆ ಜನಮನ ಗೆದ್ದು ಜನಪ್ರಿಯತೆ ಪಡೆದಿದ್ದಾರೆ. ರಾಮಾಚಾರಿ ಧಾರಾವಾಹಿಯಲ್ಲಿ ಪುರೋಹಿತ ಆಗಿರುವುದರಿಂದ ಅವರು ಪಾತ್ರಕ್ಕಾಗಿ ನಾನ್ ವೆಜ್ ತ್ಯಜಿಸಿದ್ದರು.

66
ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ ನಟ

ರಿತ್ವಿಕ್ ರಂಗಭೂಮಿ ಕಲಾವಿದರಾಗಿದ್ದು, ಸುಮಾರು 200ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ಇನ್ನು ರಿತ್ವಿಕ್ ಅವರು ರಾಯಲ್ ಮಸ್ತಾಂಗ್ ಪ್ರೊಡಕ್ಷನ್ಸ್ ಹೆಸರಿನ ನಿರ್ಮಾಣ ಸಂಸ್ಥೆಯ ಮಾಲೀಕರಾಗಿದ್ದು, ಇದರ ಮೂಲಕ ಫೀಚರ್ ಮೂವೀಗಳು, ಆರ್ಟ್ ಮೂವೀಗಳು, ಶಾರ್ಟ್ ಮೂವೀಸ್, ಡಾಕ್ಯುಮೆಂಟರಿಗಳು, ಇಂಟರ್ವ್ಯೂಗಳು, ವ್ಲಾಗ್‌ಗಳ ನಿರ್ಮಾಣ ಮಾಡುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories