ಜಗತ್ಪ್ರಸಿದ್ಧ ದುಬೈ ಮಿರಾಕಲ್ ಗಾರ್ಡನ್‌ನಲ್ಲಿ ಪಾರು ಚೆಲುವೆ ಮೋಕ್ಷಿತಾ ಪೈ

First Published | May 28, 2024, 6:03 PM IST

ಪಾರು ಸೀರಿಯಲ್ ಬಳಿಕ ನಟಿ ಮೋಕ್ಷಿತಾ ಪೈ ಹೆಚ್ಚಾಗಿ ಟ್ರಾವೆಲ್ ಮಾಡುತ್ತಾ ಜೀವನ ಎಂಜಾಯ್ ಮಾಡ್ತಿದ್ದಾರೆ, ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಪಾರು ವಿನಲ್ಲಿ ಪಾರು ಪಾತ್ರದ ಮೂಲಕ ಮನೆಮಾತಾಗಿದ್ದ ನಟಿ ಮೋಕ್ಷಿತ ಪೈ Mokshitha Pai), ಕನ್ನಡ ಕಿರುತೆರೆ ವೀಕ್ಷಕರ ಅಚ್ಚುಮೆಚ್ಚಿನ ಹುಡುಗಿ. ಸದ್ಯ ಸೀರಿಯಲ್ ಮುಗಿದ ಬಳಿಕ ನಟಿ ಕಿರುತೆರೆ ಮೇಲೆ ಬೇರೋಲ್ಲೂ ಕಾಣಿಸಿಕೊಂಡಿಲ್ಲ. ನಟಿಯನ್ನು ತೆರೆಯ ಮೇಲೆ ಮತ್ತೆ ನೋಡೋಕೆ ಕಾಯುತ್ತಿರುವ ಅಭಿಮಾನಿಗಳ ಸಂಖ್ಯೆಯೂ ಕಡಿಮೆ ಇಲ್ಲ. 
 

ಪಾರು ಸೀರಿಯಲ್ ಬಳಿಕ ನಟಿ ಸೋಶಿಯಲ್ ಮಿಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ, ತಮ್ಮ ತಮ್ಮನ ಜೊತೆ ಸಮಯ ಕಳೆಯುತ್ತಾ, ಫ್ಯಾಮಿಲಿ ಜೊತೆ ಟೂರ್ ಮಾಡುತ್ತಾ ಎಂಜಾಯ್ ಮಾಡ್ತಾ, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿದ್ದಾರೆ ನಟಿ.  ಇತ್ತೀಚೆಗೆ ನಟಿ, ತಾಯಿ ಜೊತೆ ಮನಾಲಿಗೆ, ಕುಟುಂಬದ ಜೊತೆ ಮಂತ್ರಾಲಯಕ್ಕೂ ತೆರಳಿದ್ದರು. 
 

Tap to resize

ಈ ಬಾರಿ ನಟಿ ಮೋಕ್ಷಿತಾ ಪೈ ತಮ್ಮ ಸ್ನೇಹಿತರ ಜೊತೆ ಕೆಲ ಸಮಯದ ಹಿಂದೆ ದುಬೈಗೆ ತೆರಳಿದ್ದು, ಕೆಲವು ದಿನಗಳು ಅಲ್ಲಿಯೇ ಎಂಜಾಯ್ ಮಾಡಿದ್ದರು. ಅಲ್ಲಿ ಡೆಸರ್ಟ್ ನಲ್ಲಿ ಮೋಜು ಮಸ್ತಿ. ಬೋಟ್ ರೈಡ್ ಮಾಡುವ ಮೂಲಕ ಎಂಜಾಯ್ ಮಾಡಿದ್ದರು.  ಇದೀಗ ಅಲ್ಲಿನ ವಿಶ್ವಪ್ರಸಿದ್ಧ ಮಿರಾಕಲ್ ಗಾರ್ಡನ್ ಗೆ (Miracle Garden Dubai) ತೆರಳಿದ್ದು, ಸುಂದರ ಹೂವುಗಳ ಮುಂದೆ ನಿಂತು ತಾವು ಫೋಟೋಕ್ಕೆ ಪೋಸ್ ಕೊಟ್ಟಿದ್ದು, ಮುದ್ದಾದ ಫೋಟೋಗಳನ್ನು ನಟಿ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಹಸಿರು ಬಣ್ಣದ ಡ್ರೆಸ್ ಮೇಲೆ ವಿವಿಧ ಬಣ್ಣದ ಫ್ಲೋರಲ್ ಪ್ರಿಂಟ್ ಇರುವ ಸ್ಲೀವ್ ಲೆಸ್ ಡ್ರೆಸ್ ಧರಿಸಿರುವ ಮೋಕ್ಷಿತಾ ಬಣ್ಣ ಬಣ್ಣದ ಲಕ್ಷಾಂತರ ಹೂವುಗಳನ್ನು ಹೊಂದಿರುವ ಮಿರಾಕಲ್ ಗಾರ್ಡನ್ ನ ಮುಂದೆ ನಿಂತು ಪೋಸ್ ನೀಡಿದ್ದು, ಅಭಿಮಾನಿಗಳು ಸಹ ನಟಿಯನ್ನು ನೋಡಿ ಸಂತಸಪಟ್ಟಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟಿ ಮೋಕ್ಷಿತಾರನ್ನು ಮತ್ತೆ ತೆರೆ ಮೇಲೆ ನೋಡೋದಕ್ಕೆ ಜನರು ಕಾಯ್ತ ಇದ್ದಾರೆ. 
 

ಇನ್ನು ವಿಶ್ವದ ಅತ್ಯಂತ ದೊಡ್ಡದಾದ ಈ ಮಿರಾಕಲ್ ಗಾರ್ಡನ್ ಬಗ್ಗೆ ಹೇಳೋದಾದರೆ, ಇದು ದುಬೈನಲ್ಲಿ ನೀವು ನೋಡಲೇಬೇಕಾದ ಸುಂದರ ತಾಣಗಳಲ್ಲಿ ಒಂದಾಗಿದೆ. 2013 ರ ಫೆಬ್ರುವರಿ 14 ರಂದು ನಿರ್ಮಾಣವಾದ ಈ ಮಿರಾಕಲ್ ಗಾರ್ಡನ್ ನಲ್ಲಿ 50 ಮಿಲಿಯನ್ ಹೂವುಗಳು, 250 ಗಿಡಗಳು ಇವೆ. ಹಾಗಾಗಿಯೇ ಇಲ್ಲಿನ ಕಲರ್ ಫುಲ್ ಹೂವುಗಳ ರಾಶಿಯನ್ನು ನೋಡಲು ವಿಶ್ವದ ಮೂಲೆ ಮೂಲೆಯಿಂದ ಜನರು ಇಲ್ಲಿ ಬರುತ್ತಾರೆ. 

ನೀವು ಸಹ ದುಬೈನ ಈ ಆಕರ್ಷನೆಯನ್ನು ನೋಡೊದಕ್ಕೆ ಹೋಗೋದಾದ್ರೆ ಯಾವ ಸಮಯದಲ್ಲಿ ಹೋಗಬೇಕು ಅನ್ನೋದು ನೆನಪಿರಲಿ. ಯಾಕಂದ್ರೆ ಇಲ್ಲಿಗೆ ತೆರಳೋಕೆ ಅಕ್ಟೋಬರ್ ನಿಂದ ಎಪ್ರಿಲ್ ವರೆಗೆ ಮಾತ್ರ ಅವಕಾಶ ಇದೆ. ಮೇ ಯಿಂದ ಸೆಪ್ಟೆಂಬರ್ ತಿಂಗಳವರೆಗೆ ವಿಪರೀತ ಬಿಸಿಲು ಇರೋದರಿಂದ ಗಿಡ, ಹೂವುಗಳನ್ನು ನಿರ್ವಹಣೆ ಮಾಡೊದು ಕಷ್ಟವಾಗಿರೋದರಿಂದ ಈ ಗಾರ್ಡನ್ ಮುಚ್ಚಲಾಗಿರುತ್ತದೆ. ಈ ಸುಂದರ ತಾಣದಲ್ಲಿ ನಮ್ಮ ಪಾರು ಖ್ಯಾತಿ ಮೋಕ್ಷಿತಾ ಪೈ ಫೋಟೋ ಕ್ಲಿಕ್ ಮಾಡಿಸಿಕೊಂಡಿದ್ದು, ನೋಡುಗರಿಗೂ ಕಣ್ಣಿಗೆ ಹಬ್ಬ ನೀಡುತ್ತಿದೆ. 
 

Latest Videos

click me!