ಪುಟ್ಟಕ್ಕನ ಮಕ್ಕಳು ಜೋಡಿ ಬೆಡ್ ರೂಮ್‌ ಸೀನ್ ಲೀಕ್: ಯಾವಾಗಪ್ಪ ನಿಜವಾಗ್ಲೂ ಮದ್ವೆಯಾಗೋದು ಕೇಳ್ತಿದ್ದಾರೆ ಫ್ಯಾನ್ಸ್!

Published : Sep 21, 2023, 04:05 PM ISTUpdated : Sep 21, 2023, 04:19 PM IST

ಬೆಂಗಳೂರು (ಸೆ.21): ಜೀ ಕನ್ನಡ ವಾಹಿನಿಯ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಪುಟ್ಟಕ್ಕನ ಮಗಳು ಸ್ನೇಹಾಳಿಗೆ ಕಂಠಿ 2ನೇ ಬಾರಿಗೆ ತಾಳಿ ಕಟ್ಟಿದ್ದಾನೆ. ಇದರ ಬೆನ್ನಲ್ಲಿಯೇ ಸ್ನೇಹಾ ಮತ್ತು ಕಂಠಿಯ ಹಳೆಯ ಬೆಡ್‌ಡರೂಂ ಸೀನ್‌ಗಳ ಫೋಟೋ ಮತ್ತು ವಿಡಿಯೋ ಹರಿದಾಡುತ್ತಿವೆ. 

PREV
19
ಪುಟ್ಟಕ್ಕನ ಮಕ್ಕಳು ಜೋಡಿ ಬೆಡ್ ರೂಮ್‌ ಸೀನ್ ಲೀಕ್: ಯಾವಾಗಪ್ಪ ನಿಜವಾಗ್ಲೂ ಮದ್ವೆಯಾಗೋದು ಕೇಳ್ತಿದ್ದಾರೆ ಫ್ಯಾನ್ಸ್!

ಜೀ ಕನ್ನಡ ವಾಹಿನಿಯ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಪುಟ್ಟಕ್ಕನ ಮಗಳು ಸ್ನೇಹಾಳಿಗೆ ಕಂಠಿ 2ನೇ ಬಾರಿಗೆ ತಾಳಿ ಕಟ್ಟಿದ್ದಾನೆ. ಇದರ ಬೆನ್ನಲ್ಲಿಯೇ ಸ್ನೇಹಾ ಮತ್ತು ಕಂಠಿಯ ಹಳೆಯ ಬೆಡ್‌ಡರೂಂ ಸೀನ್‌ಗಳ ಫೋಟೋ ಮತ್ತು ವಿಡಿಯೋ ಹರಿದಾಡುತ್ತಿವೆ. 

29

ಕನ್ನಡ ಕಿರುತೆರೆಯ ನಂಬರ್‌ ಒನ್‌ ಸ್ಥಾನವನ್ನು ಪಡೆದ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಧಾರವಾಹಿ ಕೂಡ ಒಂದಾಗಿದೆ. ಇದನ್ನು ಜನರು ಸಂಜೆ ವೇಳೆ ಟಿವಿಯಲ್ಲಿ ನೋಡುವುದು ಮಾತ್ರವಲ್ಲದೇ ಜೀ5 ಒಟಿಟಿ ಮೂಲಕ ಮುಗಿದು ಹೋದ ಅಧ್ಯಾಯಗಳನ್ನು ಮೊಬೈಲ್‌ನಲ್ಲಿ ನೋಡುತ್ತಾರೆ. 

39

ಗಂಡ ಬಿಟ್ಟು ಹೋದರೂ 3 ಹೆಣ್ಣು ಮಕ್ಕಳನ್ನು ಬೆಳೆಸಿದ ಪುಟ್ಟಕ್ಕ, ಆಕೆಯ ಮಕ್ಕಳ ಮದುವೆ ಮಾಡಿಕೊಡುವಾಗ ಪಡುವ ಕಷ್ಟಗಳನ್ನು ತೋರಿಸಲಾಗಿದೆ. ಇದರಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ ಹಾಗೂ ಊರಿನ ಶ್ರೀಮಂತೆ ಬಡ್ಡಿ ಬಂಗಾರಮ್ಮನ ಮಗ ಕಂಠಿ ಲವ್‌ಸ್ಟೋರಿ ಹಾಗೂ ಮದುವೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

49

ಪುಟ್ಟಕ್ಕನ ಮಕ್ಕಳು ಸೀರಿಯಲ್ ನಾಯಕ ಕಂಠಿ ಅಂದ್ರೆ ಸೀರಿಯಲ್ ಪ್ರಿಯರಿಗೆ ಖಂಡಿತಾ ಅಚ್ಚುಮೆಚ್ಚು. ಪುಟ್ಟಕ್ಕನ ಮಕ್ಕಳು ಸೀರಿಯಲ್ (Puttakkana Makkalu Serial) ಖ್ಯಾತಿಯ ನಟ ಶ್ರೀ, ಕಂಠಿ ಸದ್ಯ ಕಿರುತೆರೆಯ ಜನಪ್ರಿಯ ನಟ ಜೊತೆಗೆ ಹೆಂಗಳೆಯರ ಫೆವರೆಟ್ ಹೀರೋ ಆಗಿದ್ದಾನೆ. 
 

59

ಸ್ನೇಹಾ ಮತ್ತು ಕಂಠಿಯ ಬೆಡ್‌ರೂಮ್‌ ಸೀನ್‌ ವೀಡಿಯೋವನ್ನು ಜಾಹೀರಾತು ಶೂಟಿಂಗ್‌ ಮಾಡಿದ್ದು ಎಂದು ತಿಳಿದುಬಂದಿದೆ. ಇದರಲ್ಲಿ ಧನುಷ್‌ ಹಾಗೂ ಸಂಜನಾ ಬುರ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.

ವೀಡಿಯೋಗಾಗಿ ಲಿಂಕ್‌ ನೋಡಿ: ಪುಟ್ಟಕ್ಕನ ಮಗಳಿಗೆ 2ನೇ ಬಾರಿ ತಾಳಿ ಕಟ್ಟಿದ ಬೆನ್ನಲ್ಲೇ ಸ್ನೇಹಾ-ಕಂಠಿ ಹಳೆಯ ಬೆಡ್‌ರೂಮ್‌ ಸೀನ್‌ ಲೀಕ್!

69

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮಿಸ್ಸು, ಮಿಸ್ಸು ಎನ್ನುತ್ತಲೇ ಖ್ಯಾತಿ ಗಳಿಸಿದ ನಾಯಕ ಕಂಠಿ ಅಲಿಯಾಸ್‌ ಧನುಷ್‌ ಇಂಜಿನಿಯರಿಂಗ್‌ ಪದವೀಧರ. ಹಲವು ವರ್ಷಗಳಿಂದ ಬಣ್ಣ ಹಚ್ಚಬೇಕು ಎಂದು ಕನಸು ಕಂಡಿದ್ದ ಧನುಷ್‌ಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪಾತ್ರ ಸಿಕ್ಕಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

79

ಹೈಸ್ಕೂಲ್‌ನಿಂದಲೇ ನಟಿಯಾಗಬೇಕು ಎಂಬ ಕನಸು ಹೊಂದಿದ್ದಳು. ಒಂದು ವೇಳೆ ನಟಿಯಾಗದಿದ್ದರೆ ನಿಜ ಜೀವನದಲ್ಲಿಯೂ ನಾನು ಐಎಎಸ್‌ ಅಧಿಕಾರಿ ಆಗಬೇಕು ಎಂಬ ಕನಸನ್ನು ಕಂಡಿದ್ದಳಂತೆ. ಈಗ ಧಾರಾವಾಹಿಯಲ್ಲಾದರೂ ಈ ಕನಸು ನನಸಾಗುತ್ತಾ ನೋಡಬೇಕು.

89

ಪುಟ್ಟಕ್ಕನ 2ನೇ ಮಗಳಾಗಿ ಕಾಣಿಸಿಕೊಂಡಿರುವ ಸ್ನೇಹಾ ಧಾರಾವಾಹಿಯಲ್ಲಿ ಐಎಎಸ್‌ ಮಾಡುವ ಕನಸು ಕಂಡಿದ್ದಾಳೆ. ಆದರೆ, ನಿಜ ಜೀವನದಲ್ಲಿ ಇಂಜಿನಿಯರಿಂಗ್‌ ಪದವೀಧರೆ ಆಗಿದ್ದಾಳೆ. ಧಾರಾವಾಹಿ ನಟನೆ ಜೊತೆಗೆ ಇಂಜಿನಿಯರಿಂಗ್‌ ಪದವಿಯಲ್ಲೂ ಉತ್ತಮ ಅಂಕ ಗಳಿಸಿದ್ದಾಳೆ.
 

99

ಹೈಸ್ಕೂಲ್‌ನಿಂದಲೇ ನಟಿಯಾಗಬೇಕು ಎಂಬ ಕನಸು ಹೊಂದಿದ್ದಳು. ಒಂದು ವೇಳೆ ನಟಿಯಾಗದಿದ್ದರೆ ನಿಜ ಜೀವನದಲ್ಲಿಯೂ ನಾನು ಐಎಎಸ್‌ ಅಧಿಕಾರಿ ಆಗಬೇಕು ಎಂಬ ಕನಸನ್ನು ಕಂಡಿದ್ದಳಂತೆ. ಈಗ ಧಾರಾವಾಹಿಯಲ್ಲಾದರೂ ಈ ಕನಸು ನನಸಾಗುತ್ತಾ ನೋಡಬೇಕು.

Read more Photos on
click me!

Recommended Stories