ನೇಹಾಗೆ ಸ್ಯಾಮ್‌ ಸಮೀರ್‌ ಕೊಟ್ಟ ‘ವರ್ಲ್ಡ್ ಲಾರ್ಜೆಸ್ಟ್‌’ ಬೊಕ್ಕೆ; ಕನ್ನಡ ಯುಟ್ಯೂಬರ್‌ ಪ್ರಪೋಸಲ್‌ ವಿಡಿಯೋ ವೈರಲ್‌

Published : Aug 24, 2026, 12:21 PM IST

ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್‌ ಮತ್ತು ನೇಹಾ ಗುಪ್ತ ಅವರ ಪ್ರೇಮಕಥೆ ಮದುವೆಯ ಹಂತ ತಲುಪಿದ್ದು, 40 ಸಾವಿರಕ್ಕೂ ಹೆಚ್ಚು ಹೂವುಗಳಿಂದ ಮಾಡಿದ ಭರ್ಜರಿ ಪ್ರಪೋಸಲ್‌ ಇದೀಗ ವೈರಲ್‌ ಆಗಿದೆ.

PREV
14
ಸ್ಯಾಮ್ ಸಮೀರ್‌ (Shyam) ಮತ್ತು ನೇಹಾ ಗುಪ್ತ ಪ್ರೇಮಕಥೆ

ಕನ್ನಡದ ಜನಪ್ರಿಯ ಯೂಟ್ಯೂಬರ್ ಹಾಗೂ ಕಂಟೆಂಟ್ ಕ್ರಿಯೇಟರ್ ಸ್ಯಾಮ್ ಸಮೀರ್‌ (Shyam) ಮತ್ತು ನೇಹಾ ಗುಪ್ತ ಅವರ ಪ್ರೇಮಕಥೆ ಇದೀಗ ಮದುವೆಯ ಹಂತ ತಲುಪಿದೆ. ಇಬ್ಬರೂ ವಿಭಿನ್ನ ಧರ್ಮಕ್ಕೆ ಸೇರಿದವರಾಗಿದ್ದರೂ, ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದಾರೆ. ಎರಡೂ ಕುಟುಂಬಗಳೂ ಈ ಮದುವೆಗೆ ಒಪ್ಪಿಗೆ ಸೂಚಿಸಿವೆ ಎನ್ನಲಾಗಿದೆ. ಆದರೆ ಈ ಜೋಡಿಯ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ‘ಲವ್ ಜಿಹಾದ್’ ಎಂಬ ಆರೋಪ ಮಾಡಿದ್ದಾರೆ. ಈ ಬಗ್ಗೆ ಸ್ಯಾಮ್ ಸಮೀರ್‌ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಹಾಗೂ ನೇಹಾ ನಡುವಿನ ಸಂಬಂಧ ಪ್ರೀತಿ ಮತ್ತು ಪರಸ್ಪರ ಗೌರವದಿಂದ ಕೂಡಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ನೇಹಾಗೆ ಸ್ಯಾಮ್‌ ಸಮೀರ್‌ ಭರ್ಜರಿ ಪ್ರಪೋಸ್

ನೇಹಾ ಗುಪ್ತ ಅವರಿಗೆ ಸ್ಯಾಮ್ ಸಮೀರ್‌ ನೀಡಿದ ಮದುವೆ ಪ್ರಪೋಸಲ್‌ ಇದೀಗ ಭಾರೀ ಗಮನ ಸೆಳೆಯುತ್ತಿದೆ. ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು ಹೂವುಗಳನ್ನು ಬಳಸಿ ಬೃಹತ್‌ ಬೊಕ್ಕೆ ಸಿದ್ಧಪಡಿಸಿ ಪ್ರೇಯಸಿಗೆ ಸರ್ಪ್ರೈಸ್ ನೀಡಿದ್ದಾರೆ. ಇದಕ್ಕಾಗಿ ಸ್ಯಾಮ್‌ ಹಾಗೂ ಅವರ ಸ್ನೇಹಿತರು ಹಲವು ದಿನಗಳಿಂದ ಭರ್ಜರಿ ಪ್ಲ್ಯಾನ್ ಮಾಡಿದ್ದರು. ಫೋಟೋಶೂಟ್ ನೆಪದಲ್ಲಿ ನೇಹಾ ಅವರನ್ನು ಕರೆಸಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿ ಸುಮಾರು ಎರಡು ಗಂಟೆಗಳ ಕಾಲ ಕೊಠಡಿಯಲ್ಲಿ ಇರಿಸಲಾಗಿತ್ತು.

24
‘Will You Marry Me?’ ಎಂದು ಬೆಳಗಿದ ಲೈಟ್‌ ಬೋರ್ಡ್

ನಂತರ ಕೊಠಡಿಯ ಲೈಟ್‌ಗಳನ್ನು ಆಫ್ ಮಾಡಲಾಯಿತು. ಸ್ಯಾಮ್‌ ಅವರ ಸ್ನೇಹಿತರು ಒಂದೊಂದು ಲೈಟ್‌ ಬೋರ್ಡ್ ಹಿಡಿದು ನಿಂತರು. ಎಲ್ಲರೂ ಸೇರಿ ‘WILL YOU MARRY ME’ ಎಂಬ ಸಂದೇಶವನ್ನು ಬೆಳಗಿಸಿದಾಗ ನೇಹಾ ಅವರ ಕಣ್ಣಿನ ಪಟ್ಟಿ ತೆಗೆಯಲಾಯಿತು. ಅದನ್ನು ನೋಡಿದ ನೇಹಾ ಭಾವುಕರಾಗಿ, ಖುಷಿಯಿಂದಲೇ “Of course I will marry you” ಎಂದು ಹೇಳಿ ಮದುವೆ ಪ್ರಪೋಸಲ್‌ ಒಪ್ಪಿಕೊಂಡಿದ್ದಾರೆ.

ನೇಹಾ ಯಾರು?

ನೇಹಾ ಗುಪ್ತ ಬೆಂಗಳೂರಿನವರು ಎನ್ನಲಾಗಿದ್ದು, ಕೇಕ್‌ ತಯಾರಿಸಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ. ವಿವಿಧ ಸಂದರ್ಭಗಳಿಗೆ ಅನುಗುಣವಾಗಿ ಕೇಕ್‌ಗಳನ್ನು ಸಿದ್ಧಪಡಿಸುತ್ತಾರೆ. ಅವರು TEDx ಹಾಗೂ Josh Talk ಸ್ಪೀಕರ್‌ ಆಗಿಯೂ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ನೇಹಾ ಅವರ ಕುಟುಂಬ ಮತ್ತು ಶಿಕ್ಷಣದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.

34
ನೇಹಾ ಬಂದ ಮೇಲೆ ನನ್ನ ಜೀವನವೇ ಬದಲಾಯಿತು

ಪ್ರಪೋಸಲ್‌ ವೇಳೆ ಸ್ಯಾಮ್‌ ಸಮೀರ್‌ ತಮ್ಮ ಪ್ರೀತಿಯ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ. ನಾನು ಪ್ರೀತಿ-ಪ್ರೇಮದಿಂದ ದೂರ ಓಡುತ್ತಿದ್ದವನು. ಆದರೆ ನೇಹಾ ನನ್ನ ಜೀವನಕ್ಕೆ ಬಂದ ನಂತರ, ನನ್ನನ್ನು ನನ್ನಂತೆಯೇ ಇರಲು ಬಿಟ್ಟಿದ್ದಾಳೆ. ನನ್ನನ್ನು ಕಂಟ್ರೋಲ್ ಮಾಡದೆ ಸ್ವಾತಂತ್ರ್ಯ ನೀಡಿದ್ದಾಳೆ. ಅದಕ್ಕಾಗಿ ಧನ್ಯವಾದಗಳು ಎಂದು ಸ್ಯಾಮ್‌ ಸಮೀರ್‌ ಹೇಳಿದ್ದಾರೆ.

ಗಿನ್ನಿಸ್‌ ರೆಕಾರ್ಡ್‌ ಹಂತದಲ್ಲಿರುವ ಬೊಕ್ಕೆ

ಈ ಪ್ರಪೋಸಲ್‌ನ ಮತ್ತೊಂದು ವಿಶೇಷತೆ ಬರೋಬ್ಬರಿ 40,000ರಿಂದ 45,000 ಹೂವುಗಳಿಂದ ಸಿದ್ಧಪಡಿಸಿದ ಬೃಹತ್ ಬೊಕ್ಕೆ. ಇಷ್ಟು ದೊಡ್ಡ ಪ್ರಮಾಣದ ಹೂವುಗಳನ್ನು ಬಳಸಿ ಸಿದ್ಧಪಡಿಸಿರುವ ಈ ಬೊಕ್ಕೆ ಗಿನ್ನಿಸ್‌ ವಿಶ್ವ ದಾಖಲೆಯ ಹಂತದಲ್ಲಿದೆ ಎಂದು ಹೇಳಲಾಗಿದೆ. ಈ ಸರ್ಪ್ರೈಸ್‌ ಪ್ರಪೋಸಲ್‌ ಯಶಸ್ವಿಯಾಗಲು 150ಕ್ಕೂ ಹೆಚ್ಚು ಟೀಮ್‌ ಸದಸ್ಯರು ಕೆಲಸ ಮಾಡಿದ್ದಾರೆ. ಮಳೆಯ ಆತಂಕದ ನಡುವೆಯೂ ಎಲ್ಲರೂ ಸೇರಿ ಸ್ಯಾಮ್‌ ಅವರ ಪ್ಲ್ಯಾನ್‌ ಅನ್ನು ಯಶಸ್ವಿಗೊಳಿಸಿದ್ದಾರೆ.

44
ಕುಟುಂಬಸ್ಥರು, ಸ್ನೇಹಿತರ ಸಂಭ್ರಮ

ಸ್ಯಾಮ್‌ ಅವರ ತಂದೆ-ತಾಯಿ, ಅತ್ತೆ-ಮಾವ ಹಾಗೂ ಸ್ನೇಹಿತರು ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಸ್ಯಾಮ್‌ ಅವರ ತಾತಾಜಿ ಕೂಡ ಇಷ್ಟು ದೊಡ್ಡ ಬೊಕ್ಕೆಯನ್ನು ತಮ್ಮ ಜೀವನದಲ್ಲಿ ನೋಡಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಫಿಟ್‌ನೆಸ್ ಕೋಚ್ ಶ್ರವಣ್‌ ಅವರು, ವರ್ಲ್ಡ್ ಲಾರ್ಜೆಸ್ಟ್ ಬೊಕ್ಕೆ ಕೊಟ್ಟಿದ್ದಾನೆ. ಮದುವೆ ಲಿಸ್ಟ್ ರೆಡಿಯಾಗಿದೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಇದು ಕೇವಲ ಬೃಹತ್‌ ಹೂವಿನ ಬೊಕ್ಕೆ ಅಥವಾ ದಾಖಲೆಯ ಪ್ರಯತ್ನವಲ್ಲ. ತಮ್ಮ ಪ್ರೀತಿಯನ್ನು ನೇಹಾಗೆ ವಿಶೇಷವಾಗಿ ವ್ಯಕ್ತಪಡಿಸಲು ಸ್ಯಾಮ್‌ ಸಮೀರ್‌ ಮಾಡಿದ ದೊಡ್ಡ ಪ್ರಯತ್ನ ಎನ್ನಬಹುದು. ಇದೀಗ ಈ ಜೋಡಿಯ ಮದುವೆ ಯಾವಾಗ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories