ತಂದೆ ಹೆಸರಿನಲ್ಲಿ NGO ಆರಂಭಿಸಿದ ಕಿರುತೆರೆ ನಟಿ ಶ್ವೇತಾ ಪ್ರಸಾದ್

Published : Jan 17, 2023, 04:20 PM IST

 ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ತಂದೆ ಹೆಸರಿನಲ್ಲಿ ಜನ ಸೇವೆ ಮಾಡಲು ಮುಂದಾದ ಕಿರುತೆರೆ ನಟಿ ಶ್ವೇತಾ ಪ್ರಸಾದ್.... 

PREV
18
ತಂದೆ ಹೆಸರಿನಲ್ಲಿ NGO ಆರಂಭಿಸಿದ ಕಿರುತೆರೆ ನಟಿ ಶ್ವೇತಾ ಪ್ರಸಾದ್

'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ ಶ್ವೇತಾ ಪ್ರಸಾದ್ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. 

28

ರಾಧಾ ರಮಣ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಅಲ್ಲಿಂದ ಕಿರುತೆರೆ ಜರ್ನಿ ಆರಂಭಿಸಿದ ಶ್ವೇತಾ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 

38

ಕಿರುತೆರೆಗೆ ಗುಡ್ ಬೈ ಹೇಳಿದ ಶ್ವೇತಾ ತಮ್ಮದೆ ಆನ್‌ಲೈನ್‌ ಬ್ಯುಸಿನೆಸ್ ಆರಂಭಿಸಿದ್ದರು. ಎಲ್ಲವೂ ಆರ್ಗ್ಯಾನಿಕ್  ಆಗಿದ್ದು ನೂರಾರು ಗ್ರಾಹಕರ ಗಮನ ಸೆಳೆಯಿತ್ತು.

48

2023ರ ಸಂಕ್ರಾಂತಿ ಹಬ್ಬವನ್ನು ಶ್ವೇತಾ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ. ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

58

ಪೂಜೆ ಮುಗಿದ ನಂತರ ಶ್ವೇತಾ ಹೊಸ ಕೆಲಸ ಶುರು ಮಾಡಿದ್ದಾರೆ. ಅದುವೇ ತಂದೆ ಹೆಸರಿನಲ್ಲಿ ಎನ್‌ಜಿಒ ಆರಂಭಿಸಿ ಸೇವೆ ಮಾಡಲು ಮುಂದಾಗಿದ್ದಾರೆ. 

68

 'ನನ್ನ ಜೀವನದ ಸ್ಪೆಷಲ್ ದಿನ ಇದು. ಎನ್‌ಜಿಒ ಮೂಲಕ ನಾನು ಎಲ್ಲಾ ಕೆಲಸಗಳನ್ನು ಮಾಡೋಣ ಅಂದುಕೊಂಡಿದ್ದೆ ಅದರಂತೆ ಆರಂಭಿಸಿರುವೆ'

78

 'ತಂದೆ ಪ್ರಸಾದ್ ಫೌಂಡೇಷನ್‌ ಮೂಲಕ ನಾನು ಸಮಾಜ ಸೇವೆ ಮಾಡಲು ಮುಂದಾಗುತ್ತಿರುವೆ. ಅನ್ನದಾನ ಮಾಡಲು ದೇವಸ್ಥಾನಗಳಿಗೆ ದೇಣಿಗೆಗಳು ಕೊಡಬೇಕು ಎಂದು ಹೇಳಿಕೊಟ್ಟವರು ಅಪ್ಪ'

88

 'ಹಸಿವು ನೀಗಿಸಲು ಮತ್ತು ನನ್ನ ಸುತ್ತಲಿರುವವರೆಲ್ಲರನ್ನು ಸಂತೋಷವಾಗಿರಿಸಲು ಮತ್ತು ಅದು ನಿಜವಾದ ಸಂತೋಷ' ಎಂದು ಶ್ವೇತಾ ಬರೆದುಕೊಂಡಿದ್ದಾರೆ. 

Read more Photos on
click me!

Recommended Stories