'ಎರಡನೇ ಮದುವೆಗೆ ರೆಡಿನಾ..?' ಡಿವೋರ್ಸ್‌ ಬಳಿಕ ಬಾರ್ಬಿ ಡಾಲ್‌ ಆದ ನಿವೇದಿತಾ ಗೌಡಗೆ ಫ್ಯಾನ್ಸ್‌ ಪ್ರಶ್ನೆ!

Published : Jun 28, 2024, 09:14 PM IST

ನಿವೇದಿತಾ ಗೌಡ ಬಾರ್ಬಿ ಡಾಲ್‌ ಆಗಿದ್ದಾರೆ. ವಿಭಿನ್ನ ಅವರ ಡಿಸೈನಿಂಗ್‌ ಹಾಗೂ ಸ್ಟೈಲಿಂಗ್‌ನಲ್ಲಿರುವ ಬಾರ್ಬಿ ಡಾಲ್‌ ಡ್ರೆಸ್‌ನಲ್ಲಿ ಸುಂದರವಾಗಿ ಕಂಡಿದ್ದಾರೆ. ಇದರ ವಿಡಿಯೋವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

PREV
115
'ಎರಡನೇ ಮದುವೆಗೆ ರೆಡಿನಾ..?' ಡಿವೋರ್ಸ್‌ ಬಳಿಕ ಬಾರ್ಬಿ ಡಾಲ್‌ ಆದ ನಿವೇದಿತಾ ಗೌಡಗೆ ಫ್ಯಾನ್ಸ್‌ ಪ್ರಶ್ನೆ!

ಡಿವೋರ್ಸ್‌ ಬೆನ್ನಲ್ಲಿಯೇ ನಟಿ ನಿವೇದಿತಾ ಗೌಡ ಸಖತ್‌ ಹಾಟ್‌ ಆಗಿದ್ದಾರೆ. ಇನ್ಸ್‌ಟಾಗ್ರಾಮ್‌ನಲ್ಲಿ ಶುಕ್ರವಾರ ಅವರು ಬಾರ್ಬಿಡಾಲ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

215

ವಿಭಿನ್ನ ಡಿಸೈನ್‌ & ಸ್ಟೈಲಿಂಗ್‌ನ ಆಕರ್ಷಕ ಬಾರ್ಬಿ ಡಾಲ್‌ ಡ್ರೆಸ್‌ನಲ್ಲಿ ಅವರು ಕಾಣಿಸಿಕೊಂಡಿದ್ದು, 27 ಸೆಕಂಡ್‌ನ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ.

315

ಇನ್ಸ್‌ಟಾದಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿ ನಿವೇದಿತಾ ಗೌಡ, ಈಗ ಸಂಪೂರ್ಣ ಹೊಸ ಸ್ಟೋರಿ ಎಂದು ಕ್ಯಾಪ್ಠನ್‌ಅನ್ನೂ ಅದಕ್ಕೆ ನೀಡಿದ್ದಾರೆ. 

415

ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿಯಿಂದ ಫಟಾಫಟ್‌ ಡಿವೋರ್ಸ್‌ ಪಡೆದುಕೊಂಡ ಬಳಿಕ ನಿವೇದಿತಾ ಗೌಡ ಅವರ ಮೊದಲ ಪ್ರಮೋಷನಲ್‌ ವಿಡಿಯೋ ಇದಾಗಿದೆ.

515

ಇನ್ನು ನಿವೇದಿತಾ ಗೌಡ ಅವರ ಪೋಸ್ಟ್‌ಗೆ ಎಂದಿನಂತೆ ಸಾಕಷ್ಟು ಕಾಮೆಂಟ್‌ಗಳೂ ಬಂದಿವೆ. ನೀವು ರೆಡಿ ಆಗ್ತಿರೋ ಸೂಚನೆ ನೋಡಿದ್ರೆ, 2ನೇ ಮದುವೆ ಇದ್ದ ಹಾಗೆ ಕಾಣುತ್ತಿದೆ ಎಂದು ಬರೆದಿದ್ದಾರೆ.

615

'ಇವ್ಳಿಗೆ ಡಿವೋರ್ಸ್ ಆಗಿರೋ ನೋವು ಒಂದು ಚೂರು ಇಲ್ಲ ಮಾರ್ರೆ..' ಎಂದು ಮತ್ತೊಬ್ಬರು ನಿವೇದಿತಾ ಗೌಡ ಅವರ ವಿಡಿಯೋಗೆ ಕಾಮೆಂಟ್‌ ಮಾಡಿದ್ದಾರೆ.

715

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಚಂದನ್‌ ಶೆಟ್ಟಿ, ಡಿವೋರ್ಸ್‌ ಪಡೆಯುವ ಮುಂಚೆ ಅಂದರೆ, ಕಳೆದ ಒಂದು ವರ್ಷದಿಂದಲೂ ತಾವಿಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದೆವು ಎಂದು ತಿಳಿಸಿದ್ದರು.

815

ಅದಲ್ಲದೆ, ಕಿರಿಕ್‌ ಕೀರ್ತಿ ಅವರೊಂದಿಗೆ ಯೂಟ್ಯೂಬ್‌ ಸಂದರ್ಶನದಲ್ಲೂ ಚಂದನ್‌ ಶೆಟ್ಟಿ ಇದೇ ಮಾತನ್ನು ಹೇಳಿದ್ದರು. ನಿವೇದಿತಾ ಗೌಡಗೆ ಬರುವ ಅಶ್ಲೀಲ ಕಾಮೆಂಟ್‌ಗಳ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದರು.

915

ಡಿವೋರ್ಸ್‌ ಆಗಿದ್ದರೂ ಮುಂದಿನ ದಿನಗಳಲ್ಲಿ ನಾವು ಉತ್ತಮ ಸ್ನೇಹಿತರಾಗಿಯೇ ಇರುತ್ತೇವೆ ಎಂದು ಚಂದನ್‌ ಶೆಟ್ಟಿ ಸಂದರ್ಶನದಲ್ಲಿ ತಿಳಿಸಿದ್ದರು.

1015

ನಿವೇದಿತಾ ಗೌಡ ಮಾತ್ರ ಸುದ್ದಿಗೋಷ್ಠಿಯಲ್ಲಿ ಡಿವೋರ್ಸ್‌ ಬಗ್ಗೆ ಮಾತನಾಡಿದ್ದು ಬಿಟ್ಟರೆ, ಮತ್ತೆಲ್ಲೂ ಈ ವಿಚಾರದ ಬಗ್ಗೆ ಮಾತನಾಡಿಲ್ಲ.

1115

ಕೆಲವು ದಿನಗಳ ಕಾಲ ಸೋಶಿಯಲ್‌ ಮೀಡಿಯಾದಿಂದ ದೂರವಿದ್ದ ಅವರು ಇತ್ತೀಚೆಗೆ ಮತ್ತೆ ಆಕ್ಟೀವ್‌ ಆಗಿ ವಿಡಿಯೋಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ.

1215

'ಏನು ಶೋಕಿ ಗುರು ಇದು...... ಪಾಪ ಚಂದನ್ , ... ಒಳ್ಳೇದೇ ಆಯಿತು ಡೈವೋರ್ಸ್ ಕೊಟ್ಟು.' ಎಂದು ನಿವೇದಿತಾ ಗೌಡ ಅವರ ವಿಡಿಯೋಗೆ ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ..

1315

'ಥೂ ನಿನಾ ನಿನ್ ಜನಮಕ್ಕೆ ಇಷ್ಟು ಬೆಳಿಯೋಕೆ ಚಂದನ್ ಬೇಕಿತ್ತು ಈವಾಗ ಬೆಡ್ ಅಲ್ಲ್ವಾ ಥೂ ನಿನ್ನ..' ಎಂದು ಈ ವಿಡಿಯೋಗೆ ಅಭಿಮಾನಿಯೊಬ್ಬರು ಪೋಸ್ಟ್‌ ಮಾಡಿದ್ದಾರೆ.

1415

'ಎರಡನೇ ಮದುವೆಗೆ ರೆಡಿಯಾಗುತ್ತಿದ್ದಾರೆ ನಮ್ಮ ನಿವೇದಿತಾ ಗೌಡ ಅವರು..' ಎಂದು ಹೇಳುವ ಮೂಲಕ ನೆಟ್ಟಿಗರೊಬ್ಬರು ದೊಡ್ಡ ಅನುಮಾನದ ಹುಳ ಬಿಟ್ಟಿದ್ದಾರೆ.

1515

'ಆಹಾ ನಿನ್ನಂತೋರ್ನೆ ನೋಡಿ ಕಲಿಬೇಕು ಈಗಿನ ಕಾಲದ ಹೆಣ್ಮಕ್ಳು..' ಎಂದು ನಿವೇದಿತಾ ಗೌಡ ಅವರ ವಿಡಿಯೋಗೆ ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories