ನಟಿ ನಿಶ್ವಿಕಾ ನಾಯ್ಡು ಚಿನ್ನದ ಕಳ್ಳಸಾಗಣೆ ಆರೋಪದ ಮೇಲೆ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗುವ ಪ್ರೊಮೋವೊಂದು ಬಿಡುಗಡೆಯಾಗಿದೆ. 'ಆಪರೇಷನ್ ಬಂಗಾರ' ಶೀರ್ಷಿಕೆಯ ಈ ಪ್ರೊಮೋ, ರನ್ಯಾ ರಾವ್ ಅವರ ನೈಜ ಪ್ರಕರಣವನ್ನು ನೆನಪಿಸುತ್ತಿದ್ದು, ಇದು ಸಿನಿಮಾ ಅಥವಾ ಸೀರಿಯಲ್‌ನ ಭಾಗವೇ ಎಂಬ ಕುತೂಹಲ ಹುಟ್ಟುಹಾಕಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕಳೆದ ಒಂದು ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟಿ ರನ್ಯಾ ರಾವ್ ವಿಷಯ ಎಲ್ಲರಿಗೂ ತಿಳಿದದ್ದೇ. ಮಾಜಿ ನಟಿ ರನ್ಯಾ ರಾವ್ 2025ರ ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿಗೆ ಬಂದಾಗ ₹12.56 ಕೋಟಿ ಮೌಲ್ಯದ 14.2 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ (DRI) ಅಧಿಕಾರಿಗಳಿಂದ ಬಂಧಿಸಲ್ಪಟ್ಟರು. ಒಂದು ವರ್ಷದ ತಡೆ ಬಂಧನದ ಬಳಿಕ ಅವರು 2026ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದು, ಸದ್ಯ ಪ್ರಕರಣದ ತನಿಖೆ ಮುಂದುವರಿದಿದೆ.
26
ನಿಶ್ವಿಕಾ ನಾಯ್ಡು ಅಸಲಿಯತ್ತು?
ಇದರ ಬೆನ್ನಲ್ಲೇ ಇದೇ ಪ್ರಕರಣವನ್ನು ಹೋಲುವ ರೀತಿಯಲ್ಲಿ ನಟಿ ನಿಶ್ವಿಕಾ ನಾಯ್ಡು ಅವರನ್ನು ವಿಮಾನ ನಿಲ್ದಾಣದಲ್ಲಿ ಅರೆಸ್ಟ್ ಮಾಡಲಾಗಿದೆ. ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಅಧಿಕಾರಿಗಳು ಇವರನ್ನು ಹಿಡಿದಿದ್ದಾರೆ. ಇದರ ಪ್ರೊಮೋ ಅನ್ನು ಜೀ ವಾಹಿನಿ ಹಂಚಿಕೊಂಡಿದೆ. ಅಂದಹಾಗೆ ನಟಿಯನ್ನು ನಿಜವಾಗಿಯೂ ಪೊಲೀಸರು ಹಿಡಿದದ್ದಲ್ಲ. ಬದಲಿಗೆ ಸಿನಿಮಾನೋ, ಸೀರಿಯಲ್‌ನ ಪ್ರೊಮೋ ಇದಾಗಿದ್ದು, ಇದನ್ನು ನೋಡಿದರೆ, ಹಲವರು ರನ್ಯಾ ರಾವ್ ಕೇಸಾ ಎಂದು ಪ್ರಶ್ನಿಸುತ್ತಿದ್ದಾರೆ.
36
ವಿಮಾನದಲ್ಲಿ ಬಂದ ನಟಿ
ಈಗ ಬಿಡುಗಡೆಯಾಗಿರುವ ಪ್ರೊಮೋದಲ್ಲಿ, ನಿಶ್ವಿಕಾ ನಾಯ್ಡು ವಿಮಾನದಲ್ಲಿ ಬರುವುದನ್ನು ಕಾಣಬಹುದು. ಅದರಲ್ಲಿ ಅವರು ಲೈಫ್ನಲ್ಲಿ ತುಂಬಾ ಎತ್ತರಕ್ಕೆ ಹಾರಬೇಕು ಎಂದುಕೊಂಡಿದ್ದೆ. ಮನಿ, ಟ್ರಾವಲ್, ಸಕ್ಸಸ್ ಎಲ್ಲವೂ ಸಿಗಬೇಕು ಎಂದುಕೊಂಡವಳು ನಾನು ಎಂದಿದ್ದಾರೆ.
ಬಳಿಕ ಈಕೆ ಕೋಟ್ಯಂತರ ರೂಪಾಯಿಗಳ ಸೀಕ್ರೆಟ್ ಹೊತ್ತು ಬಂದಿದ್ದಾಳೆ ಎನ್ನುವ ಪ್ರೊಮೋ ತೋರಿಸಲಾಗುತ್ತದೆ. ಆಕೆಯನ್ನು ಸಿಸಿಟಿವಿಯಲ್ಲಿ ನೋಡಿದ ಅಧಿಕಾರಿಗಳು ಗೋಲ್ಡನ್ ಗರ್ಲ್ ಲ್ಯಾಂಡ್ ಆಗಿದ್ದಾಳೆ ಎಂದಿದ್ದಾರೆ.
56
ಚೆಕ್ ಮಾಡಿದ ಅಧದಿಕಾರಿ
ಬಳಿಕ ಪೊಲೀಸರು ಚುರುಕಾಗಿದ್ದು, ವಿಮಾನ ನಿಲ್ದಾಣದ ಕಡೆಗೆ ಹೋಗಿದ್ದಾರೆ. ಬಳಿಕ ಅಧಿಕಾರಿಯೊಬ್ಬರು ನಿಮ್ಮನ್ನು ಚೆಕ್ ಮಾಡಬೇಕು ಎಂದಿದ್ದಾರೆ.
66
ಆಪರೇಷನ್ ಬಂಗಾರ
ಆಕೆಯನ್ನು ಚೆಕ್ ಮಾಡಿದಾಗ ಸೊಂಟದಲ್ಲಿ ಬಂಗಾರ ಸಿಕ್ಕಿದೆ. ಬಳಿಕ ಆಪರೇಷನ್ ಬಂಗಾರ ಎನ್ನುವ ಶೀರ್ಷಿಕೆಯ ಪ್ರೊಮೋ ಬಂದಿದೆ. ಇದೇನಿದು ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.