ಸಂಕಷ್ಟಗಳ ಮಧ್ಯೆ ಸಿಹಿಸುದ್ದಿ, ತಾಯಿಯಾಗ್ತಿದ್ದಾಳೆ ಜಾಹ್ನವಿ... ಸೈಕೋ ಜಯಂತ್ ಮಗುವನ್ನ ಸುಮ್ನೆ ಬಿಡ್ತಾನ?

First Published | Nov 14, 2024, 6:42 PM IST

ಜಯಂತ್ ಬಗ್ಗೆ ತಿಳಿದು ದೊಡ್ಡ ಸಂಕಷ್ಟವನ್ನು ಎದುರು ನೋಡುತ್ತಿರುವ ಜಾಹ್ನವಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದ್ದು, ಆಕೆ ತಾಯಿಯಾಗ್ತಿದ್ದಾಳೆ. ಜಾಹ್ನವಿ ಮುಂದಿನ ದಾರಿ ಏನು? ಜಯಂತ್ ಏನ್ ಮಾಡ್ತಾನೆ? 
 

ಲಕ್ಷ್ಮೀ ನಿವಾಸ (Lakshmi Nivasa) ಧಾರಾವಾಹಿಯಲ್ಲಿ ಇಲ್ಲಿವರೆಗೆ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದ   ಜಯಂತನ ಇತಿಹಾಸ ಇದೀಗ ಜಾಹ್ನವಿ ಎದುರು ಬಯಲಾಗಿದೆ. ಜಯಂತ್ ಜೀವನದ ಭಯಾನಕ ಸತ್ಯಗಳು ಜಾಹ್ನವಿಗೆ ಆಶ್ರಮದ ಫಾದರ್ ನಿಂದ ಬಯಲಾಗಿದೆ. 
 

ಸತ್ಯವನ್ನು ತಿಳಿದ ಜಾಹ್ನವಿ ಅದೇ ಶಾಕ್ ನಿಂದ ಹೊರ ಬರಲು ಸಾಧ್ಯವಾಗದೇ ಅದೇ ನೋವಿನಲ್ಲಿ ದಾರಿಯಲ್ಲಿ ಹೋಗ್ತಿರ್ಬೇಕಾದ್ರೆ, ತಲೆ ತಿರುಗಿ ಬಿದ್ದು, ಆಕೆಯನ್ನು ಪರೀಕ್ಷಿಸಿದ ಮಹಿಳೆ ಜಾಹ್ನವಿ ತಾಯಿಯಾಗಿರೋ ವಿಷ್ಯ ಹೇಳಿದ್ದಾರೆ. ಇದು ಸಿಹಿಯ ವಿಚಾರ ಆದ್ರೂ ಕೂಡ, ಸದ್ಯದ ಪರಿಸ್ಥಿತಿಯಲ್ಲಿ ಜಾಹ್ನವಿಗೆ ಇದು ಶಾಕಿಂಗ್ ನ್ಯೂಸ್. 
 

Tap to resize

ದೊಡ್ಡ ಸಂಕಷ್ಟದಲ್ಲಿ ಸಿಲುಕಿರುವ ಸಂದರ್ಭದಲ್ಲಿ ಈ ರೀತಿ ಸುದ್ದಿ ಬಂದಾಗ ಅದನ್ನ ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ಇರದ ಜಾಹ್ನವಿ, ಅದನ್ನೇ ನೆನೆಸಿಕೊಂಡು, ಟೆನ್ಶನ್ ನಲ್ಲಿ ದಾರಿಯಲ್ಲಿ ಹೋಗ್ತಿರೋವಾಗ್ಲೇ ಜಯಂತ್ ಎದುರಾಗ್ತಾನೆ. ಇಷ್ಟೊತ್ತಲ್ಲಿ ಒಬ್ರೇ ಎಲ್ಲಿಗೆ ಹೋಗ್ತೀರಿ ಚಿನ್ನುಮರಿ ಎನ್ನುತ್ತಾ ಆಕೆಯನ್ನು ಮನೆಗೆ ಕರೆದುಕೊಂಡು ಹೋಗ್ತಾನೆ.
 

ಇನ್ನು ಮತ್ತಷ್ಟು ಟ್ವಿಸ್ಟ್ ಕಾದಿದೆ. ಜಯಂತ್ ಬಗ್ಗೆ ಎಲ್ಲಾ ತಿಳಿದಿರುವ ಜಾಹ್ನವಿ, ತಾನು ತಾಯಿಯಾಗುತ್ತಿರುವ ಸಿಹಿ ಸುದ್ದಿಯನ್ನು ಜಯಂತ್ ಮುಂದೆ ಹೇಳ್ತಾಳ? ಅಥವಾ ತಂದೆಯಾಗುತ್ತಿರುವ ವಿಷ್ಯ ಕೇಳಿ ಜಯಂತ್ ಬದಲಾಗ್ತಾನ? ಅಥವಾ ಜಾಹ್ನವಿ ಮನೆ ಬಿಟ್ಟು ಹೋಗಿರೋದಕ್ಕೆ ಜಯಂತ್ ಇನ್ನೇನಾದ್ರೂ ಮಾಡ್ತಾನ ಕಾದು ನೋಡಬೇಕು. 
 

ಇದನ್ನ ನೋಡಿ ವೀಕ್ಷಕರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಜಾನು ಪ್ರೀತಿ ಒಬ್ಬನಿಗೆ ಸಿಗಬೇಕು ಅನ್ನೋ ಜಯಂತ್, ಇನ್ನು ಮಗು ಬರುತ್ತೆ ಅಂತ ಗೊತ್ತಾದ್ರೆ ಏನ್ ಮಾಡ್ತಾನೋ ಎಂದು ಒಬ್ರು ಕೇಳಿದ್ದಾರೆ. ಮಗು ಮೇಲೆ ಪ್ರೀತಿ ಜಾಸ್ತಿ ಆಗುತ್ತೆ ಚಿನ್ನು ಮರಿಗೇ ಅಂಥ ಮಗೂನೂ ದೂರ ಮಾಡಿ ಬಿಟ್ಟಾನು ಈ ಜಯಂತ ಅಂತಾನೂ ಹೇಳಿದ್ದಾರೆ ಜನ. 
 

ಅಷ್ಟೇ ಅಲ್ಲ ಇನ್ನು ಈ ಮಗು ಗತಿ ಏನ್ ಅಗುತೊ ಮೊಲನೆ ಬಿಡದೆ ಇರೋನು ಇನ್ನು ಮಗುನ ಬಿಡತಾನ ಎಂದಿದ್ದಾರೆ, ಮತ್ತೊಬ್ಬರು ಮಗು ಆಗುತ್ತೆ ಅಂತ ಗೊತ್ತಾದ ಮೇಲಾದ್ರೂ ಜಯಂತ್ ಬದಲಾಗಲಿ ಅಂತಿದ್ದಾರೆ. ಅಷ್ಟೆ ಅಲ್ಲ ಇದನ್ನೆಲ್ಲಾ ನೋಡಿದ್ರೆ ಅಯ್ಯೋ ದೇವರೇ ನನಗೆ ಹಾರರ್ ಮೂವೀ ನೋಡದಗೆ ಫೀಲ್ ಆಗತಿದೆ ಅಂತಾನೂ ಹೇಳಿದ್ದಾರೆ. 
 

Latest Videos

click me!