ಧಾರಾವಾಹಿಗೆ ಗುಡ್ ಬೈ, ಮನಾಲಿಯ ಹಿಡಿಂಬಾ ಮಂದಿರದ ಮುಂದೆ ನಿಂತು ‘ತತ್ವಮಸಿ’ ಎಂದ ಸಂಜನಾ ಬುರ್ಲಿ!

First Published | Nov 15, 2024, 8:49 AM IST

ಪುಟ್ಟಕ್ಕನ ಮಕ್ಕಳು ಖ್ಯಾತಿಯ ಡಿಸಿ ಸ್ನೇಹಾ ಅಂದ್ರೆ ಸಂಜನಾ ಬುರ್ಲಿ ಇದೀಗ ಮನಾಲಿಯಲ್ಲಿ ಎಂಜಾಯ್ ಮಾಡುತ್ತಿದ್ದು, ಸೋಶಿಯಲ್ ಮೀಡೀಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದಾರೆ. 
 

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು (Puttakkana Makkalu), ಇದರ ಪ್ರಮುಖ ಪಾತ್ರ ಅಂದ್ರೆ ಸ್ನೇಹಾ. ಛಲಗಾರ್ತಿ ಹೆಣ್ಣಾಗಿ, ಅಮ್ಮನ ಕಷ್ಟಗಳಿಗೆ ನೆರವಾಗಿ, ಕಷ್ಟಪಟ್ಟು ಕಲಿತು ಡಿಸಿಯಾದ ಸ್ನೇಹಾ ಎನ್ನುವ ಸ್ಟ್ರಾಂಗ್ ಪಾತ್ರ ಜನರಿಗೆ ತುಂಬಾನೆ ಇಷ್ಟವಾಗಿತ್ತು. ಈ ಪಾತ್ರದಲ್ಲಿ ನಟಿ ಸಂಜನಾ ಬುರ್ಲಿ ಅದ್ಭುತವಾಗಿ ನಟಿಸಿದ್ದರು. 
 

ಆದರೆ ಕೆಲದಿನಗಳ ಹಿಂದೆ ಧಾರಾವಾಹಿಯಲ್ಲಿ ಸ್ನೇಹಾ ಪಾತ್ರವನ್ನೇ ಅಂತ್ಯ ಮಾಡಲಾಗಿದ್ದು, ಇದು ಸೀರಿಯಲ್ ಪ್ರಿಯರಿಗೆ ದೊಡ್ಡದಾದ ಆಘಾತ ನೀಡಿತ್ತು, ಇನ್ನೂ ಸಹ ವೀಕ್ಷಕರು ಸ್ನೇಹಾ ಸಾವಿನಿಂದ ಹೊರಬಂದಿಲ್ಲ. ಸಂಜನಾ ಬುರ್ಲಿ (Sanjana Burli) ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕಾಗಿ ಬಂದುದರಿಂದ ಆಕೆ ಸೀರಿಯಲ್ ನಿಂದ ತಾನಾಗಿಯೇ ಹೊರ ಬಂದಿರೋದಾಗಿ ನಿರ್ದೇಶಕರು ಕೂಡ ಸ್ಪಷ್ಟನೆ ನೀಡಿದ್ದಾರೆ. 
 

Tap to resize

ಇದೀಗ ಸೀರಿಯಲ್ ಗೆ ಗುಡ್ ಬೈ ಹೇಳಿದ ನಟಿಯ ಮುಂದಿನ ನಡೆ ಏನು? ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೊರಡ್ತಾರ? ಅಥವಾ ಬೇರೆ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರ? ಅಥವಾ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗ್ತಿದ್ದಾರೆಯೇ? ಎಂದು ಅಭಿಮಾನಿಗಳು ಕಾಯುತ್ತಿದ್ದರೆ ನಟಿ ಮನಾಲಿಯಲ್ಲಿ ಎಂಜಾಯ್ ಮಾಡ್ತಿದ್ದಾರೆ. 
 

ಹೌದು ನಟಿ ಸಂಜನಾ ಬುರ್ಲಿ, ಸದ್ಯ ಮನಾಲಿಯಲ್ಲಿದ್ದು, ಅಲ್ಲಿನ ಸುಂದರ ಪ್ರದೇಶಗಳಲ್ಲಿ ಸುತ್ತಾಡುತ್ತಾ, ಮುದ್ದಾದ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಕೆಂಪು ಬಣ್ಣದ ಕ್ರಾಪ್ ಟಾಪ್, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಜಾಕೆಟ್ ಧರಿಸಿರುವ ಸಂಜನಾ ಬುರ್ಲಿ, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. 
 

ತಮ್ಮ ಫೋಟೊಗಳ ಜೊತೆಗೆ ಸಂಜನಾ Where there’s nothing, there’s IT! ತತ್ ತ್ವಂ ಅಸಿ (ತತ್ವಮಸಿ) ಎಂದು ಬರೆದುಕೊಂಡಿದ್ದಾರೆ. ಈ ಫೋಟೊಗಳನ್ನು ನಟಿ ಮನಾಲಿಯ ಜನಪ್ರಿಯ ಹಿಡಿಂಬಾ ದೇವಿ ಮಂದಿರ ಹಾಗೂ ವಸಿಷ್ಠ ಮಂದಿರಗಳ ಮುಂದೆ ತೆಗೆಸಿಕೊಂಡಿದ್ದಾರೆ. ನಟಿಯ ಫೋಟೊಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 
 

ಇನ್ನು ಹೆಚ್ಚಿನ ಜನರು ಪುಟ್ಟಕ್ಕನ ಮಕ್ಕಳು ಸೀರಿಯಲ್ ನೆನಪು ಮಾಡಿಕೊಂಡು, ಮೇಡಂ ನೀವು ಇಲ್ಲದೇ ಸೀರಿಯಲ್ ನೋಡೊದಕ್ಕೆ ಬೇಜಾರು, ನಿಜವಾಗಿಯೂ ನೀವು ಮತ್ತೆ ಬರಲ್ವಾ? ನೀವು ಲೈವ್ ಬಂದು ಸರಿಯಾಗಿ ಮಾಹಿತಿ ಕೊಡಿ, ನೀವು ವಾಪಾಸ್ ಸೀರಿಯಲ್ ಗೆ ಬನ್ನಿ, ನೀವು ಇಲ್ಲದೇ ಸೀರಿಯಲ್ ನೋಡೊದಕ್ಕೆ ಆಗ್ತಿಲ್ಲ ಎಂದಿದ್ದಾರೆ. 
 

Latest Videos

click me!