ಗ್ರೀನ್‌ ಗೌನ್‌ನಲ್ಲಿ ಸ್ಟೈಲಿಶ್​ ಲುಕ್ ಕೊಟ್ಟ ಸಾನ್ಯ ಅಯ್ಯರ್: ಫಿಶ್ ಕಟ್‌ ಡ್ರೆಸ್‌ ಬ್ಯೂಟಿಫುಲ್ ಎಂದ ಫ್ಯಾನ್ಸ್!

Published : Jan 11, 2024, 02:30 AM IST

ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿ ಸಾನ್ಯ ಅಯ್ಯರ್ ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಸ್ಟೈಲಿಶ್  ಆಗಿ ಸಾನ್ಯ ಗ್ರೀನ್‌ ಗೌನ್‌ ಡ್ರೆಸ್‌ನಲ್ಲಿ ಕಂಗೊಳಿಸಿದ್ದಾರೆ.   

PREV
16
ಗ್ರೀನ್‌ ಗೌನ್‌ನಲ್ಲಿ  ಸ್ಟೈಲಿಶ್​ ಲುಕ್ ಕೊಟ್ಟ ಸಾನ್ಯ ಅಯ್ಯರ್: ಫಿಶ್ ಕಟ್‌ ಡ್ರೆಸ್‌ ಬ್ಯೂಟಿಫುಲ್ ಎಂದ ಫ್ಯಾನ್ಸ್!

ಹೊಸ ಲುಕ್‌ನಲ್ಲಿ ಸಾನ್ಯ ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಹಸಿರು ಬಣ್ಣದ ಗೌನ್‌ನಲ್ಲಿ ಸಾನ್ಯ ಅಯ್ಯರ್ ಮಿಂಚಿದ್ದಾರೆ. ಫಿಶ್ ಕಟ್‌ನಂತಿರೋ ಡ್ರೆಸ್‌ ಧರಿಸಿ ಸಾನ್ಯ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 

26

ಸಾನ್ಯ ಡ್ರೆಸ್‌ಗೆ ತಕ್ಕಂತಹ ಮೇಕಪ್ ಇವೆಲ್ಲವೂ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಾನ್ಯರ ನ್ಯೂ ಲುಕ್‌ ನೋಡಿ ಕನ್ನಡ ಚಿತ್ರರಂಗದಲ್ಲಿ ಮುಂದೆ ಮೆರೆಯುವ ನಟಿ ಎಂದು ಫ್ಯಾನ್ಸ್ ಹಾಡಿ ಹೊಗಳಿದ್ದಾರೆ.

36

ಸಾನ್ಯ ಅಯ್ಯರ್ ಸಿನಿಮಾದ ಜೀವನದಲ್ಲಿ 'ಗೌರಿ' ಸಿನಿಮಾ ಮೊದಲ ಸಿನಿಮಾ ಆಗಿದೆ. ಇಂದ್ರಜೀತ್ ಲಂಕೇಶ್ ನಿರ್ದೇಶನದ ಈ ಚಿತ್ರದಲ್ಲಿ ಪುತ್ರ ಸಮರ್ಜೀತ್ ಲಂಕೇಶ್‌ಗೆ ಜೋಡಿ ಆಗಿದ್ದಾರೆ. ಮೊದಲ ಚಿತ್ರದಲ್ಲಿಯೇ ಮಹಿಳಾ ಪ್ರಧಾನ ಕಂಟೆಂಟ್ ಇರೋ ಚಿತ್ರದಲ್ಲಿಯೇ ನಟಿಸಿದ್ದಾರೆ.

46

ಸಾನ್ಯ ಅಯ್ಯರ್ ಈ ಹಿಂದೆ ಬಾಲಿವುಡ್‌ನ ಹೆಸರಾಂತ ಫೋಟೋ ಗ್ರಾಫರ್ ಡಬೂ ರತ್ನಾನಿ ಬಳಿ ಫೋಟೋ ಶೂಟ್ ಮಾಡಿಸಿದ್ದರು. ಆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. 

56

ಸಾನ್ಯಾ ಐಯ್ಯರ್‌ಗೆ ಡ್ಯಾನ್ಸ್ ಮಾಡುವುದು ಅಂದ್ರೆ ತುಂಬಾ ಇಷ್ಟ ಅಂತೆ. ಡ್ಯಾನ್ಸ್ ಕ್ಲಾಸ್‍ಗೆ ಹೋಗ್ತಾ ಇದ್ದಾರೆ. ಅಲ್ಲೇ ಮಾಸ್ ಸಾಂಗ್‌ಗೆ ಆಗಾಗ ಸಖತ್ ಆಗಿ ಸ್ಟೆಪ್ ಹಾಕ್ತಾರೆ. 

66

ಕಳೆದ ವರ್ಷ ಸಾನ್ಯ, ಬಿಗ್ ಬಾಸ್ ಒಟಿಟಿ ಸೀಸನ್ 1 ಮತ್ತು ಟಿವಿ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಸಿನಿಮಾ ನಾಯಕಿಯಾಗಬೇಕು ಎಂದು ಕನಸು ಕಂಡಿದ್ದ ನಟಿ ಇದೀಗ ಅದೇ ಹಾದಿಯಲ್ಲಿ ಹೆಜ್ಜೆ ಇಡ್ತಿದ್ದಾರೆ. 

Read more Photos on
click me!

Recommended Stories