ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಂತರ ನಿವೇದಿತಾ ಗೌಡ ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಆರ್ಥಿಕವಾಗಿ ಸದೃಢರಾಗಲು ಐಟಂ ಸಾಂಗ್ ಮಾಡಲು ಸಿದ್ಧರಿರುವುದಾಗಿ ಹೇಳಿಕೊಂಡಿರುವ ಅವರು, ತಮ್ಮನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿ ಸಿಕ್ಕರೆ ಎರಡನೇ ಮದುವೆಯಾಗುವ ಬಗ್ಗೆಯೂ ಮಾತನಾಡಿದ್ದಾರೆ.
Bigg Bossನಿಂದ ಫೇಮಸ್ ಆಗಿರೋ ನಿವೇದಿತಾ ಗೌಡ (Niveditha Gowda) ಅವರ ಲೆವೆಲ್ಲೇ ಈಗ ಬೇರೆಯಾಗಿದೆ. ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್ ಪಡೆದ ಬಳಿಕ, ಫಾರಿನ್ ಟೂರ್ ಹೆಚ್ಚಾಗಿದೆ, ಜೊತೆಗೆ ತುಂಡುಡುಗೆ ಕುಣಿತವೂ ಅಷ್ಟೇ ಜೋರಾಗಿದೆ. ವಾಣಿ ಎನ್ನುವ ಸ್ನೇಹಿತೆಯ ಜೊತೆ ಟ್ರೋಲ್ ಆಗುವಂಥ ರೀಲ್ಸ್ ಮಾಡುತ್ತಾ ಅಷ್ಟೇ (ಕು)ಖ್ಯಾತಿಯನ್ನೂ ಗಳಿಸುತ್ತಿದ್ದಾರೆ. ಟ್ರೋಲ್ ಆದಷ್ಟೂ ಹೆಚ್ಚು ಹೆಚ್ಚು ಫೇಮಸ್ ಆಗುತ್ತಾ, ಹೆಚ್ಚಿಗೆ ದುಡಿಯುತ್ತಿದ್ದಾರೆ. ಇಂಥವರಿಗಾಗಿಯೇ ಕಾದು ಕುಳಿತಿರುವ ಕೆಲವು ರಿಯಾಲಿಟಿ ಷೋಗಳಲ್ಲಿಯೂ ಭರ್ಜರಿ ಆಫರ್ ಪಡೆಯುತ್ತಿದ್ದಾರೆ.
27
ಬೇರೆಯದ್ದೇ ಲೆವೆಲ್ನಲ್ಲಿ ನಿವೇದಿತಾ
ಒಟ್ಟಿನಲ್ಲಿ ನಿವೇದಿತಾ ಗೌಡ ಅವರ ರೇಂಜ್ ಇದೊಂದು ವರ್ಷದಲ್ಲಿ ಬೇರೆಯದ್ದೇ ಲೆವೆಲ್ಲಿಗೆ ಹೋಗಿದೆ ಎನ್ನಬಹುದು. ಇನ್ನೂ ವಯಸ್ಸು 20 ಇರುವಾಗಲೇ ಬಿಗ್ಬಾಸ್ ಮನೆಯಲ್ಲಿ ಸಹ ಸ್ಪರ್ಧಿಯಾಗಿದ್ದ ಚಂದನ್ ಶೆಟ್ಟಿಯವರ ಲವ್ಗೆ ಬಿದ್ದು, ಮೈಸೂರು ದಸರಾ ವೇದಿಕೆಯಲ್ಲಿ ಪ್ರಪೋಸ್ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗುವುದರಿಂದ ಹಿಡಿದು, ಇಂದಿನವರೆಗೂ ನಿವೇದಿತಾ ಸದಾ ಸುದ್ದಿಯಲ್ಲಿರುವ ಯುವತಿಯೇ.
37
ಮಗಳನ್ನು ಮೀರಿಸೋ ಅಮ್ಮ
ತಾಯಿ ಹೇಮಾ ಅವರು ಕೂಡ ಮಗಳಿಗೆ ಕಮ್ಮಿ ಇಲ್ಲದಂತೆ ರೀಲ್ಸ್ ಮಾಡುತ್ತಾರೆ. ಆದರೆ ಅವರು ಸೀರೆಯುಟ್ಟು ಲಕ್ಷಣವಾಗಿ ರೀಲ್ಸ್ ಮಾಡುವುದನ್ನು ನೋಡಿ ನಿಮ್ಮ ಮಗಳಿಗೆ ಬುದ್ಧಿ ಹೇಳಬಾರದಾ ಎಂದು ಹೇಳುವವರು ಹಲವರು. ಮತ್ತೆ ಇದರಲ್ಲಿಯೂ ನೆಗೆಟಿವ್ ಹುಡುಕುವ ಮಂದಿ, ಅಮ್ಮನೇ ಹೀಗೆ, ಇನ್ನು ಮಗಳು ಹೇಗೆ ಎನ್ನುವವರೂ ಇದ್ದಾರೆ. ಅದೇನೇ ಇದ್ದರೂ ಅಮ್ಮ-ಮಗಳು ಇಬ್ಬರೂ ಟ್ರೋಲ್ಸ್ಗೆ ಡೋಂಟ್ ಕೇರ್.
ಒಟ್ಟಿನಲ್ಲಿ ನಿವೇದಿತಾ ಅವರಿಗೆ ಐಷಾರಾಮಿ ಜೀವನ ಬೇಕು. ಇದೇ ಕಾರಣಕ್ಕೆ ತಮಗೂ ಈಕೆಗೂ ಹೊಂದಾಣಿಕೆ ಆಗಿಲ್ಲ ಎಂದೂ ಚಂದನ್ ಶೆಟ್ಟಿ (Chandan Shetty) ಹೇಳಿದ್ದು ಇದೆ. ಆದರೆ ನಿವೇದಿತಾ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಐಷಾರಾಮಿ ಜೀವನಕ್ಕೆ ತಾವೇ ದುಡಿದುಕೊಂಡು ಮಾದರಿ ಕೂಡ ಆಗಿದ್ದಾರೆ. ಫೈನಾನ್ಷಿಯಲಿ ನಾನು ಯಾರ ಸಹಾಯವನ್ನೂ ಕೇಳುವವಳಲ್ಲ, ಚಂದನ್ ಶೆಟ್ಟಿ ಜೊತೆಗೆ ಇರುವಾಗಲೂ ನನ್ನದೇ ದುಡ್ಡಿನಿಂದ ವಸ್ತು ಖರೀದಿಸುತ್ತಿದ್ದೆ ಎಂದಿದ್ದಾರೆ.
57
ಐಟಂ ಸಾಂಗ್ (Item Song)ಗೂ ರೆಡಿ
ಆರ್ಥಿಕ ಸ್ವಾವಲಂಬಿಯಾಗಿ ಬದುಕಬೇಕು ಎನ್ನುವ ಗುರಿ ಇಟ್ಟುಕೊಂಡಿರುವ ನಿವೇದಿತಾ ಗೌಡ, ಇದಕ್ಕಾಗಿ ಈಗ ಯಾವ ಹಂತಕ್ಕಾದರೂ ಹೋಗಲು ರೆಡಿ ಇದ್ದಾರೆ. ಸಿನಿಮಾದಲ್ಲಿ ನಟನೆ ಮಾಡುವ ಆಸೆ ಇದೆ. ಅದು ಸಿಗದೇ ಹೋದರೆ ಐಟಂ ಸಾಂಗ್ ಆದ್ರೂ ಓಕೆ, ನನಗೆ ದುಡ್ಡು ಬೇಕು ಅರ್ಥಾತ್ Finacially strong ಆಗಬೇಕು. ಅದಕ್ಕಾಗಿ ನನಗೆ ಇಷ್ಟವಾದದ್ದನ್ನು ನಾನು ಏನು ಬೇಕಾದರೂ ಮಾಡಲು ಸೈ ಎಂದು ಧೈರ್ಯದಿಂದ ಹೇಳಿದ್ದಾರೆ ನಟಿ.
67
ಉದ್ಯೋಗಕ್ಕೂ ಸೈ
ನನಗೆ ಎಂಬಿಎ ಮಾಡುವ ಆಸೆ ಇತ್ತು. ಅದೀಗ ಸಾಧ್ಯವಿಲ್ಲ. ಆದರೆ ಮನಸ್ಸು ಬಂದರೆ ಅದನ್ನೂ ಮಾಡಿ ಯಾವುದಾದರೂ ಕಂಪೆನಿಯಲ್ಲಿ ಉದ್ಯೋಗ ಕೂಡ ಮಾಡಬಲ್ಲೆ ಎನ್ನುವ ಮೂಲಕ ಜೀವನಕ್ಕೆ ಬೇಕಾಗುವ ಹಣ ಸಂಪಾದನೆಗೆ ಯಾವ ರೇಂಜಿಗೂ ಹೋಗಲು ಸಿದ್ಧ ಎನ್ನುವ ಬಗ್ಗೆ ಮಾತನಾಡಿದ್ದಾರೆ.
77
ಎರಡನೆಯ ಮದುವೆ ಬಗ್ಗೆ ನಿವೇದಿತಾ ಗೌಡ
ಇದೇ ವೇಳೆ ಮದುವೆಯ ಬಗ್ಗೆಯೂ ಹೇಳಿರುವ ನಿವೇದಿತಾ (Niveditha Gowda about second marriage) ನನ್ನನ್ನು ಅರ್ಥಮಾಡಿಕೊಳ್ಳುವವ ಸಿಕ್ಕರೆ ಮತ್ತೊಂದು ಮದುವೆಯಾಗುತ್ತೇನೆ. ಆದರೆ ಸದ್ಯ ಆ ವಿಷಯ ಕೇಳಿದರೇನೇ ಭಯ ಆಗುತ್ತದೆ. ಮುಂದೆ ಆಗುತ್ತೇನೆ ಎಂದಿದ್ದಾರೆ.