'ಗಂಡನೊಂದಿಗೆ ಹೀಗೆ ವರ್ಕ್ಔಟ್ ಮಾಡಿದ್ರೆ ನನ್ನಂತೆ ಫಿಟ್ ಆಗ್ತೀರಿ..‌' ವಿಡಿಯೋ ಮಾಡಿ ತೋರಿಸಿದ‌ ಜ್ಯೋತಿ ರೈ!

First Published | Nov 14, 2024, 8:10 PM IST

ಜ್ಯೋತಿ ರೈ ತಮ್ಮ ಫಿಟ್‌ನೆಸ್‌ಗೆ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಪತಿಯೊಂದಿಗೆ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಜ್ಯೋತಿ ರೈ ಫಿಟ್ನೆಸ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

ಜ್ಯೋತಿ ರೈ ಹೊಸ ವಿಡಿಯೋ ಪೋಸ್ಟ್‌ ಮಾಡಿದ್ದಾರೆ. ಸಾಮಾನ್ಯವಾಗಿ ತಮ್ಮ ಹಾಟ್‌ & ಸೆಕ್ಸಿ ಲುಕ್‌ ಇಮೇಜ್‌ಗಳನ್ನೇ ಪೋಸ್ಟ್‌ ಮಾಡ್ತಿದ್ದ ಜ್ಯೋತು ರೈ ಈಗ ತಮ್ಮ ಫಿಟ್‌ನೆಸ್‌ಗೆ ಕಾರಣ ಏನು ಅನ್ನೋದನ್ನ ಬಹಿರಂಗ ಮಾಡಿದ್ದಾರೆ

ಜ್ಯೋತಿ ರೈಗೆ ಈಗ ಹೆಚ್ಚೂ ಕಡಿಮೆ 40 ವರ್ಷ. ಹಾಗಿದ್ದರೂ ಪಡ್ಡೆ ಹುಡುಗರು ಕೂಡ ಒಂದು ಕ್ಷಣ ನಿಂತು ನೋಡುವಷ್ಟು ಸಖತ್‌ ಬೋಲ್ಡ್‌ ಆಗಿದ್ದಾರೆ. ಆದರೆ, ಇದಕ್ಕಾಗಿ ಅವರು ಗಂಟೆಗಳಾ ಕಾಲ ಜಿಮ್‌ನಲ್ಲಿ ಬೆವರು ಹರಿಸುತ್ತಾರೆ.

Tap to resize

ಜ್ಯೋತಿ ರೈ ಜಿಮ್‌ನಲ್ಲಿ ಫಿಟ್‌ನೆಸ್‌ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಹಾಗಂತ ಅವರೊಬ್ಬರೇ ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡ್ತಿಲ್ಲ. ಪತಿ ಸುಕ್ಕು ಪೂರ್ವಜ್‌ ಜೊತೆ ಅವರು ಜಿಮ್‌ನಲ್ಲಿ ಸಖತ್ತಾಗಿಯೇ ವರ್ಕ್‌ಔಟ್‌ ಮಾಡಿದ್ದಾರೆ.

ಗಂಡನೊಂದಿಗೆ ಈ ರೀತಿ ವರ್ಕ್‌ಔಟ್‌ ಮಾಡಿದರೆ ನನ್ನಂತೆ ಫಿಟ್‌ ಆಗ್ತಿರಿ ಅನ್ನೋ ಅರ್ಥದಲ್ಲಿ ಅವರು ವಿಡಿಯೋ ಪೋಸ್ಟ್‌ ಮಾಡಿದ್ದು, ತಮ್ಮ ಜಿಮ್‌ ವಿಡಿಯೋಗೆ ನೀವೇ ಕ್ಯಾಪ್ಶನ್‌ ನೀಡಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.

ಸ್ವತಃ ಜ್ಯೋತಿ ರೈಯೇ ಹೀಗೆ ಹೇಳಿದ ಮೇಲೆ ಅಭಿಮಾನಿಗಳು ಕೇಳ್ಬೇಕಾ, ಈಗಲೇ ನೀವು ದಂತದ ಗೊಂಬೆ ಇದ್ದ ಹಾಗೆ ಇದ್ದೀರಿ, ಮತ್ಯಾಕೆ ಜಿಮ್‌ಗೆ ಹೋಗ್ತೀರಿ  ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: 2025ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಪ್ರಕಟಿಸಿದ ರಾಜ್ಯ ಸರ್ಕಾರ, ಏಪ್ರಿಲ್‌-ಅಕ್ಟೋಬರ್‌ ಬಂಪರ್‌!

ನೀವು ಎದೆಗಾಗಿ ವರ್ಕ್‌ಔಟ್‌ ಮಾಡ್ತಾ ಇದ್ದೀರೋ, ಭುಜಕ್ಕಾಗಿ ವರ್ಕ್‌ಔಟ್‌ ಮಾಡ್ತಿದ್ದಿರೋ ಅನ್ನೋದು ಗೊತ್ತಾಗ್ತಾ ಇಲ್ಲ. ಜಿಮ್‌ ಮಷಿನ್‌ನಲ್ಲಿ ಯಾವುದರಲ್ಲಿ ಯಾವ ವರ್ಕ್‌ಔಟ್‌ ಮಾಡಬೇಕು ಅನ್ನೋದು ನಿಮಗೆ ತಿಳಿದಿರಬೇಕು ಎಂದು ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: ಲೋಕಲ್‌ ವೈನ್‌ ಶಾಪ್‌ನಲ್ಲಿ ಎಣ್ಣೆ ಖರೀದಿಸಿದ ಅಲ್ಲು ಅರ್ಜುನ್‌, 'ವೈರಲ್‌' ವಿಡಿಯೋ ಬಗ್ಗೆ ಏನಂದ್ರು ಸ್ಟೈಲಿಶ್‌ ಸ್ಟಾರ್‌?

Latest Videos

click me!