ಬಾಳ ಸಂಗಾತಿಯನ್ನು ಪರಿಚಯಿಸಿಕೊಟ್ಟ ನಟಿ ಕಾವ್ಯ ಗೌಡ; ದುಬೈನಲ್ಲಿ ಪೋಟೋ ಶೂಟ್!

Suvarna News   | Asianet News
Published : Apr 25, 2021, 09:21 AM IST

'ರಾಧ ರಮಣ' ಮತ್ತು 'ಗಾಂಧಾರಿ' ಖ್ಯಾತಿಯ ಕಾವ್ಯ ಗೌಡ ತಮ್ಮ ಬಾಳ ಸಂಗಾತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿಕೊಟ್ಟಿದ್ದಾರೆ. ಕೆಲವು ದಿನಗಳಿಂದ ದುಬೈನಲ್ಲಿ ವಾಸಿಸುತ್ತಿರುವ ಕಾವ್ಯ ಸರ್ಪ್ರೈಸ್ ಆಗಿ ತಮ್ಮ ಭಾವೀ ಪತಿಯನ್ನು ಅಭಿಮಾನಿಗಳಿಗೆ ಪರಿಚಯಿಸಿಕೊಟ್ಟಿದ್ದಾರೆ. ಹುಡುಗನ ಬಗ್ಗೆ ಹೆಚ್ಚಿನ ಮಹಿತಿ ಲಭ್ಯವಿಲ್ಲ.

PREV
16
ಬಾಳ ಸಂಗಾತಿಯನ್ನು ಪರಿಚಯಿಸಿಕೊಟ್ಟ ನಟಿ ಕಾವ್ಯ ಗೌಡ; ದುಬೈನಲ್ಲಿ ಪೋಟೋ ಶೂಟ್!

ಕನ್ನಡ ಕಿರುತೆರೆ ಮಾಧ್ಯಮದ ಜನಪ್ರಿಯ ನಟಿ ಕಾವ್ಯ ಗೌಡ ತಾವು ಮದುವೆಯಾಗುತ್ತಿರುವ ಹುಡುಗನನ್ನು ವಿಭಿನ್ನ ರೀತಿಯಲ್ಲಿ ಪರಿಚಯಿಸಿದ್ದಾರೆ.

26

ಕೆಲವು ದಿನಗಳಿಂದ ದುಬೈಗೆ ಪ್ರಯಾಣಿಸುತ್ತಿರುವುದರ ಬಗ್ಗೆ ಅಪ್ಡೇಟ್ ನೀಡುತ್ತಿದ್ದರು, ಇದೀಗ ಅಲ್ಲಿಯೇ ತಮ್ಮ ಹುಡುಗನ ಜೊತೆ ಫೋಟೋಶೂಟ್ ಮಾಡಿಸಿದ್ದಾರೆ.

36

'ನನ್ನ ಜೀವನದ ಪ್ರತಿಕ್ಷಣವನ್ನು ನಿಮ್ಮ ಜೊತೆ ಕಳೆಯಲು ತುದಿಗಾಲಿನಲ್ಲಿ ಕಾಯುತ್ತಿರುವೆ. ಇಷ್ಟು ದಿನ ನಿಮ್ಮ ಜೊತೆ ಕಳೆದ ಕ್ಷಣಗಳು ಸೂಪರ್. ನಿಮ್ಮಂಥ ಅದ್ಭುತ ವ್ಯಕ್ತಿಯನ್ನು ನಾನು ಭೇಟಿಯಾಗಿರುವುವು ನನ್ನ ಭಾಗ್ಯ' ಎಂದು ಕಾವ್ಯ ಬರೆದುಕೊಂಡಿದ್ದಾರೆ.

46

'ನಿಮ್ಮ ತಾಳ್ಮೆ, ಸಹನೆ, ಪ್ರೀತಿ ಹಾಗೂ ವಾತ್ಸಲ್ಯ ನನ್ನನ್ನು ಸದಾ ಪ್ರಪಂಚದ ಎತ್ತರದ ಸ್ಥಾನದಲ್ಲಿರುವಂತೆ ಭಾವನೆ ನೀಡುತ್ತದೆ. ಕಣ್ಣ ಮುಚ್ಚಿಕೊಂಡು ಯಾವ ಭಯವಿಲ್ಲದೆಯೂ ನಿಮ್ಮನ್ನು ನಾನು ನಂಬುತ್ತೇನೆ,' ಎಂದಿದ್ದಾರೆ

56

'ಥ್ಯಾಂಕ್ ಯು ನನ್ನ ಜೀವನನ್ನು ತುಂಬಾನೇ ಕಲರ್‌ಫುಲ್ ಮಾಡಿರುವುದಕ್ಕೆ. ಎಂಥ ಪರಿಸ್ಥಿತಿ ಎದುರಾದರೂ ನಾನು ನಿಮ್ಮ ಜೊತೆಗಿರುವೆ,' ಎಂದೂ ಹೇಳಿದ್ದಾರೆ. 

66

'ಸಾಯಿ ಬಾಬಾನನ್ನು ನಾನು ನಂಬುತ್ತೇನೆ, ನನ್ನ ಕೈ  ಎಂದೂ ಅವರು ಬಿಟ್ಟಿಲ್ಲ. ಜೀವನದಲ್ಲಿ ಒಳ್ಳೆ ಕ್ಷಣಗಳು ಬರಬೇಕೆಂದರೆ ನಾವು ಕಾಯಬೇಕು ಎನ್ನುತ್ತಾರೆ, ಕಾದ ನನಗೆ ಒಳ್ಳೆಯದೇ ಸಿಕ್ಕಿದೆ. ಈ ಪ್ರಪಂಚದಲ್ಲಿ ನೀವೇ ನನಗೆ ಬಿಗ್ ಗಿಫ್ಟ್,' ಎಂದು ಬರೆದುಕೊಂಡಿದ್ದಾರೆ.

click me!

Recommended Stories