‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಕಂಠಿ ಪಾತ್ರದ ಮೂಲಕ ಜನಪ್ರಿಯತೆ ಪಡೆದಿದ್ದ ನಟ ಧನುಷ್ ಇದೀಗ ಉದಯ ಟಿವಿಯ ‘ಮೈನಾ’ ಧಾರಾವಾಹಿಯಲ್ಲಿನ ರೋಚಕ ಸಂಚಿಕೆಯಲ್ಲಿ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿಯಲ್ಲಿ ಕಂಠಿಯ ಸಡನ್ ಎಂಟ್ರಿ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಮೈನಾ ಧಾರಾವಾಹಿಯಲ್ಲಿ ಇದೀಗ ದೊಡ್ಡದೊಂದು ತಿರುವು ಬಂದಿದ್ದು, ಸೀರಿಯಲ್ ಗೆ ಮಾಸ್ ಆಗಿ ಎಂಟ್ರಿ ಕೊಟ್ಟ ತಾಂಡವ್ ನೋಡಿ ಅಭಿಮಾನಿಗಳಂತೂ ಸಿಕ್ಕಾಪಟ್ಟೆ ಖುಷಿ ಪಟ್ಟಿದ್ದಾರೆ.
26
ಯಾರಿದು ತಾಂಡವ್
ಅಂದ ಹಾಗೆ 'ಮೈನಾ’ ಧಾರಾವಾಹಿಯಲ್ಲಿ ರೋಚಕ ಸಂಚಿಕೆಯೊಂದರಲ್ಲಿ ತಾಂಡವ್ ಪಾತ್ರದ ಮೂಲಕ ಎಂಟ್ರಿ ಕೊಟ್ಟವರು ಬೇರೆ ಯಾರೂ ಅಲ್ಲ, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಕಂಠಿ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟ ಧನುಷ್.
36
ಸವಾಲ್ ಹಾಕೋಕೆ ಮಾಸ್ ಎಂಟ್ರಿ ಕೊಟ್ಟ ಧನುಷ್
ಧನುಷ್ ಅವರು ತಾಂಡವ್ ಪಾತ್ರದಲ್ಲಿ ಧ್ರುವ ಮತ್ತು ಪುಷ್ಪಕ್ ಜೊತೆ ಪೈಪೋಟಿ ನೀಡೋದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೊಂದು ಅತಿಥಿ ಪಾತ್ರವಾಗಿದ್ದು, ಪ್ರೊಮೋ ರಿಲೀಸ್ ಆಗಿದ್ದು, ಧನುಷ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಧನುಷ್ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಕಂಠಿ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಧಾರಾವಾಹಿ ಬಳಿಕ ಬೇರೆ ಯಾವ ಧಾರಾವಾಹಿಯಲ್ಲೂ ಧನುಷ್ ನಟಿಸಿರಲಿಲ್ಲ. ನಟರನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದರು.
56
ಸಿನಿಮಾಗೆ ಎಂಟ್ರಿ ಕೊಟ್ಟ ಧನುಷ್
ಕಿರುತೆರೆ ಹೀರೋ ಧನುಷ್, ಸದ್ಯದಲ್ಲೇ ನಾಯಕನಾಗಿ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಬಂಡೆಕಾಳಿ ದೇವಸ್ಥಾನದಲ್ಲಿ ಸಿನಿಮಾ ಮುಹೂರ್ತ ಅದ್ಧೂರಿಯಾಗಿ ನಡೆದಿದೆ. ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಪ್ರೊಡಕ್ಷನ್ ನಂ 2ʼ ಹೆಸರಿನಲ್ಲಿ ಮುಹೂರ್ತ ಸಮಾರಂಭ ನೆರವೇರಿತ್ತು.
66
ಧನುಷ್ ಗೆ ನಾಯಕಿಯಾದ ಮನಸ್ವಿ
ಧನುಷ್ ಅವರಿಗೆ ಕನ್ನಡ ಕಿರುತೆರೆಯ ಮತ್ತೊಬ್ಬ ನಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೈ ಲಲಿತಾ’ ಧಾರಾವಾಹಿ ನಾಯಕಿ ಲಲಿತಾ ಪಾತ್ರಧಾರಿ ಮನಸ್ವಿ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.