Kiran Raj Birthday: ಸಿನಿಮಾ ಬಿಡುಗಡೆಗೂ ಮುನ್ನ ಅಪಘಾತ… ಸೀರಿಯಲ್ ಪ್ರಸಾರಕ್ಕೂ ಮುನ್ನ ತಡೆ… ಆದರೂ ಇವರು ಕನ್ನಡಿಗರ ಫೇವರಿಟ್

Published : Jul 05, 2025, 02:35 PM ISTUpdated : Jul 05, 2025, 02:46 PM IST

ಕನ್ನಡ ಕಿರುತೆರೆ ನಟ ಕಿರಣ್ ರಾಜ್ ಅವರು ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳ ಫೇವರಿಟ್ ನಟನ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. 

PREV
18

ಕನ್ನಡ ಕಿರುತೆರೆಯಲ್ಲಿ ಕನ್ನಡತಿ ಧಾರಾವಾಹಿಯ (Kannadathi Serial) ಮೂಲಕ ಮೋಡಿ ಮಾಡಿದ ನಟ ಕಿರಣ್ ರಾಜ್. ನಟಿಸಿದ ಮೊದಲ ಸೀರಿಯಲ್ ಇದಾಗಿರದೇ ಇದ್ದರೂ ಸಹ, ಕನ್ನಡತಿ ನೀಡಿದಷ್ಟೂ ಜನಪ್ರಿಯತೆ ಬೇರೆ ಯಾವ ಧಾರವಾಹಿಯೂ ನೀಡಿರಲಿಲ್ಲ. ವೀಕ್ಷಕರ ಫೇವರಿಟ್ ನಟ ಕಿರಣ್ ರಾಜ್ ಇಂದು ಜುಲೈ 5 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

28

ಮಾಡೆಲ್ ಆಗಿ ಮನರಂಜನಾ ಜಗತ್ತಿಗೆ ಎಂಟ್ರಿ ಕೊಟ್ಟ ಕಿರಣ್ ರಾಜ್ (Kiran Raj) ಮೊದಲ ಬಾರಿಗೆ ಕಿರುತೆರೆಗೆ ಕಾಲ್ಲಿಟ್ಟದ್ದು ಹಿಂದಿ ಸೀರಿಯಲ್ ಗಳ ಮೂಲಕ. ಹಿಂದಿಯಲ್ಲಿ ಜನಪ್ರಿಯ ಯೆ ರಿಸ್ತಾ ಕ್ಯಾ ಕೆಹ್ಲಾತಾ ಹೇ ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ತು ಆಶಿಕಿ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

38

ಅದಾದ ನಂತರ ಈ ಕನ್ನಡದ ಹುಡುಗ ಕನ್ನಡ ಮನರಂಜನಾ ಜಗತ್ತಿಗೆ ಎಂಟ್ರಿ ಕೊಟ್ಟರು. ಲೈಫು ಸೂಪರ್ ಗುರು ನಲ್ಲಿ ಕಾಣಿಸಿಕೊಂಡ ಕಿರಣ್ ರಾಜ್, ಬಳಿಕ ದೇವತೆ, ಚಂದ್ರಮುಖಿ, ಕಿನ್ನರಿ ಬಳಿಕ ಕನ್ನಡತಿ ಧಾರಾವಾಹಿಯಲ್ಲಿ ನಟಿಸಿದ್ದರು.

48

ಇದೀಗ ಝೀ ಕನ್ನಡದ ಕರ್ಣ ಧಾರಾವಾಹಿಯಲ್ಲಿ (Karna Serial) ಡಾಕ್ಟರ್ ಕರ್ಣನಾಗಿ ಕಿರಣ್ ರಾಜ್ ನಟಿಸುತ್ತಿದ್ದಾರೆ. ಹಲವು ವರ್ಷಗಳ ನಂತರ ಕಿರಣ್ ರಾಜ್ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿರೋದು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.

58

ಜೂನ್ ತಿಂಗಳಲ್ಲಿ ಕರ್ಣ ಸೀರಿಯಲ್ ಪ್ರಸಾರವಾಗಬೇಕಿತ್ತು. ಆದರೆ ಸೀರಿಯಲ್ ಆರಂಭಕ್ಕೂ ಮುನ್ನ ಮತ್ತೊಂದು ಖಾಸಗಿ ವಾಹಿನಿ ಪ್ರಸಾರಕ್ಕೆ ತಡೆ ನೀಡಿತ್ತು. ಭವ್ಯಾ ಗೌಡ ಎಂಗ್ರಿಮೆಂಟ್ ಸಮಸ್ಯೆಯಿಂದಾಗಿ ಧಾರಾವಾಹಿಗೆ ತಡೆಯಾಗಿತ್ತು, ಇದೀಗ ಎಲ್ಲಾ ಸಮಸ್ಯೆ ಬಗೆಹರಿದು ಸೀರಿಯಲ್ ಮತ್ತೆ ಬಿಡುಗಡೆಯಾಗಿದೆ.

68

ಇದಕ್ಕೂ ಮೊದಲು ಕಿರಣ್ ರಾಜ್ ಅಭಿನಯದ ರಾನಿ ಚಿತ್ರದ ವೇಳೆಯೂ ಇದೇ ರೀತಿ ಸಮಸ್ಯೆ ಎದುರಾಗಿತ್ತು. ರಾನಿ ಚಿತ್ರ ನಾಳೆ ಬಿಡುಗಡೆಯಾಗುತ್ತೆ ಎನ್ನುವಾಗಲೇ ಕಿರಣ್ ರಾಜ್ ಚಲಾಯಿಸುತ್ತಿದ್ದ ಗಾಡಿ ಆಕ್ಸಿಡೆಂಟ್ ಆಗಿ ಆಸ್ಪತ್ರೆಗೆ ಸೇರಿದ್ದರು. ಬಳಿಕ ಡಿಸ್ಚಾರ್ಜ್ ಆಗಿತ್ತು.

78

ಕಿರಣ್ ರಾಜ್ ಸದ್ಯ ಏನೇ ಆರಂಭಿಸಿದರೂ ಅದರಲ್ಲೊಂದು ತಡೆ ಬರುತ್ತಿದೆ. ಆದರೆ ಅಭಿಮಾನಿಗಳ ಮೋಸ್ಟ್ ಫೇವರಿಟ್ ನಟನಾಗಿರುವ ಕಿರಣ್ ರಾಜ್ ಗೆ ಗೆಲುವಂತೂ ಖಚಿತಾ. ರಾನಿ ಚಿತ್ರ ತಕ್ಕ ಅಮ್ಟ್ಟಿಗೆ ಯಶಸ್ಸು ಕಂಡಿತ್ತು. ಇದೀಗ ಕರ್ಣ ಸೀರಿಯಲ್ ಕೂಡ ದೊಡ್ಡ ಮಟ್ಟದ ಯಶಸ್ಸು ಪಡೆಯುವತ್ತ ದಾಪು ಕಾಲಿಡುತ್ತಿದೆ.

88

ಸದ್ಯಕ್ಕೆ ಕಿರಣ್ ರಾಜ್ ಸೀರಿಯಲ್ ಹಾಗೂ ಸಿನಿಮಾ ಎರಡರಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ರಾನಿ ನಿರ್ದೇಶಕರ ಜೊತೆ ಮತ್ತೊಂದು ಸಿನಿಮಾದಲ್ಲಿ ಕಿರಣ್ ರಾಜ್ ನಟಿಸುತ್ತಿದ್ದಾರೆ. ಅದಷ್ಟೇ ಅಲ್ಲ ಕರ್ಣ ಸೀರಿಯಲ್ ಮೊದಲ ಎಪಿಸೋಡ್ ನೋಡಿ ಜನರಂತೂ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.

Read more Photos on
click me!

Recommended Stories