ಕ್ವಾಟ್ಲೆಗಳಿಗೆ ಕ್ವಾಟ್ಲೆ ಕೊಡ್ತಿದ್ದಾರೆ ರಕ್ಷಿತಾ ಶೆಟ್ಟಿ, ಗೆಸ್ ಮಾಡೋಕಾಗ್ದೆ ಪ್ರಶಾಂತ್ ಕಂಗಾಲು

Published : Jul 08, 2026, 01:00 PM IST

Quatley Kitchen Rakshita : ಕ್ವಾಟ್ಲೆ ಕಿಚನ್ ಸೀಸನ್ 2 ನಲ್ಲಿ ರಕ್ಷಿತಾ ಹವಾ ಜೋರಾಗಿದೆ. ರಕ್ಷಿತಾ ಇದ್ದಲ್ಲೆಲ್ಲ ನಗು ಗ್ಯಾರಂಟಿ. ಶನಿವಾರದ ಎಪಿಸೋಡ್ ನಲ್ಲಿ ರಕ್ಷಿತಾ ಕೈನಲ್ಲಿ ಸಿಕ್ಕಿಬಿದ್ದ ಪ್ರಶಾಂತ್ ಸುಸ್ತಾಗಿದ್ದಾರೆ.

PREV
14
ಕ್ವಾಟ್ಲೆಗೆ ಕ್ವಾಟ್ಲೆ

ಕ್ವಾಟ್ಲೆ ಕಿಚನ್ ಸೀಸನ್ 2 ಗೆ ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಕಾಲಿಟ್ಟು ಸಾಕಷ್ಟು ಮನರಂಜನೆ ನೀಡ್ತಿದ್ದಾರೆ. ರಕ್ಷಿತಾ ಶೋನಲ್ಲಿದ್ದಾರೆ ಅಂದ್ರೆ ಫ್ಯಾನ್ಸ್ ಹೊಟ್ಟೆ ಹುಣ್ಣಾಗುವಂತೆ ನಗೋದು ಗ್ಯಾರಂಟಿ. ರಕ್ಷಿತಾ ತುಳು ಮಿಕ್ಸ್ ಕನ್ನಡ ಜಪ್ಪಯ್ಯ ಅಂದ್ರೂ ಅರ್ಥವಾಗೋದಿಲ್ಲ.

24
ರಕ್ಷಿತಾ ಮಾತು ಕೇಳಿ ಪ್ರಶಾಂತ್ ಕನ್ಫ್ಯೂಸ್

ಈ ವಾರ ರಕ್ಷಿತಾ ಜೊತೆ ಪ್ರಶಾಂತ್ ಜೋಡಿಯಾಗಲಿದ್ದಾರೆ. ಪ್ರೋಮೋದಲ್ಲಿ ಇವರ ಟಾಸ್ಕ್ ವಿಡಿಯೋ ಪೋಸ್ಟ್ ಮಾಡಲಾಗಿದೆ. ಪ್ರಶಾಂತ್ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳ್ತಾರೆ. ರಕ್ಷಿತಾ, ತಿಂಡಿ ಹೆಸರನ್ನು ಹೇಳ್ಬೇಕು. ರಕ್ಷಿತಾ ಬಾಯಿ ನೋಡಿಯೇ ಪ್ರಶಾಂತ್ ಗೆಸ್ ಮಾಡ್ಬೇಕು. ಆದ್ರೆ ರಕ್ಷಿತಾ ಹೇಳಿದ ಒಂದೂ ಹೆಸರು ಪ್ರಶಾಂತ್ ಗೆ ಗೊತ್ತಾದಂತೆ ಕಾಣ್ತಿಲ್ಲ.

34
ಫುಲ್ ಮನರಂಜನೆ

ರಕ್ಷಿತಾ, ಪ್ರಶಾಂತ್ ಗೆ ಹೋಳೋ ಸ್ಟೈಲ್ ನೋಡಿದ್ರೆ ನಗು ಬರುತ್ತೆ. ಪರಾಟಾ ಹೆಸರು ಕೇಳಿ ಕೆಟ್ಟದಾಗಿ ಬೈತಿದ್ದಾರೆ ಅಂತ ಪ್ರಶಾಂತ್ ತಲೆ ಕೆಡಿಸಿಕೊಂಡಿದ್ದಾರೆ. ರಕ್ಷಿತಾ ಸ್ವಲ್ಪ ಮಾಡಿದ್ದಲ್ಲ ಜಾಸ್ತಿಯೇ ಮಾಡಿದ್ದು ಅಂತ ಜಡ್ಜಸ್ ಅವರ ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ರಕ್ಷಿತಾ ತಮ್ಮ ಡೈಲಾಗ್ ನಲ್ಲೇ ವೀಕ್ಷಕರನ್ನು ಗೆದ್ದಿದ್ದಾರೆ.

44
ವೀಕ್ಷಕರು ಹೇಳೋದೇನು?

ಬಿಗ್ ಬಾಸ್ ನಲ್ಲಿ ರಕ್ಷಿತಾರನ್ನು ನೋಡಿ ಮೆಚ್ಚಿಕೊಂಡಿದ್ದ ವೀಕ್ಷಕರು ಇಷ್ಟು ದಿನ ಮಿಸ್ ಮಾಡಿಕೊಳ್ತಿದ್ದರು. ಈಗ ಕ್ವಾಟ್ಲೆ ಕಿಚನ್ ನಲ್ಲಿ ರಕ್ಷಿತಾ ನೋಡುವ ಅವಕಾಶ ಸಿಕ್ಕಿದೆ. ರಕ್ಷಿತಾ ಸೂಪರ್, ಅಡುಗೆ ಮಾಡೋಕೆ ಬಂದಿರುವ ರಕ್ಷಿತಾ ಕ್ವಾಟ್ಲೆಗಳಿಗೆ ಕ್ವಾಟ್ಲೆ ನೀಡ್ತಿದ್ದಾರೆ. ರಕ್ಷಿತಾ ಇದ್ದಲ್ಲಿ ಎಂಟರ್ಟೈನ್ಮೆಂಟ್ ಗ್ಯಾರಂಟಿ ಎನ್ನುವ ಕಮೆಂಟ್ ಗಳು ಬಂದಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories