'ಇವರು ನನ್ನ ಹಾರ್ಟ್ ಕದ್ದವರು': ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಮಾನಸಿ ವಾಸುದೇವ್

Published : Sep 21, 2023, 08:14 AM IST

ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಮಾನಸಿ ಅವರು ಮದುವೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಠ ಸಿನಿಮಾದಲ್ಲಿ ಗುರುತಿಸಿಕೊಳ್ಳುವಂತಹ ಪಾತ್ರ ಮಾಡಿದ್ದ ಮಾನಸಿ, ಡಾನ್ಸರ್ ಕೂಡ ಹೌದು. ಜೊತೆಗೆ ಗುಪ್ತಗಾಮಿನಿ ಧಾರಾವಾಹಿಯು ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.

PREV
15
'ಇವರು ನನ್ನ ಹಾರ್ಟ್ ಕದ್ದವರು': ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಮಾನಸಿ ವಾಸುದೇವ್

ಗುಪ್ತಗಾಮಿನಿ, ಭೃಂಗದ ಬೆನ್ನೇರಿ  ಮುಂತಾದ ಅನೇಕ ಧಾರಾವಾಹಿಗಳಲ್ಲಿ ಮತ್ತು ಕನ್ನಡ ಸಿನಿಮಾ ನಟಿಸಿರುವ ಮಾನಸಿ ವಾಸುದೇವ್ ಅವರು ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತುಂಬ ಸರಳವಾಗಿ ಈ ಮದುವೆ ನಡೆದಿದೆ. 

25

ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡು ಮಾನಸಿ ಅವರು ಮದುವೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಠ ಸಿನಿಮಾದಲ್ಲಿ ಗುರುತಿಸಿಕೊಳ್ಳುವಂತಹ ಪಾತ್ರ ಮಾಡಿದ್ದ ಮಾನಸಿ, ಡಾನ್ಸರ್ ಕೂಡ ಹೌದು. ಜೊತೆಗೆ ಗುಪ್ತಗಾಮಿನಿ ಧಾರಾವಾಹಿಯು ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.

35

ಮಾನಸಿ ತಮ್ಮ ಮದುವೆಯಾದ ಫೋಟೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿದ್ದು, ಆದಿತ್ಯ ದೊಡ್ಡನವರ್ ಜೊತೆ ಮದುವೆ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ‘ಇವರು ನನ್ನ ಹಾರ್ಟ್ ಕದ್ದವರು. ಇವರ ಕೊನೆಯ ಹೆಸರನ್ನು ನಾನು ಪಡೆದುಕೊಳ್ಳುತ್ತಿದ್ದೇನೆ’ ಎಂದು ಮಾನಸಿ ಬರೆದುಕೊಂಡಿದ್ದಾರೆ.  

45

ಪತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳದ ಅವರು, ಮದುವೆಯಾಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಬೃಂಗದ ಬೆನ್ನೇರಿ, ನೇತ್ರಾವತಿ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ಮಾನಸಿ, ಸಿನಿಮಾ ರಂಗದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. 

55

ಮಾನಸಿ ಅವರು ಆದಿತ್ಯ ದೊಡ್ಡನವರ್ ಅವರನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ. ಆದಿತ್ಯ ಯಾರು? ಇದು ಅರೇಂಜ್ ಮ್ಯಾರೇಜ್? ಲವ್ ಮ್ಯಾರೇಜ್ ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

Read more Photos on
click me!

Recommended Stories