ಕನ್ನಡ ಕಿರುತೆರೆಯ ತಾರಾ ಜೋಡಿಗಳಾದ ಐಶ್ವರ್ಯ ಸಾಲಿಮಠ್ ಮತ್ತು ವಿನಯ್ ದಂಪತಿಗಳು, ಇದೀಗ ಮಕ್ಕಳಿಗೆ ಆರು ತಿಂಗಳು ತುಂಬಿದ ಬಳಿಕ ವಿಶೇಷ ದಿನದಂದು ಮಕ್ಕಳ ಮುಖವನ್ನು ರಿವೀಲ್ ಮಾಡಿದ್ದಾರೆ. ಮುದ್ದಾದ ವಿಡೀಯೋ ಮೂಲಕ ಜೋಡಿ ಮಕ್ಕಳ ಪರಿಚಯ ಮಾಡಿಸಿದ್ದಾರೆ.
ಕನ್ನಡ ಕಿರುತೆರೆಯ ತಾರಾ ಜೋಡಿಗಳಾದ ಐಶ್ವರ್ಯ ಸಾಲಿಮಠ್ ಮತ್ತು ವಿನಯ್ ಜೋಡಿ , ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಅವಳಿ ಮಕ್ಕಳಿಗೆ ಪೋಷಕರಾಗಿ ಭಡ್ತಿ ಪಡೆದಿದ್ದರು. ಮಾರ್ಚ್ ತಿಂಗಳಲ್ಲಿ ಮಕ್ಕಳನ್ನು ತೋರಿಸದೇ ಕೇವಲ ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದ ಜೋಡಿ, ಇದೀಗ ಜೂ. 27ರಂದು, ತಮ್ಮ ಬದುಕಿನ ವಿಶೇಷ ದಿನದಂದು, ತಮ್ಮ ಇಬ್ಬರು ಮುದ್ದು ಮಕ್ಕಳ ಮುಖವನ್ನು ಮುದ್ದಾದ ವಿಡೀಯೋ ಮೂಲಕ ರಿವೀಲ್ ಮಾಡಿ, ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
26
ಐಶ್ವರ್ಯ ವಿನಯ್ ಸೋಶಿಯಲ್ ಮೀಡೀಯಾ ಪೋಸ್ಟ್
June 27th 2016 ನಮ್ಮ ಮೊದಲ ಧಾರಾವಾಹಿ “ಮಹಾಸತಿ” ಯ ಮೊದಲ ಸಂಚಿಕೆ ಪ್ರಸಾರವಾದ ದಿನ… ನಾವು ನಿಮಗೆ ಕಲಾವಿದರಾಗಿ ಪರಿಚಯವಾದ ದಿನ.. ಇವತ್ತಿಗೆ 10 ಅಮೋಘ ವರ್ಷ ಪೂರೈಸಿದ್ದೇವಿ...ಈ ದಿನ , ನಿಮಗೆ ನಮ್ಮ ಮಕ್ಕಳನ್ನು ಪರಿಚಯಿಸುತ್ತಿದ್ದೇವೆ …ಅವರ ಮೇಲೆ ನಿಮ್ಮ ಪ್ರೀತಿ ಆಶೀರ್ವಾದ ಸದಾ ಇರಲಿ ಅವರಿಬ್ಬರಿಗೂ ದೃಷ್ಟಿ ಆಗದೆ ಇರೋ ಥರ ನೋಡ್ಕೊಳೋ ಜವಾಬ್ದಾರಿ ಕೂಡ ನಿಮ್ಮದೇ ಎಂದಿದ್ದಾರೆ ಐಶ್ವರ್ಯ
36
10 ವರ್ಷ ಬೆಂಬಿಲಿಸಿದ್ದಕ್ಕಾಗಿ ಥ್ಯಾಂಕ್ಯೂ
10 ವರ್ಷಗಳ ಕಾಲ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಆಶೀರ್ವದಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮೆಲ್ಲರಿಗೂ ಎಂದೆಂದಿಗೂ ಕೃತಜ್ಞರಾಗಿರುತ್ತೇವೆ. ನಿಮ್ಮೆಲ್ಲರನ್ನೂ ಎಂದೆಂದಿಗೂ ರಂಜಿಸುವುದಾಗಿ ನಾವು ಭರವಸೆ ನೀಡುತ್ತೇವೆ. ಎಂದು ಐಶ್ವರ್ಯ ಮತ್ತು ವಿನಯ್ ಮುದ್ದಾದ ವಿಡೀಯೋ ಶೇರ್ ಮಾಡಿ ಮಕ್ಕಳಾದ ವಜ್ರ ಮತ್ತು ವೈಢೂರ್ಯ ಫೋಟೊ ರಿವೀಲ್ ಮಾಡಿದ್ದಾರೆ.
ನಟಿ ಐಶ್ವರ್ಯ ಸಾಲಿಮಠ ‘ಅಗ್ನಿಸಾಕ್ಷಿ’, ‘ರಾಮಾಚಾರಿ’ , ‘ಸೇವಂತಿ’ ‘ಸರಯೂ’, ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವರ ಪತಿ ವಿನಯ್ ಜು ಕೂಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿದ್ದಾರೆ.
56
ಡಿಸೆಂಬರ್ ತಿಂಗಳಲ್ಲಿ ಮಕ್ಕಳ ಜನನ
ಈ ಜೋಡಿ ನವಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ಮಾಡಿಕೊಂಡಿದ್ದರು. ಡಿಸೆಂಬರ್ ತಿಂಗಳಲ್ಲಿ ಐಶ್ವರ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಕೆಲವು ಸಮಯದ ಹಿಂದೆ ವಿಡೀಯೋ ಮಾಡಿ ತಮಗೆ ಒಂದು ಗಂಡು ಮತ್ತು ಮತ್ತೊಂದು ಹೆಣ್ಣು ಮಗು ಹುಟ್ಟಿರುವುದಾಗಿ ರಿವೀಲ್ ಮಾಡಿದ್ದರು. ಬಳಿಕ ಇನ್’ಸ್ಟಾಗ್ರಾಂನಲ್ಲಿ ಮಕ್ಕಳ ನಾಮಕರಣದ ವಿಡಿಯೋ ರಿಲೀಸ್ ಮಾಡಿ ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದರು.
66
ವಿನಯ್ ಮತ್ತು ಐಶ್ವರ್ಯ ಪ್ರೀತಿ
ವಿನಯ್ ಮತ್ತು ಐಶ್ವರ್ಯ ‘ಮಹಾಸತಿ’ ಧಾರಾವಾಹಿ ಶೂಟಿಂಗ್‌ನಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಆ ಧಾರಾವಾಹಿಯಲ್ಲಿ ವಿನಯ್ ಹೀರೋ ಆಗಿದ್ದರು. ಬಳಿಕ ವಿನಯ್ ಹಾಗೂ ಐಶ್ವರ್ಯಾ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಅವರ ಸ್ನೇಹ ಗಟ್ಟಿಯಾಗಿ ಪ್ರೀತಿಗೆ ತಿರುಗಿತ್ತು. ಮೂಲತಃ ಉತ್ತರ ಕರ್ನಾಟಕದವರಾದ ಈ ಜೋಡಿ ಕುಟುಂಬದವರ ಒಪ್ಪಿಗೆ ಪಡೆದು 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.