ಬಿಗ್ ಬಾಸ್ ಖ್ಯಾತಿಯ ನಟ ಸೂರಜ್ ಸಿಂಗ್, ಇದೀಗ 'ಪವಿತ್ರ ಬಂಧನ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ, ಧಾರಾವಾಹಿಯ ಬಾತ್‌ರೂಮ್ ದೃಶ್ಯದ ಶೂಟಿಂಗ್ ವೇಳೆ 40 ಜನರ ಮುಂದೆ ತಮಗಾದ ಮುಜುಗರ ಮತ್ತು ನಾಚಿಕೆಯ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.
Bigg Bossನ ಲವರ್ ಬಾಯ್ ಎಂದೇ ಫೇಮಸ್ ಆದೋರು ನಟ ಸೂರಜ್ ಸಿಂಗ್. ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಭಾಗವಹಿಸಿದ್ದ ಸೂರಜ್ ಸಿಂಗ್ ಅಲ್ಲಿ ಇದ್ದದ್ದು ಸ್ವಲ್ಪ ಸಮಯವಾದರೂ, ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
26
ಐಟಿ ಉದ್ಯೋಗಿ
ಅಲ್ಲಿಂದ ಹೊರ ಬಂದ ತಕ್ಷಣ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ನಾಯಕನ ನಟಿಸುವ ಅವಕಾಶವನ್ನು ಸಹ ಪಡೆದಿದ್ದಾರೆ ಸೂರಜ್. ಐಟಿ ಕಂಪನಿಯಲ್ಲಿ ಉದ್ಯೋಗ, ಜಿಮ್, ಮಾಡೆಲಿಂಗ್ ಎಂದು ಬ್ಯುಸಿಯಾಗಿದ್ದ ಸೂರಜ್ ಸಿಂಗ್ ಅವರಿಗೆ ನಟನೆಯ ಗಂಧ ಗಾಳಿ ಇಲ್ಲವಾಗಿತ್ತು. ಆದರೆ ಇದೀಗ ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ಅದ್ಭುತವಾಗಿ ನಟಿಸುವ ಮೂಲಕ, ಜನಮನ ಗೆಲ್ಲುತ್ತಿದ್ದಾರೆ ಸೂರಜ್.
36
ಸೀರಿಯಲ್ನಲ್ಲಿ ಅವಕಾಶ
ಸೂರಜ್ ಸಿಂಗ್ ಈ ಹಿಂದೆ ಎಚ್‌ಪಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ ಜಿಮ್ ಟ್ರೇನರ್ ಕೂಡ ಆಗಿದ್ದರು. ಒಟ್ಟಿನಲ್ಲಿ ಅವರು ಎರಡು ಉದ್ಯೋಗ ಮಾಡುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಮಾಡೆಲಿಂಗ್ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಜನಪ್ರಿಯತೆ ಪಡೆದರು. ಇದರಿಂದ ಬಿಗ್ಬಾಸ್ ಆ ಬಳಿಕ ಸೀರಿಯಲ್ನಲ್ಲಿ ಅವಕಾಶ ಹುಡುಕಿ ಬಂದಿವೆ.
ಇದೀಗ ಅವರು ಪವಿತ್ರ ಬಂಧನ ಸೀರಿಯಲ್ (Pavitra Bandhana)ನ ಶೂಟಿಂಗ್ ವೇಳೆ ನಾಚಿಕೆ ಪಟ್ಟುಕೊಂಡಿರುವ ವಿಷ್ಯವನ್ನು ರಿವೀಲ್ ಮಾಡಿದ್ದಾರೆ. ಬಾತ್‌ರೂಮ್ ದೃಶ್ಯದಲ್ಲಿ ತಮಗಾಗಿರುವ ಮುಜುಗರವನ್ನು ಅವರು, araginientertainment ಚಾನೆಲ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.
56
ಸಿಕ್ಕಾಪಟ್ಟೆ ಮುಜುಗರ
ನಿಮಗೆ ಕಾಣಿಸುವಾಗ ನಾನು ಮತ್ತು ನಾಯಕಿ ಇಬ್ಬರೇ ಇರೋದು. ಆದರೆ ಶೂಟಿಂಗ್ ವೇಳೆ 40 ಮಂದಿ ಇರ್ತಾರೆ. ಬಾತ್‌ರೂಮ್ ಸೀನ್ ಮಾಡುವಾಗ ಏನು ಮಾಡಬೇಕು ಎಂದೇ ತಿಳಿಯಲಿಲ್ಲ. ಸಿಕ್ಕಾಪಟ್ಟೆ ನರ್ವಸ್ ಆಗಿ ಹೋಗಿದ್ದೆ. ಎಲ್ಲಿ ನೋಡಬೇಕು, ಏನು ಮಾಡಬೇಕು ಎನ್ನೋದು ತಿಳಿಯದೇ ಪೇಚಿಗೆ ಸಿಲುಕಿದ್ದೆ ಎಂದು ಹೇಳಿದ್ದಾರೆ. ಆದರೆ ಈಗ ಎಲ್ಲ ಓಕೆ, ಮೊದಲಿನ ಹಾಗೆ ನಾಚಿಕೆ ಎಲ್ಲಾ ಆಗಲ್ಲ. ಅಷ್ಟೇ ಜನರು ಇದ್ದರೂ ಯೂಸ್ ಟು ಆಗಿದ್ದೇನೆ. ಅವರೇ ಎಲ್ಲರೂ ಇರ್ತಾರೆ. ಸೋ ಅಷ್ಟೆಲ್ಲಾ ನರ್ವಸ್ ಆಗಲ್ಲ. ಹೇಗೋ ಮ್ಯಾನೇಜ್ ಮಾಡುತ್ತಿದ್ದೇನೆ ಎಂದಿದ್ದಾರೆ.
66
ಮೆಚ್ಚುಗೆ ಗಳಿಸಿದ ಅಭಿನಯ
ತಮ್ಮ ಪ್ರೀತಿಸಿದ ಹುಡುಗಿಯ ಜೀವನ ಹಾಳಾಗದಂತೆ ತಡೆಯಲು ಆಕೆಯನ್ನು ಮದುವೆಯಾಗಿ, ಆಕೆಯ ದ್ವೇಷದ ನಡುವೆಯೇ ತಮ್ಮನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು, ಆಕೆಯ ಬೆನ್ನೆಲುಬಾಗಿ ನಿಂತು, ಆಕೆಯ ಮನೆಯವರ ಕಷ್ಟಕ್ಕೆ ನೆರವಾಗಿ ಗಂಡ ಅಂದ್ರೆ ಹೀಗೆ ಇರಬೇಕು ಎನ್ನುವುದಕ್ಕೆ ಉದಾಹರಣೆಯಾದರು ದೇವ್. ಇಲ್ಲೂ ತಮ್ಮ ನೈಜ್ಯ ಅಭಿನಯದ ಮೂಲಕ ಮನ ಗೆಲ್ಲುತ್ತಿದ್ದಾರೆ ಸೂರಜ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.