Sowmya Siri Mendan Engagement: 4 ವರ್ಷ ಪ್ರೀತಿಸಿ ನಟನನ್ನೇ ಮದುವೆಯಾಗಲು ರೆಡಿಯಾದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ!

Published : Jun 25, 2025, 07:30 AM ISTUpdated : Jun 25, 2025, 10:52 AM IST

ಶುರು ಆದಾಗಿನಿಂದ ಟಾಪ್‌ ಸ್ಥಾನದಲ್ಲಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದ ಬಂಗಾರಮ್ಮನ ಮಗಳು ವಸು ಪಾತ್ರದಲ್ಲಿ ಸೌಮ್ಯಾ ಮೆಂಡನ್‌ ನಟಿಸುತ್ತಿದ್ದಾರೆ, ಈಗ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

PREV
110

ವಸು ಪಾತ್ರಧಾರಿ ಸೌಮ್ಯಾ ಮೆಂಡನ್‌ ( ಸಿರಿ ) ಅವರು ಸೋಶಿಯಲ್‌ ಮೀಡಿಯಾದಲ್ಲಿ ನಿಶ್ಚಿತಾರ್ಥದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು.

210

ಸೌಮ್ಯಾ ಮೆಂಡನ್‌ ಅವರು ಈ ಹಿಂದೆ ಕನ್ನಡದಲ್ಲಿಯೇ ಗೀತಾ, ಕಾವೇರಿ ಕನ್ನಡ ಮೀಡಿಯಂ, ಪಾರು ಮುಂತಾದ ಧಾರಾವಾಹಿ, ಸಿನಿಮಾಗಳಲ್ಲಿಯೂ ನಟಿಸಿದ್ದರು.

310

ಕನ್ನಡ ಧಾರಾವಾಹಿಗಳ ಜೊತೆಯಲ್ಲಿ, ಸಿನಿಮಾದಲ್ಲಿ ನಟಿಸಿದ್ದಾರೆ. ಅಂದಹಾಗೆ ತುಳು ರಂಗದಲ್ಲಿಯೂ ಸೌಮ್ಯಾ ಮೆಂಡನ್‌ ಅವರು ಸಕ್ರಿಯವಾಗಿದ್ದಾರೆ.

410

ಸುವೇದ್‌ ದಾಸ್‌ ಕೂಡ ನಟರಾಗಿದ್ದು, ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರ ಜೊತೆ ಸೌಮ್ಯಾ ಎಂಗೇಜ್‌ ಆಗಿದ್ದಾರೆ.

510

ಸೌಮ್ಯಾ ಮೆಂಡನ್‌ ಹಾಗೂ ಸುವೇದ್‌ ದಾಸ್‌ ಅವರು ಬೆಂಗಳೂರಿನಲ್ಲಿಯೇ ಪರಿಚಯ ಆಗಿದ್ದರು. ನಾಲ್ಕು ವರ್ಷಗಳ ಹಿಂದೆಯೇ ಇವರಿಬ್ಬರಿಗೆ ಪರಿಚಯ ಆಗಿ ಪ್ರೀತಿ ಹುಟ್ಟಿಕೊಂಡಿತ್ತು.

610

ಒಟ್ಟಾರೆಯಾಗಿ ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಈ ಜೋಡಿ ಈಗ ನಿಶ್ಚಿತಾರ್ಥ ಮಾಡಿಕೊಂಡಿದೆ. ಸೌಮ್ಯಾ ಊರು ಉಡುಪಿಯ ಇವರ ಮನೆಯಲ್ಲಿ ನಿಶ್ಚಿತಾರ್ಥ ನಡೆದಿದೆ.

710

ಸುವೇದ್‌ ದಾಸ್‌ ಹಾಗೂ ಸೌಮ್ಯಾ ಮೆಂಡನ್‌ ಅವರ ಪ್ರೀತಿಯನ್ನು ಮನೆಯವರು ಒಪ್ಪಿದ್ದಾರೆ. ಹೀಗಾಗಿ ಇದು ಲವ್‌ ಕಮ್‌ ಅರೇಂಜ್‌ ಮ್ಯಾರೇಜ್‌.

810

ಸುವೇದ್‌ ದಾಸ್‌ ಅವರು ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ನಟಿಸಿದ್ದರು. ಇದು ಉದಯ ವಾಹಿನಿಯಲ್ಲಿ ಪ್ರಸಾರ ಆಗಿತ್ತು.

910

ಸುವೇದ್‌ ದಾಸ್‌ ಹಾಗೂ ಸೌಮ್ಯಾ ಮೆಂಡನ್‌ ಅವರ ಮದುವೆ ಮುಂಬರುವ ಡಿಸೆಂಬರ್‌ನಲ್ಲಿ ನಡೆಯಲಿದೆಯಂತೆ, ಹೀಗಾಗಿ ಈ ಜೋಡಿ ಫುಲ್‌ ಖುಷಿಯಲ್ಲಿದೆ.

1010

ಸುವೇದ್‌ ಹಾಗೂ ಸೌಮ್ಯಾ ಜೋಡಿಗೆ ಅನೇಕರು ಶುಭಾಶಯ ತಿಳಿಸುತ್ತಿದ್ದಾರೆ. 

Read more Photos on
click me!

Recommended Stories