ಕ್ವಾಟ್ಲೆ ಕಿಚನ್ ರಿಯಾಲಿಟಿ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು, ಇದೊಂದು ಕಾಮಿಡಿ ಕುಕ್ಕಿಂಗ್ ಶೋ ಆಗಿದೆ. ಈ ಶೋನಲ್ಲಿ ನಟಿ ಶ್ರುತಿ, ಶೆಫ್ ಕೌಶಿಕ್ ತೀರ್ಪುಗಾರರಾಗಿದ್ದರೆ, ಅನುಪಮಾ ಗೌಡ (Anupama Gowda), ಕುರಿ ಪ್ರತಾಪ್ ನಿರೂಪಕರಾಗಿದ್ದಾರೆ. ನಿವೇದಿತಾ ಗೌಡ, ದಿಲೀಪ್ ಶೆಟ್ಟಿ, ಧನರಾಜ್ ಆಚಾರ್, ಶಿಲ್ಪಾ ಕಾಮತ್, ಸೋನಿ, ಪ್ರೇರಣಾ ಕಂಬಂ ಸೇರಿ ಹಲವು ತಾರೆಯರು ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ.