ಚಿನ್ನುಮರಿ ಹುಡುಕಲು ವೇಷ ಬದಲಿಸಿದ ಸೈಕೋ ಜಯಂತ್; ವಿಶ್ವನ ಮನೆಯಲ್ಲಿ ಸಿಕ್ಕಿಬಿದ್ದ ಜಾಹ್ನವಿ!

Published : Dec 01, 2025, 08:06 PM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ, ಸೈಕೋ ಗಂಡ ಜಯಂತನಿಂದ ತಪ್ಪಿಸಿಕೊಂಡು ವಿಶ್ವನ ಮನೆಯಲ್ಲಿರುವ ಜಾಹ್ನವಿ ಹುಡುಕಲು ಜಯಂತ್ ವಿಫಲನಾಗುತ್ತಾನೆ. ಇದೀಗ, ವೃದ್ಧನ ವೇಷ ಧರಿಸಿ ಕಾರ್ಮಿಕನಾಗಿ ವಿಶ್ವನ ಮನೆಗೆ ಪ್ರವೇಶಿಸಿದ್ದಾನೆ. ಜಯಂತನ ಈ ಹೊಸ ನಾಟಕದಲ್ಲಿ ಜಾಹ್ನವಿ ಸಿಕ್ಕಿಬೀಳುತ್ತಾಳೆಯೇ ಎಂಬುದು ಕಥೆಯ ತಿರುವು.

PREV
16
ಸೈಕೋ ಗಂಡ ಜಯಂತ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೈಕೋ ಗಂಡ ಜಯಂತನ ಸಹವಾಸವೇ ಸಾಕು ಎಂದು ಶ್ರೀಲಂಕಾದಲ್ಲಿ ಗಂಡನೊಂದಿಗೆ ಪ್ರವಾಸಕ್ಕೆ ಹೋದಾಗ ಸಮುದ್ರಕ್ಕೆ ಬಿದ್ದಿದ್ದ ಚಿನ್ನುಮರಿ ಜಾಹ್ನವಿ ನಂತರ ಬದುಕಿ ಬಂದಿದ್ದಳು.

26
ವಿಶ್ವನ ಮನೆಯಲ್ಲಿಯೇ ಇದ್ದಾಳೆ

ಆದರೆ, ಇದೀಗ ಪುನಃ ತನ್ನ ಹೆಂಡತಿ ಬದುಕಿದ್ದಾಳೆ ಎಂಬ ಸುಳಿವನ್ನು ಅರಿತುಕೊಂದ ಗಂಡ ಜಯಂತ್, ಜಾಹ್ನವಿಯನ್ನು ಕಾಲೇಜಿನಲ್ಲಿ ಪ್ರೀತಿ ಮಾಡುತ್ತಿದ್ದ ವಿಶ್ವನ ಮನೆಯಲ್ಲಿಯೇ ಇದ್ದಾಳೆ ಎಂಬ ಮಾಹಿತಿ ಸಿಕ್ಕಿದೆ.

36
ತಾಕತ್ತಿದ್ದರೆ ಹುಡುಕಿ ಕರೆದುಕೊಂಡು ಹೋಗು

ಸ್ವತಃ ವಿಶ್ವನೇ ಜಾಹ್ನವಿಯ ಕಂಡ ಜಯಂತನಿಗೆ ನೀನು ನಿನ್ನ ಹೆಂಡತಿಯನ್ನು ತಾಕತ್ತಿದ್ದರೆ ಹುಡುಕಿ ಕರೆದುಕೊಂಡು ಹೋಗು ಎಂದು ಸವಾಲು ಹಾಕಿದ್ದಾನೆ. 

ಇದರಿಂದ ಜಾಹ್ನವಿಯನ್ನು ಹುಡುಕಲು ವಿಶ್ವನ ಕಾಲೇಜು ಸ್ನೇಹಿತರನ್ನು ಕರೆಸುವುದು, ಜಾಹ್ನವಿ ಅವರ ಅಪ್ಪನ ಮನೆಗೆ ಹೋಗಿ ಬರುವುದು ಹಾಗೂ ಇತರೆ ಪ್ರಯತ್ನಗಳನ್ನು ಮಾಡಿದ್ದಾರೆ. ಆದರೆ, ಇದ್ಯಾವುದೂ ತನಗೆ ವರ್ಔಟ್ ಆಗದ ಕಾರಣ ಇದೀಗ ತಾನೇ ಸ್ವತಃ ಚಿನ್ನುಮರು ಹುಡುಕಲು ಮುಂದಾಗಿದ್ದಾರೆ.

46
ಜಾಹ್ನವಿ ರಕ್ಷಣೆಗಾಗಿ ಥಿಯೇಟರ್‌ನಲ್ಲಿ ಬೆಂಕಿ

ಈಗಾಗಲೇ ಒಮ್ಮೆ ಸಿನಿಮಾ ಥಿಯೇಟರ್‌ನಲ್ಲಿ ತನ್ನ ಹೆಂಡತಿ ಚಿನ್ನುಮರಿ ಬಂದಿದ್ದಾಳೆ ಎಂಬ ಸುಳಿವನ್ನು ಹಿಡಿದು ಇನ್ನೇನು ಹೆಂಡತಿಯನ್ನು ರೆಡ್ ಹ್ಯಾಂಡ್‌ ಆಗಿ ಹಿಡಿದೇ ಬಿಟ್ಟ ಎನ್ನುವಾಗ ವಿಶ್ವ ಆಕೆಯನ್ನು ರಕ್ಷಣೆ ಮಾಡುತ್ತಾನೆ. ಜಾಹ್ನವಿ ರಕ್ಷಣೆಗಾಗಿ ಥಿಯೇಟರ್‌ನಲ್ಲಿ ಬೆಂಕಿ ಹೊತ್ತಿಕೊಂಡಂತೆ ಮಾಡಿ ಎಲ್ಲರನ್ನೂ ಕಳಿಸಿ, ಜಾಹ್ನವಿ ಜಯಂತನ ಕೈಗೆ ಸಿಗದಂತೆ ಹೊರಗೆ ಕರೆದುಕೊಂಡು ಬರುತ್ತಾನೆ.

56
ಸೈಕೋ ಜಯಂತ ವೇಷ ಬದಲು

ಇದೀಗ ಎಲ್ಲರ ಆಲೋಚನೆಗೂ ಮೀರಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಸೈಕೋ ಜಯಂತ ವೇಷ ಬದಲಿಸಿಕೊಂಡು ವೃದ್ಧನಂತೆ ನಾಟಕವಾಡುತ್ತಾ ಸಹಾಯ ಕೇಳಿಕೊಂಡು ವಿಶ್ವನ ಮನೆಗೆ ಹೋಗಿದ್ದಾನೆ. ಈ ಮೂಲಕ ವಿಶ್ವನ ಮನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾ ಚಿನ್ನುಮರಿಯನ್ನು ಹುಡುಕುವುದಕ್ಕೆ ಮುಂದಾಗಿದ್ದಾನೆ.

66
ಸೈಕೋ ಗಂಡನ ಕಣ್ಣಿಗೆ ಸಿಕ್ಕಿಬಿದ್ದ ಚಿನ್ನುಮರಿ

ಕೆಲಸಕ್ಕೆ ಸೇರಿಕೊಂಡ ದಿನವೇ ಚಿನ್ನುಮರಿ ತನ್ನ ಸೈಕೋ ಗಂಡನ ಕಣ್ಣಿಗೆ ಸಿಕ್ಕಿಬೀಳುತ್ತಾಳೆ. ತನ್ನ ಹೆಂಡತಿ ಜೀವಂತವಾಗಿದ್ದಾಳೆ ಎಂಬುದನ್ನು ಕಂಡ ಜಯಂತ್ ಜಾಹ್ನವಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಕೊಂಡು ಮನೆಗೆ ಕರೆದುಕೊಂಡು ಹೋಗುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.

Read more Photos on
click me!

Recommended Stories