ಕಿರುತೆರೆ ನಟಿ ಮತ್ತು ನಿರೂಪಕಿಯಾಗಿ ಜನಪ್ರಿಯತೆ ಪಡೆದಿರುವ ಅನುಪಮಾ ಗೌಡ (Anupama Gowda) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊಗಳನ್ನು ಶೇರ್ ಮಾಡಿದ್ದು, ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದಾರೆ.
ಹಸಿರು ಬಣ್ಣದ ಫ್ಲೋರಲ್ ಪ್ರಿಂಟ್ (Floral Print) ಇರುವ ಶಾರ್ಟ್ ಡ್ರೆಸ್ (Short dress) ಧರಿಸಿರುವ ಅನುಪಮಾ ಗಾಗಲ್ಸ್ ಧರಿಸಿ, ಕ್ಲಾಸಿ ಲುಕ್ (Classy Look)ನಲ್ಲಿ ಕಾಣಿಸಿಕೊಂಡಿದ್ದಾರೆ. ಅನುಪಮಾ ಲುಕ್ ಅಭಿಮಾನಿಗಳಿಗೆ ಇಷ್ಟವಾಗಿದೆ.
ಫೋಟೋ ಶೇರ್ ಮಾಡುವ ಜೊತೆಗೆ ಬಿ ಹ್ಯಾಪಿ ವಿತ್ ಬೀಯಿಂಗ್ ಯೂ (Be Happy Being With you) ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಮೇಡಂ ಶಾರ್ಟ್ ಡ್ರೆಸ್ಸಲ್ಲಿ ತುಂಬಾನೆ ಚೆನ್ನಾಗಿ ಕಾಣಿಸ್ತೀರಾ ಎಂದು ಜನ ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ಅಭಿಮಾನಿ ಅನುಪಮಾ ಕನ್ನಡ ಕಿರುತೆರೆಯ (Kannada small screen) ಸೂಪರ್ ಸ್ಟಾರ್. ಅವರು ತಮ್ಮ ಜರ್ನಿ ಮೂಲಕ ಹಲವಾರು ಜನರಿಗೆ ಪ್ರೇರಣೆ ನೀಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ರಿಯಾಲಿಟಿ ಶೋ (Reality Show) ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ಅನುಪಮಾ ಗೌಡ, ಅಕ್ಕ ಸೀರಿಯಲ್ ಮೂಲಕ ಗಮನ ಸೆಳೆದಿದ್ದರು. ಇದಾದ ನಂತರ ಹಲವು ಸೀರಿಯಲ್ ಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದರು.
ಕಿರುತೆರೆ ನಟನೆಯಾಗಿ ಏಳು ಬೀಳು ಕಂಡ ಅನುಪಮ ನಂತರ ನಿರೂಪಕಿಯಾಗಿ ಸೈ ಎನಿಸಿಕೊಂಡರು. ಬಿಗ್ ಬಾಸ್ ಕನ್ನಡದ ಎರಡು ಸೀಸನ್ ಗಳಲ್ಲೂ ಸಹ ಮಿಂಚಿದರು. ಸಿನಿಮಾಗಳಲ್ಲೂ ನಟಿಸಿದ್ದರು ಅನುಪಮಾ.
ಲಂಕೇಶ್ ಪತ್ರಿಕೆಯಲ್ಲಿ ಬಾಲನಟಿಯಾಗಿ (Child Artist) ನಟಿಸಿದ್ದ ಅನುಪಮಾ, ನಂತರ ನಗಾರಿ, ಆ ಕರಾಳ ರಾತ್ರಿ ಪುಟ 109, ತ್ರಯಂಬಕಂ, ಬೆಂಕಿಯಲ್ಲಿ ಅರಳಿದ ಹೂವು ಸಿನಿಮಾದಲ್ಲಿ ನಟಿಸಿದ್ದರು. ಆ ಕರಾಳ ರಾತ್ರಿಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸಹ ಪಡೆದುಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟೀವ್ ಆಗಿರುವ ಅನುಪಮಾ, ಹೆಚ್ಚಾಗಿ ಫೋಟೋ ಶೂಟ್ ಮಾಡುತ್ತಾ ಶೇರ್ ಮಾಡುತ್ತಿರುತ್ತಾರೆ, ಜೊತೆಗೆ ಟ್ರಾವೆಲ್ ಪ್ರಿಯೆಯಾಗಿರುವ ಇವರು ಸೋಲೋ ಟ್ರಾವೆಲ್ ಮಾಡುತ್ತಿರುತ್ತಾರೆ.