ಗಾಂಧಾರಿ, ರಾಧಾ ರಮಣ ಸೀರಿಯಲ್‌ ನಟಿ ಕಾವ್ಯಾ ಗೌಡ, ಪತಿ ಸೋಮಶೇಖರ್‌ ಮೇಲೆ ಸಂಬಂಧಿಯಿಂದಲೇ ಹಲ್ಲೆ!

Published : Jan 27, 2026, 10:02 AM IST

ರಾಧಾ ರಮಣ ಖ್ಯಾತಿಯ ನಟಿ ಕಾವ್ಯಾ ಗೌಡ ಮತ್ತು ಅವರ ಪತಿ ಸೋಮಶೇಖರ್‌ ಮೇಲೆ ಅವರ ಸಂಬಂಧಿಕರೇ ಹಲ್ಲೆ ನಡೆಸಿದ್ದಾರೆ. ಜನಪ್ರಿಯತೆ ಸಹಿಸದೆ ಮನೆಗೆ ನುಗ್ಗಿ ಹಲ್ಲೆ, ಅ*ತ್ಯಾಚಾ*ರ ಹಾಗೂ ಕೊಲೆ ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

PREV
112

ಗಾಂಧಾರಿ, ರಾಧಾ ರಮಣ ಸೀರಿಯಲ್‌ ಮೂಲಕ ಪ್ರಖ್ಯಾತಿ ಪಡೆದಿದ್ದ ಕಿರುತೆರೆ ನಟಿ ಕಾವ್ಯಾ ಗೌಡ ಹಾಗೂ ಅವರ ಪತಿ ಸೋಮಶೇಖರ್‌ ಮೇಲೆ ಸಂಬಂಧಿಯಿಂದಲೇ ದಾರುಣವಾಗಿ ಹಲ್ಲೆಯಾಗಿದೆ.

212

ಕಾವ್ಯಾ ಗೌಡ ಅವರ ಪತಿ ಸೋಮಶೇಖರ್‌ ಅವರ ಅತ್ತಿಗೆಯ ತಂದೆಯಿಂದ ಹಲ್ಲೆ ನಡೆದಿದೆ. ನಟಿ ಕಾವ್ಯಾ ಗೌಡ ಅವರು ಗಳಿಸಿರುವ ಜನಪ್ರಿಯತೆಯನ್ನು ಸಹಿಸದೇ ಈ ಹಲ್ಲೆ ನಡೆದಿದೆ ಎಂದು ವರದಿಯಾಗಿದೆ.

312

ಸೋಮಶೇಖರ್‌ ಹಾಗೂ ಕಾವ್ಯಾ ಗೌಡ ಅವರ ಮನೆಗೆ ನುಗ್ಗಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾಗಿದೆ. ಇದೇ ವೇಳೆ ಕಾವ್ಯಾ ಗೌಡಗೆ ನಿನ್ನ ರೇ*ಪ್‌ ಮಾಡ್ತೇನೆ ಎಂದು ಬೆದರಿಸಿ ಹಲ್ಲೆ ಮಾಡಲಾಗಿದೆ.

412

ಸೋಮಶೇಖರ್‌ ಅವರಿಗೆ ಚಾಕುವಿನಿಂದ ಇರುವ ಹಲ್ಲೆ ಮಾಡಲಾಗಿದ್ದರೆ, ಕಾವ್ಯಾ ಗೌಡ ಮೇಲೆ ದಾಳಿ ಮಾಡಲಾಗಿದೆ. ಸದ್ಯಕ್ಕೆ ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

512

ಕಾವ್ಯ ಗೌಡ ಅಕ್ಕ ಭವ್ಯ ಗೌಡ ಅವರಿಂದ ರಾಮೂರ್ತಿ ನಗರ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಾಗಿದೆ. ಸೋಮಶೇಖರ್‌ ಅವರ ಅತ್ತಿಗೆಯ ತಂದೆ ರವಿಕುಮಾರ್ ವಿರುದ್ಧ ರೇ*ಪ್‌ ಮಾಡ್ತೇನೆ ಎನ್ನುವ ಬೆದರಿಕೆಯ ದೂರು ದಾಖಲಾಗಿದೆ.

612

ಇಡೀ ಪ್ರಕರಣದಿಂದ ನಟಿ ಕಾವ್ಯ ಗೌಡ ಮಾನಸಿಕವಾಗಿ ನೊಂದಿದ್ದಾರೆ. ಪ್ರೇಮ,ನಂದಿಶ್, ಪ್ರಿಯಾ, ರವಿಕುಮಾರ್ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

712

ದೂರಿನಲ್ಲಿ ಕಾವ್ಯಾ ಅವರಿಗೆ ಸೋಮಶೇಖರ್‌ ಅವರ ಅಣ್ಣನ ಹೆಂಡತಿ ಪ್ರೇಮಾ ಕಳ್ಳಿ ಕಳ್ಳಿ ಎಂದು ಕರೆದಿದ್ದರು. ಈ ಬಗ್ಗೆ ಜ.26 ರಂದು ಕಾವ್ಯಾ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಜಗಳ ವಿಕೋಪಕ್ಕೆ ಹೋಗಿ ಪ್ರೇಮಾ ಕೆನ್ನೆಗೆ ಹೊಡೆದಿದ್ದಾರೆ.

812

ಇದನ್ನು ಪ್ರಶ್ನೆ ಮಾಡಿದ್ದಕ್ಕೆ, ಇದು ನನ್ನ ಮನೆ. ನನ್ನ ಏರಿಯಾ. ನೀನು ಓಡಿ ಬಂದವಳು. ನೀನು ಊರವರ ಜೊತೆ ಮಲಗಿದ್ದೀಯ ಎಂದು ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಪ್ರೇಮಾ ಅವರ ತಂಗಿ ಪ್ರಿಯಾ ಕೂಡ ಕಾವ್ಯಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ.

912

ಬಳಿಕ ಕಾವ್ಯಾ ಅವರು ಅದೇ ದಿನ ತಮ್ಮ ಮಗಳಿಗೆ ಊಟ ಮಾಡಿಸಲು ಕಿಚನ್‌ಗೆ ತೆರಳಿದ್ದಾಗ ಪ್ರೇಮಾ ಅವರ ತಂದೆ ರವಿಕುಮಾರ್‌, ಕಾವ್ಯಾ ಅವರ ಪತಿ ಸೋಮಶೇಖರ್‌ಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ.

1012

ಕಾವ್ಯಾ ಅವರ ಕುತ್ತಿಗೆ ಹಿಡಿದು ನೂರು ಜನರ ಮುಂದೆ ನಿನ್ನ ರೇ*ಪ್‌ ಮಾಡಿ ಸಾಯಿಸ್ತೀನಿ ಎಂದು ಹೇಳಿದ್ದಲ್ಲದೆ, ಆಕೆಯ ಖಾಸಗಿ ಭಾಗಕ್ಕೆ ಒದ್ದಿದ್ದಾರೆ. ಬಳಿಕ ನಂದೀಶ್‌ ಎನ್ನುವವರು ಕಾವ್ಯಾ ಅವರ ಜುಟ್ಟು ಹಿಡಿದಿದ್ದರೆ, ಪ್ರಿಯಾ ಹಾಗೂ ಪ್ರೇಮಾ ಅವರು ಸಾಯಿಸ್ತೀನಿ ಎಂದು ಬೆದರಿಕೆ ಹಾಕಿದ್ದಾರೆ.

1112

ಈ ಹಂತದಲ್ಲಿ ರವಿಕುಮಾರ್‌ ಎನ್ನುವವರು ಸೋಮಶೇಖರ್‌ ಅವರ ಬಲಭುಜಕ್ಕೆ ತಿವಿದು ಕೊಲೆ ಮಾಡಲು ಯತ್ನಿಸಿದ್ದಾರೆ. ಈ ಹಂತದಲ್ಲಿ ಕಾವ್ಯಾ ಅವರ ಸಹೋದರಿ ಭವ್ಯಾ ಓಡಿ ಬಂದಿದ್ದು, ಈ ಹಂತದಲ್ಲಿ ರವಿಕುಮಾರ್‌ ಆಕೆಗೂ ಕೂಡ ಸಾಯಿಸ್ತೀನಿ ಎಂದು ಬೆದರಿಕೆ ಹಾಕಿದ್ದಲ್ಲದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

1212

ಕೊನೆಗೆ ಕಾವ್ಯಾ ಹಾಗೂ ಸೋಮಶೇಖರ್‌ ಅವರು ಕಾರಿನ ಡ್ರೈವರ್‌ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories