‘ನಿನಗಾಗಿ‌‌’ ಸೀರಿಯಲ್ ಫಸ್ಟ್ ಎಪಿಸೋಡ್ ಬಗ್ಗೆ ಜನ ಏನ್ ಹೇಳ್ತಿದ್ದಾರೆ ಗೊತ್ತಾ?

Published : May 28, 2024, 03:37 PM IST

ಮೇ 27 ರಿಂದ ಆರಂಭವಾದ ಹೊಚ್ಚ ಹೊಸ ಧಾರಾವಾಹಿ ‘ನಿನಗಾಗಿ’ ಬಗ್ಗೆ ಸೀರಿಯಲ್ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ರೇಂಜ್ ಗೆ ಸೀರಿಯಲ್ ಮೂಡಿ ಬಂದಿದೆ ಎನ್ನುತ್ತಿದ್ದಾರೆ ಜನ.   

PREV
17
‘ನಿನಗಾಗಿ‌‌’ ಸೀರಿಯಲ್ ಫಸ್ಟ್ ಎಪಿಸೋಡ್ ಬಗ್ಗೆ ಜನ ಏನ್ ಹೇಳ್ತಿದ್ದಾರೆ ಗೊತ್ತಾ?

ಕಲರ್ಸ್ ಕನ್ನಡ (Colors Kannada) ವಾಹಿನಿ ವಿಭಿನ್ನ ಕಥೆಯುಳ್ಳ ಸೀರಿಯಲ್ ನೀಡೊದ್ರಲ್ಲಿ ಮೊದಲಿಗರು. ಈಗಷ್ಟೇ ಬೃಂದಾವನ ಸೀರಿಯಲ್ ಮುಗಿದಿದ್ದು, ಇದು ಮುಗಿದ ತಕ್ಷಣವೇ ಹೊಸದಾಗಿ ನಿನಗಾಗಿ ಸೀರಿಯಲ್ ಆರಂಭವಾಗಿದೆ. ನಿನ್ನೆಯಷ್ಟೇ ಸೀರಿಯಲ್ ನ ಮೊದಲ ಎಪಿಸೋಡ್ ಪ್ರಸಾರವಾಗಿದೆ.

27

ದಿವ್ಯಾ ಉರುಡುಗ (Divya Uruduga) ಅಮ್ಮ ಹಾಕಿದ ಗೆರೆಯನ್ನು ದಾಟದೇ, ತನ್ನ ಎಲ್ಲಾ ಕನಸುಗಳನ್ನು ಬದಿಗೊತ್ತಿ ಅಮ್ಮನ ಕನಸು ನನಸು ಮಾಡೋದನ್ನೇ ಗುರಿಯಾಗಿಸಿದ ಲೇಡಿ ಸೂಪರ್ ಸ್ಟಾರ್ ರಚ್ಚು ಪಾತ್ರದಲ್ಲಿ ನಟಿಸುತ್ತಿದ್ದು, ರಿತ್ವಿಕ್ ಮಠದ್ (Rithvik Mathad) ಫುಡ್ ಟ್ರಕರ್ ಜೀವಾ ಪಾತ್ರದಲ್ಲಿ ನಟಿಸುತ್ತಿದ್ದರೆ, ಪುಟಾಣಿ ಸಿರಿ ಕೃಷ್ಣಾ ಆಗಿ ಜೀವಾ ಮಗಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. 
 

37

ಮೊದಲ ಎಪಿಸೋಡ್ ಬಗ್ಗೆ ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲ ಎಪಿಸೋಡ್ ತುಂಬಾ ಚೆನ್ನಾಗಿ ಇತ್ತು. ಸ್ಪೆಷಲಿ ನಮ್ಮ ಹೀರೋಯಿನ್ ಎಂಟ್ರಿ ಅಂತು ಬ್ಯೂಟಿಫುಲ್. ಅರ್ಧ ಗಂಟೆ ನನ್ನ ಗಮನ ಬೇರೆ ಕಡೆ ಹೋಗಲೇ ಇಲ್ಲ ಎಂದಿದ್ದಾರೆ ಒಬ್ಬರು. 
 

47

ಮತ್ತೊಬ್ಬರು ಸೂಪರ್  ನಮಗಾಗಿ ಮನೋರಂಜನೆ ನೀಡಲು ಬಂದಿರುವ " ನಿನಗಾಗಿ " (Ninagaagi) ಧಾರಾವಾಹಿ ತಂಡಕ್ಕೆ ಶುಭವಾಗಲಿ. ನಿರ್ಮಾಪಕರು ಹೇಳಿದಂತೆ 1000 ಸಂಚಿಕೆ ಪೂರ್ಣಗೊಂಡು ಮತ್ತೊಮ್ಮೆ ಪ್ರೆಸ್ ಮೀಟ್ ನಡೆಯಲಿ.  ಪ್ರತಿ ಪಾತ್ರವೂ ಅದ್ಭುತವಾಗಿ ಮೂಡಿಬಂದಿದೆ, ಟೀಮ್ ವರ್ಕ್ ಅದ್ಭುತವಾಗಿದೆ. ಏನೆಂದು ಹೇಳಲಿ ಸೀರಿಯಲ್ ನೋಡುತ್ತಾ ಫ್ರೀಜ್ ಆಗಿ ಹೋದೆ ಎಂದಿದ್ದಾರೆ. 
 

57

ಪ್ರತಿಯೊಂದು ಪಾತ್ರಗಳು ಸನ್ನಿವೇಶಗಳಲ್ಲಿ ಎಲ್ಲರೂ ಅದ್ಭುತವಾಗಿ ಅಭಿನಯಿಸಿದ್ದಾರೆ ಎಲ್ಲರಿಗೆ ಅಭಿನಂದನೆಗಳು ಜೀವ ಹಾಗು ಕೃಷ್ಣ ತುಂಬಾ ಕ್ಯೂಟ್ ಆಗಿದ್ದಾರೆ. ಸೀರಿಯಲ್ (Serial) ಅರ್ಧ ಗಂಟೆ ಮುಗಿದದ್ದೇ ಗೊತ್ತಾಗಲಿಲ್ಲ, ಹೀರೋ ಹೀರೋಯಿನ್ ಇಬ್ಬರೂ ನಮ್ಮ ಫೇವರಿಟ್, ವಜ್ರೇಶ್ವರಿ ಮೊದಲ ಎಪಿಸೋಡ್ ನ ಶೋಸ್ಟಾಪರ್ ಎಂದಿದ್ದಾರೆ.  
 

67

ನಿನಗಾಗಿ ಸೀರಿಯಲ್ ನ ಮೊದಲ ಎಪಿಸೋಡ್ ಕಣ್ಣಿಗೆ ಹಬ್ಬವಾಗಿತ್ತು. ಇಲ್ಲಿವರೆಗೆ ನಾನು ಸೀರಿಯಲ್ ನೋಡಿಯೇ ಇರಲಿಲ್ಲ. ಇದೇ ಮೊದಲ ಬಾರಿಗೆ ಸೀರಿಯಲ್ ನೋಡ್ತಾ ಇದ್ದೀನಿ, ಇದು ಖಂಡಿತಾ ನೋಡೋದಕ್ಕೆ ಅತ್ಯುತ್ತಮವಾದ ಸೀರಿಯಲ್. ದಿವ್ಯಾಳಿಗೋಸ್ಕರ ಸೀರಿಯಲ್ ನೋಡ್ತಿದೀವಿ ಎಂದು ಮತ್ತೊಬ್ಬರು ಕಾಮೆಂಟ್ ಮೂಲಕ ತಿಳಿಸಿದ್ದಾರೆ. 
 

77

ಮೊದಲ ಎಪಿಸೋಡ್ (first episode) ಅಧ್ಬುತವಾಗಿತ್ತು,  ಒಂದೊಂದು ಸೀನ್ ಸಹ ತುಂಬ ಇಷ್ಟ ಆಯಿತು . ನಮ್ಮ ರಚ್ಚು ತುಂಬಾ ಮುದ್ದಾಗಿಕಾಣುತ್ತಿದಾರೆ. ಪ್ರೀತಿಯ ನಗುವನ್ನು ಹಂಚುತ್ತಾರೆ. ಮುಂದಿನ ಸಂಚಿಕೆ ಗೋಸ್ಕರ ಉತ್ಸುಕರಾಗಿ ಕಾಯುತ್ತಿದ್ದೇವೆ ."ನಿನಗಾಗಿ ನೋಡುತಿರುವೆವು ನಿಮಗಾಗಿ ದಿವ್ಯ ಉರುಡುಗ. ಮುಂದಿನ ಎಪಿಸೋಡ್ ಹೇಗೆ ಬರಲಿದೆ ಎಂದು ಕಾತುರಾರಾಗಿದ್ದೇವೆ. ನಿನಗಾಗಿ ಧಾರಾವಾಹಿಯ ದಶಕದ ಸಂಭ್ರಮ ನೋಡಲು ಆಶಿಸುತ್ತೇವೆ ಎಂದಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories