'ಭರ್ಜರಿ ಬ್ಯಾಚುಲರ್ಸ್'ನಲ್ಲಿ ಜಡ್ಜಸ್ ಬಳಿ ಸೈ ಎನಿಸಿಕೊಂಡ ಜೂನಿಯರ್ ಬುಲೆಟ್

Published : Jun 24, 2025, 11:14 AM IST

ಸದ್ಯ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಯಾವ ಸ್ಪರ್ಧಿಗಳು ವಿನ್‌ ಆಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಏಕೆಂದರೆ ಪ್ರತಿಯೊಬ್ಬರು ಪ್ರತಿ ಟಾಸ್ಕ್‌ನಲ್ಲಿ ಭರ್ಜರಿಯಾಗಿಯೇ ವೀಕ್ಷರಿಗೆ ಮನರಂಜನೆ ನೀಡುತ್ತಿದ್ದಾರೆ.

PREV
16
ಜುಗಲ್ ಬಂದಿ

ವಾರದಿಂದ ವಾರಕ್ಕೆ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ (Bharjari Bachelors Season 2) ರಿಯಾಲಿಟಿ ಶೋ ಕಳೆಗಟ್ಟುತ್ತಿದೆ. ಈ ವಾರ ಶೋನಲ್ಲಿ ಲವ್ ಕೆಮಿಸ್ಟ್ರಿ ರೌಂಡ್ ಇತ್ತು. ಸ್ಪರ್ಧಿಗಳ ನಡುವೆ ಜುಗಲ್ ಬಂದಿಯೂ ಇತ್ತು. ಅಂದಹಾಗೆ ರಕ್ಷಕ್-ರಮೋಲಾಗೆ ಎದುರಾಳಿಯಾಗಿ ಸುಕೃತಾ ನಾಗ್ ಹಾಗೂ ಪ್ರವೀಣ್​ ಡ್ಯಾನ್ಸ್ ಮಾಡಿದರು.

26
ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಸಾಂಗ್

ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಮಲ್ಲ ಸಿನಿಮಾದ ಸೂಪರ್ ಹಿಟ್​ "ಯಮ್ಮೋ ಯಮ್ಮೋ.." ಹಾಡಿಗೆ ಸುಕೃತಾ-ಪ್ರವೀಣ್ ಭರ್ಜರಿ ಡ್ಯಾನ್ಸ್ ಮಾಡಿದರೆ, ರಕ್ಷಕ್-ರಮೋಲಾ ಪ್ರೇಮಲೋಕ ಸಿನಿಮಾದ "ಪ್ರೀತಿಯಲ್ಲಿ ಇರೊ ಸುಖ ಗೊತ್ತೇ ಇರಲಿಲ್ಲ.." ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದರು. ಆದರೆ ಇದರಲ್ಲಿ ಜಡ್ಜಸ್ ಬಳಿ ಸೈ ಎನಿಸಿಕೊಂಡವರು ರಕ್ಷಕ್-ರಮೋಲಾ.

36
ಮೆಚ್ಚುಗೆ ವ್ಯಕ್ತಪಡಿಸಿದ ರಚಿತಾ

ರವಿಚಂದ್ರನ್ ಹಾಗೂ ರಚಿತಾ ಅವರು ರಕ್ಷಕ್-ರಮೋಲಾ ಡಾನ್ಸ್ ಮಾತ್ರವಲ್ಲ, ಇಬ್ಬರ ಕೆಮಿಸ್ಟ್ರಿಯನ್ನು ಮೆಚ್ಚಿ ಹಾಡಿ ಹೊಗಳಿದರು. ಸೆಟ್, ಕಾಸ್ಟ್ಯೂಮ್, ಕೆಮಿಸ್ಟ್ರಿಯನ್ನು ಮೆಚ್ಚಿ ಕ್ರೇಜಿಸ್ಟಾರ್ ನೀವೇ ಬೆಸ್ಟ್ ಎಂದರೆ, "ಶೋಗೆ ಬಂದ ಮೇಲೆ ರಕ್ಷಕ್ ಕೂಡ ಸಾಕಷ್ಟು ಬದಲಾಗಿದ್ದಾರೆ" ಎಂದು ರಚಿತಾ ಹಾಡಿಹೊಗಳಿ, ತಮ್ಮ ಬಳಿ ಕರೆದು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ರಕ್ಷಕ್ ಜೋಡಿ ರಮೋಲಾ ಇದರಲ್ಲಿ ತಮ್ಮ ಪಾತ್ರ ಎಷ್ಟರಮಟ್ಟಿಗಿದೆ, ರಕ್ಷಕ್‌ ಅನ್ನು ಹೇಗೆ ತಿದ್ದಿ ತೀಡಿದ್ದೇನೆ, ರೊಮ್ಯಾನ್ಸ್ ಕಲಿಸಿದ್ದೇನೆ ಎಂಬುದನ್ನು ಹೇಳುತ್ತಾ ವೇದಿಕೆ ಮೇಲಿದ್ದ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು.

46
ಯಾರು ವಿನ್‌ ಆಗಬಹುದು?

ಸದ್ಯ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಯಾವ ಸ್ಪರ್ಧಿಗಳು ವಿನ್‌ ಆಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಏಕೆಂದರೆ ಪ್ರತಿಯೊಬ್ಬರು ಪ್ರತಿ ಟಾಸ್ಕ್‌ನಲ್ಲಿ ಭರ್ಜರಿಯಾಗಿಯೇ ವೀಕ್ಷರಿಗೆ ಮನರಂಜನೆ ನೀಡುತ್ತಿದ್ದಾರೆ. ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಸದ್ದು ಮಾಡಿದ್ದ ರಕ್ಷಕ್ ಬುಲೆಟ್ ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ಗೆ ಸಖತ್ ಆಗಿ ಎಂಟ್ರಿಕೊಟ್ಟಿದ್ದಾರೆ. ರಕ್ಷಕ್‌ಗೆ ಜೋಡಿಯಾಗಿ ಕನ್ನಡತಿ ಸೀರಿಯಲ್ ಖ್ಯಾತಿ ರಮೋಲಾ ಕಾಣಿಸಿಕೊಂಡಿದ್ದಾರೆ.

56
ವಿಭಿನ್ನ ಕಾನ್ಸೆಪ್ಟ್‌

ಕಳೆದ ಸೀಸನ್‌ನಲ್ಲಿ 'ಭರ್ಜರಿ ಬ್ಯಾಚುಲರ್ಸ್'ಯಶಸ್ವಿಯಾಗಿತ್ತು. ಈ ರಿಯಾಲಿಟಿ ಶೋ ನೋಡುವುದಕ್ಕೆ ವೀಕ್ಷಕರು ಪ್ರತಿ ವಾರ ಕಾಯುತ್ತಲೇ ಇರುತ್ತಾರೆ. ಈ ಬಾರಿ ಸಹ ವಿಭಿನ್ನ ಕಾನ್ಸೆಪ್ಟ್‌ಗಳೊಂದಿಗೆ ಎಂಟರ್ಟೈನಿಂಗ್ ಆಗಿ ವೀಕ್ಷಕರ ಮುಂದೆ ಬಂದಿದೆ 'ಭರ್ಜರಿ ಬ್ಯಾಚುಲರ್ಸ್'. ಶನಿವಾರ &ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿರುವ ಈ ಶೋನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಚಿತಾ ರಾಮ್ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.

66
ಇಲ್ಲಿದೆ ನೋಡಿ ವಿಡಿಯೋ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories