ಯೆಲ್ಲೋ ಸೀರೆಯ ಶಿಲಾಬಾಲಿಕೆಯೇ ಅನುಪಮಾ ಗೌಡ: ಜ್ಯೂನಿಯರ್ ಜೆನಿಲಿಯಾ ಎಂದ ಫ್ಯಾನ್ಸ್‌!

First Published | Jun 27, 2024, 9:59 PM IST

ಬಿಗ್ ಬಾಸ್ ಸ್ಪರ್ಧಿ, ನಿರೂಪಕಿ ಮತ್ತು ಕಿರುತೆರೆ ನಟಿ ಅನುಪಮಾ ಗೌಡ ಯೆಲ್ಲೋ ಸೀರೆಯುಟ್ಟು ಮುದ್ದಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಅನುಪಮಾ ಅಂದ ನೋಡಿ ಜ್ಯೂನಿಯರ್ ಜೆನಿಲಿಯಾ ಎಂದು ಹಾಡಿ ಹೊಗಳಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ, ನಿರೂಪಕಿ ಮತ್ತು ಕಿರುತೆರೆ ನಟಿ ಅನುಪಮಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಸದ್ಯ ಕ್ಲಾಸೀ ಯೆಲ್ಲೋ ಸ್ಯಾರಿ ಧರಿಸಿ ಮುದ್ದಾಗಿ ಪೋಟೋಗೆ ಫೋಸ್‌ ನೀಡಿದ್ದಾರೆ.

ಅನುಪಮಾ ಗೌಡ, ಯೆಲ್ಲೋ ಸೀರೆಯುಟ್ಟು ಕಂಗೊಳಿಸಿದ್ದಾರೆ. ಇದಕ್ಕೆ ಸುಂದರವಾದ ನೆಕ್ಲೇಸ್ ಸೆಟ್ ಹಾಕ್ಕೊಂಡು ಕಪ್ಪು ಬಿಂದಿಯನ್ನು ಹಣೆಗೆ ಇಟ್ಟುಕೊಂಡಿದ್ದಾರೆ. ಮುಖದ ಮೇಲೆ ಹಾರುವ ಮುಂಗುರುಳಿನ ಜೊತೆ ಅನುಪಮಾ ತುಂಬಾ ಅದ್ಭುತವಾಗಿ ಕಾಣಿಸುತ್ತಿದ್ದಾರೆ.

Tap to resize

ಅನುಪಮಾ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಲೈಕ್ಸ್‌, ಹಾರ್ಟ್ ಎಮೋಜಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅನುಪಮಾ ಅಂದ ನೋಡಿ ಜ್ಯೂನಿಯರ್ ಜೆನಿಲಿಯಾ ಎಂದು ಹಾಡಿ ಹೊಗಳಿದ್ದಾರೆ.

ನಿನ್ನ ನಗುವನ್ನು ನೋಡಿ ನಾ ನಾಚಿದೆ, ಸೋ ಕ್ಯೂಟ್, ನಗು ಚೆಂದ, ಸೊ ಸೂಪರ್ ಸ್ಟಾರ್ ಸುಂದರಿ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿ ಹೊಗಳಿದ್ದಾರೆ. ಮತ್ತೆ ಕೆಲವರು ಸದಾ ಎವರ್ಗ್ರೀನ್ ಸುಂದರಿ, ಮುದ್ದು ಗೊಂಬೆ, ಸೂಪರ್ ಅನು ಎಂದು ಕಾಮೆಂಟ್ ಮಾಡಿದ್ದಾರೆ.

ಅಕ್ಕ ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದ ನಟಿ ಅನುಪಮಾ ಗೌಡ. ಕನ್ನಡದ ಕಿರುತೆರೆ ನಟಿ 'ಅಕ್ಕ' ಸೀರಿಯಲ್‌ನಲ್ಲಿ ಭೂಮಿಕಾ ಮತ್ತು ದೇವಿಕಾ ಎಂಬ ಎರಡು ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದವರು. 

ಆ ನಂತರ ಬಿಗ್ ಬಾಸ್ ಮೂಲಕ ಹೆಚ್ಚು ಜನಪ್ರಿಯತೆ ಪಡೆದಿದ್ದರು. ಅದರಿಂದ ಬಂದ ಮೇಲೆ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಅನುಪಮಾ ನಿರೂಪಕಿಯಾಗಿ ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ. 

ಈ ಗೆಲುವೇ ಅವರನ್ನು ಎರಡು ಬಾರಿ ಬಿಗ್ ಬಾಸ್ ಮನೆಗೆ ಹೋಗುವಂತೆ ಮಾಡಿತ್ತು. ಆ ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಪಮಾ ನಾಯಕಿಯಾಗಿ ನಟಿಸಿದ್ದರು. ಆ ಕರಾಳ ರಾತ್ರಿ ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. 

ನಟಿ ಅನುಪಮಾ ಗೌಡ ಅವರಿಗೆ ಪ್ರವಾಸಕ್ಕೆ ಹೋಗೋದು ಅಂದ್ರೆ ತುಂಬಾ ಇಷ್ಟ ಅಂತೆ. ಆಗಾಗ ಟ್ರಿಪ್ ಹೋಗ್ತಾ ಇರ್ತಾರೆ. ಅಲ್ಲದೇ ಅವರಿಗೆ ಸೋಲೋ ಟ್ರಿಪ್ ಹೋಗಲು ಇನ್ನೂ ಇಷ್ಟವಂತೆ.

Latest Videos

click me!