ರಾಧಾ ರಮಣ ನಟಿ Kavya Gowda ಮೇಲೆ ಹಲ್ಲೆ; 5 ವರ್ಷದಿಂದ ಸಹಿಸಿಕೊಂಡು ಒಂದೇ ಮನೆಯಲ್ಲಿ ಇದ್ದಿದ್ಯಾಕೆ?

Published : Jan 27, 2026, 11:05 AM IST

Actress Kavya Gowda Family Case: ರಾಧಾ ರಮಣ ಧಾರಾವಾಹಿಯಲ್ಲಿ ಶ್ವೇತಾ ಆರ್‌ ಪ್ರಸಾದ್‌ ನಂತರ ರಾಧಾ ಮಿಸ್‌ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಕಾವ್ಯಾ ಗೌಡ ಅವರು ಇದಕ್ಕೂ ಮೊದಲು ಗಾಂಧಾರಿ, ಮೀರಾ ಮಾಧವ ಸೀರಿಯಲ್‌ಗಳಲ್ಲಿ ನಟಿಸಿದ್ದರು. ಈಗ ಇವರ ಹಾಗೂ ಪತಿ ಮೇಲೆ ಹಲ್ಲೆ ಆಗಿದೆ. 

PREV
15
ಪತಿಯ ದೊಡ್ಡ ಕುಟುಂಬ

ಕಾವ್ಯಾ ಗೌಡ ಅವರ ಜನಪ್ರಿಯತೆಯನ್ನು ಸಹಿಸಲಾಗದೆ ಈ ಹಲ್ಲೆ ಆಗಿದೆಯಂತೆ. ನಟಿ ಕಾವ್ಯಾ ಗೌಡ ಮತ್ತು ಪತಿ ಸೋಮಶೇಖರ್‌ ಅವರು ಅತ್ತೆ-ಮಾವನ ಜೊತೆ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಕೆಆರ್‌ಪುರಂನಲ್ಲಿ ಇವರ ಮನೆ ಇದೆ. ಹಾಗೆಯೇ ಕಾವ್ಯಾ ಗಂಡನ ಅಣ್ಣ ನಂದೀಶ್‌ ಕೂಡ ಇದೇ ಮನೆಯಲ್ಲಿದ್ದಾರೆ.

25
ಯಾಕೆ ಹಲ್ಲೆ ಆಯ್ತು?

ಸೋಮಶೇಖರ್ ಅವರ ಅಣ್ಣನ ಪತ್ನಿ ಅಂದರೆ ಅತ್ತಿಗೆಯ ತಂದೆಯಿಂದಲೇ ಈ ಹಲ್ಲೆಯು ನಡೆದಿದೆ ಎನ್ನಲಾಗಿದೆ. ನಟಿ ಕಾವ್ಯಾ ಗೌಡ ಜನಪ್ರಿಯತೆಯನ್ನು ಸಹಿಸದೇ ಈ ರೀತಿ ಮಾಡಿರಬಹುದು ಎಂದು ದೂರಿನಲ್ಲಿ ದಾಖಲಿಸಲಾಗಿದೆ.

35
ಯಾರು ಹಲ್ಲೆ ಮಾಡಿದ್ದು?

ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಕಾವ್ಯ ಗೌಡ ಅಕ್ಕ ಭವ್ಯ ಗೌಡ ಅವರು ದೂರು ನೀಡಿದ್ದಾರೆ. ಸೋಮಶೇಖರ್‌ ಅತ್ತಿಗೆಯ ತಂದೆ ರವಿಕುಮಾರ್ ಅವರು ಎಲ್ಲರ ಮುಂದೆ ರೇ*ಪ್‌ ಮಾಡ್ತೀನಿ ಎಂದು ಬೆದರಿಕೆ ಹಾಕಿದ್ದರಂತೆ. ನಂದಿಶ್, ಪ್ರಿಯಾ, ರವಿಕುಮಾರ್ ಎನ್ನುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಳೆದ ಐದು ವರ್ಷಗಳಿಂದ ಮನೆಯಲ್ಲಿ ಜಗಳ, ಕಲಹ ನಡೆಯುತ್ತಲೇ ಇದೆ.

45
ಕೆ ಆರ್‌ ಪುರಂನಲ್ಲಿ ವಾಸ

ಕಳೆದ ಐದು ವರ್ಷಗಳಿಂದ ಕುಟುಂಬದಲ್ಲಿ ಈ ರೀತಿ ಸಮಸ್ಯೆ ಆಗ್ತಿದೆ. ತನ್ನ ಮೇಲೆ ಆರೋಪ ಮಾಡಿದರೂ, ನಿಂದನೆ ಮಾಡಿದರೂ ಕೂಡ ಕಾವ್ಯಾ ಅವರು ತಾಳ್ಮೆಯಿಂದ ಎಲ್ಲವನ್ನು ಸಹಿಸಿಕೊಂಡು ಬಂದಿದ್ದಾರಂತೆ. ರವಿಕುಮಾರ್‌ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರೂ ಕೂಡ ಕಾವ್ಯಾ ಮಾತ್ರ ಕರ್ಮ ಎಲ್ಲವನ್ನು ನೋಡಿಕೊಳ್ಳುತ್ತದೆ, ಕೊಚ್ಚೆ ಮೇಲೆ ಕಲ್ಲು ಹಾಕೋದು ಬೇಡ ಎಂದು ಸುಮ್ಮನಿದ್ದಾರಂತೆ. ಅತ್ತೆ-ಮಾವನ ಜೊತೆ ಬದುಕೋದು ಎನ್ನುವ ಇಷ್ಟ ಎಂದು ಅವರು ಕೆ ಆರ್‌ ಪುರಂನಲ್ಲಿ ವಾಸ ಮಾಡುತ್ತಿದ್ದಾರೆ. ಇಡೀ ಕುಟುಂಬ ಕೆ ಆರ್‌ ಪುರಂನಲ್ಲಿ ವಾಸವಾಗಿದೆ. ಕೆಲಸ ಇದ್ದಾಗ ಮಾತ್ರ ಇವರು ಬೆಂಗಳೂರಿಗೆ ಬರೋದುಂಟು.

55
ಮ್ಯಾನಿಫೆಸ್ಟೇಶನ್‌ ಕ್ಲಾಸ್‌

ಕಾವ್ಯಾ ಗೌಡ ಅವರು ಕೆಲ ತಿಂಗಳುಗಳಿಂದ ಮ್ಯಾನಿಫೆಸ್ಟೇಶನ್‌ ಕ್ಲಾಸ್‌ ನಡೆಸುತ್ತಿದ್ದಾರೆ. ಮ್ಯಾನಿಫೆಸ್ಟೇಶನ್‌ ಮಾಡಿ, ಹೇಗೆ ತಾವು ಬಯಸಿದ್ದನ್ನು ಆದಷ್ಟು ಬೇಗ ಒಲಿಸಿಕೊಳ್ಳಬಹುದು ಎನ್ನೋದನ್ನು ಹೇಳುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಈಗಾಗಲೇ ಅನೇಕರಿಗೆ ತರಗತಿ ನೀಡಲಾಗಿದೆ, ಅನೇಕರು ಕಾವ್ಯಾ ಗೌಡ ಅವರ ತರಗತಿಯ ಪ್ರಯೋಜನ ಪಡೆದುಕೊಂಡಿದ್ದಾರಂತೆ. ಕರ್ಮ, ಧರ್ಮ, ದೇವರನ್ನು ನಂಬುವ ಕಾವ್ಯಾ ಅವರು ಇಷ್ಟು ದಿನಗಳಿಂದ ಸುಮ್ಮನಿದ್ದರು, ಈಗ ಕಾನೂನಿನ ಮೊರೆ ಹೋಗಿದ್ದಾರೆ.

ಮ್ಯಾನಿಫೆಸ್ಟೇಶನ್‌ ಕ್ಲಾಸ್‌ ಮಾಡಿರೋದಿಕ್ಕೆ ಇವರಿಗೆ ಪ್ರಶಸ್ತಿ ಕೂಡ ಬಂದಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories