ಚಿನ್ನುಮರಿ ನೆಮ್ಮದಿಗೆ ಕುತ್ತು ತಂದ ತನು; ಮರಭೂಮಿಯಲ್ಲಿ ನೀರು ಹುಡುಕ್ತಿರೋ ಜಯಂತ್‌ಗೆ ಇಷ್ಟು ಸಾಕು!

Published : Jul 04, 2025, 08:12 PM IST

Kannada Serial Lakshmi Nivasa: ಜಯಂತ್ ಜಾನುವನ್ನು ಹುಡುಕಲು ಪ್ರಯತ್ನಿಸುತ್ತಿದ್ದಾನೆ. ಗೂಬೆಯನ್ನು ಪತ್ತೆ ಹಚ್ಚಲು ಜಯಂತ್ ತನಿಖೆ ನಡೆಸುತ್ತಿದ್ದಾನೆ. 

PREV
16

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಇನ್ಮುಂದೆ ಸೋಮವಾರದಿಂದ ಶುಕ್ರವಾರದವರೆಗೆ 8.30ಕ್ಕೆ ಪ್ರಸಾರವಾಗಲಿದೆ. ಇಷ್ಟು ಒಂದು ಗಂಟೆ ಪ್ರಸಾರವಾಗುತ್ತಿದ್ದ ಲಕ್ಷ್ಮೀ ನಿವಾಸ, ಕರ್ಣನಿಗೆ ದಾರಿ ಮಾಡಿಕೊಟ್ಟಿದೆ. ನರಸಿಂಹನ ಮನೆಯಲ್ಲಿ ಆಶ್ರಯಪಡೆದುಕೊಂಡಿರುವ ಜಾನು ನೆಮ್ಮದಿಗೆ ತನು ಕುತ್ತು ತಂದಿದ್ದಾಳೆ.

26

ನರಸಿಂಹನ ಮನೆಗೆ ಬಂದಿರುವ ಜಾನು ತನ್ನ ಹೆಸರು ಚಂದನಾ ಎಂದು ಬದಲಿಸಿಕೊಂಡಿದ್ದಾಳೆ. ಮನೆಗೆ ವೆಂಕಿ, ಚೆಲುವಿ, ಸಂತೋಷ್ ಬಂದ್ರೂ ಜಾನು ಯಾರಿಗೂ ಮುಖ ತೋರಿಸಿಲ್ಲ. ಅಷ್ಟೇ ಅಲ್ಲ ದೇವಸ್ಥಾನದಲ್ಲಿ ವೀಣಾ ಅತ್ತಿಗೆ ಮತ್ತು ಆಪ್ತ ಗೆಳೆಯ ವಿಶ್ವನನ್ನು ನೋಡದರೂ ಜಾನು ಅಂತರ ಕಾಯ್ದುಕೊಂಡಿದ್ದಳು.

36

ಜಾನು ಒಳ್ಳೆಯ ಸಿಂಗರ್ ಅನ್ನೋದು ಎಲ್ಲರಿಗೂ ಗೊತ್ತು. ಈ ಹಿಂದೆ ಜಾನು ಹಾಡು ಹೇಳುತ್ತಿರೋದನ್ನು ರೆಕಾರ್ಡ್ ಮಾಡಿದ್ದ ತನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಜಾನು ಕೋಪಗೊಳ್ಳುತ್ತಿದ್ದಂತೆ ಎಲ್ಲಾ ವಿಡಿಯೋವನ್ನು ಡಿಲೀಟ್ ಮಾಡಿದ್ದಳು. ವಿಶ್ವ ವಿಡಿಯೋ ಡೌನ್‌ಲೋಡ್ ಮಾಡುವಷ್ಟರಲ್ಲಿ ಡಿಲೀಟ್ ಆಗಿತ್ತು.

46

ಇದೀಗ ತನು ಮತ್ತೆ ಜಾನು ಹಾಡು ಹೇಳುತ್ತಿರೋದನ್ನು ವಿಡಿಯೋ ಮಾಡಿದ್ದಾಳೆ. ಆದ್ರೆ ಈ ವಿಡಿಯೋದಲ್ಲಿ ಜಾನು ಮುಖ ಕಾಣಿಸುತ್ತಿಲ್ಲ. ಜಾನು ಒಪ್ಪಿಗೆ ಇಲ್ಲದೇ ವಿಡಿಯೋ ಮಾಡಿರುವ ತನು, ಅದನ್ನು ಸೋಶಿಯಲ್ ಮೀಡಿಯಾದಲ್ಲಿಯೇ ಅಪ್ಲೋಡ್ ಮಾಡಿದ್ದಾಳೆ. ಈ ಮೂಲಕ ಜಾನು ಪ್ರತಿಭೆಗೆ ಒಳ್ಳೆ ಬೆಲೆ ಸಿಗಬೇಕು ಅನ್ನೋದು ತನು ಉದ್ದೇಶವಾಗಿತ್ತು.

56

ತನು ಉದ್ದೇಶ ಒಳ್ಳೆಯದಾದರೂ ಇದು ಜಾನು ನೆಮ್ಮದಿಗೆ ಕುತ್ತು ತರೋದು ಗ್ಯಾರಂಟಿ. ಜಾನು ಉಸಿರನ್ನು ಕಂಡು ಹಿಡಿಯುವಷ್ಟು ಜಾಣ ನಮ್ಮ ಜಯಂತ್. ಒಂದೇ ಒಂದು ಸುಳಿವಿಗಾಗಿ ಜಯಂತ್ ಕಾಯುತ್ತಿದ್ದಾನೆ. ತನ್ನೊಂದಿಗೆ ಜಾನು ಇಲ್ಲದಿದ್ದರೂ ಆಕೆಯ ಹಾಡುಗಳನ್ನು ಜಯಂತ್ ಕೇಳುತ್ತಿರುತ್ತಾನೆ. ಇದೀಗ ತನು ಅಪ್ಲೋಡ್ ಮಾಡಿರುವ ವಿಡಿಯೋ ನೋಡಿದ್ರೆ ಜಯಂತ್, ಚಿನ್ನುಮರಿಯನ್ನು ಹುಡುಕಿಕೊಂಡು ಬರೋದು ಗ್ಯಾರಂಟಿ.

66

ಮನೆಯಲ್ಲಿ ಸಿಕ್ಕಿರುವ ಪತ್ರದಲ್ಲಿ ಗೂಬೆ ಹೆಸರನ್ನು ನೋಡಿ ಆತನನ್ನು ಪತ್ತೆ ಮಾಡಲು ಜಯಂತ್ ಮುಂದಾಗಿದ್ದಾನೆ. ಜಾನು ಜೊತೆ ಓದಿದ ಯುವಕ/ತಿಯರನ್ನು ಕರೆಸಿ ಪತ್ತೆದಾರಿಕೆ ಕೆಲಸ ಮಾಡುತ್ತಿದ್ದಾನೆ. ಮನೆಗೆ ಬಂದ ಸಚಿನ್ ಮುಂದೆಯೂ ತನ್ನ ಗೋಳನ್ನು ಹೇಳಿಕೊಂಡು ಜಯಂತ್ ಕಣ್ಣೀರು ಹಾಕಿದ್ದನು. ಹಾಗೆ ಮನೆಯಲ್ಲಿರುವ ಶಾಂತಮ್ಮ ಮುಂದೆ ತನ್ನ ಗೆಳೆಯ ಸಚಿನ್ ಒಳ್ಳೆಯವನಲ್ಲ ಎಂದು ಚಾಡಿ ಹೇಳಿದ್ದನು.

Read more Photos on
click me!

Recommended Stories