ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹಿರಿಯ ನಟಿ ಉಮಾಶ್ರೀ ಕೂಡ ನಟಿಸುತ್ತಿದ್ದಾರೆ. ಮೂವರು ಹೆಣ್ಣು ಮಕ್ಕಳ ತಾಯಿ ಪಾತ್ರದಲ್ಲಿ ಉಮಾಶ್ರೀ ಬಮ್ಣ ಹಚ್ಚಿದ್ದಾರೆ. ಧಾರಾವಾಹಿಯ ನಾಯಕ ಕಂಠಿ ತಾಯಿ ಪಾತ್ರದಲ್ಲಿ ಮಂಜುಭಾಷಿಣಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಕುತೂಹಲಗಳೊಂದಿಗೆ ಮುಂದೆ ಸಾಗುತ್ತಿರುವ ಈ ಧಾರಾವಾಗಿಯಲ್ಲಿ ಕಂಠಿ ಮತ್ತು ಸ್ನೇಹಾನಿಗೆ ಯಾವಾಗ ಪ್ರೀತಿಯಾಗುತ್ತೆ, ಬಂಗಾರಮ್ಮನ ಮಗನೇ ಕಂಠಿ ಎನ್ನುವ ಸತ್ಯ ಸ್ನೇಹಳಿಗೆ ಯಾವಾಗ ಗೊತ್ತಾಗುತ್ತೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.