ಭಾವಿ ಪತಿಯ ಜನ್ಮದಿನಕ್ಕೆ ಮಹೀಂದ್ರಾ XUV 700 ಕಾರ್‌ ಗಿಫ್ಟ್‌ ನೀಡಿದ ಕಿರುತೆರೆ ನಟಿ!

First Published | Jun 28, 2024, 5:12 PM IST

ಬಿಗ್‌ಬಾಸ್‌ ಹಾಗೂ ಸೀರಿಯಲ್‌ ಮೂಲಕ ಪಕ್ಕದ ಆಂಧ್ರದಲ್ಲಿ ಪ್ರಖ್ಯಾತರಾಗಿರುವ ನಟಿ ಶೋಭಾ ಶೆಟ್ಟಿ ಇತ್ತೀಚೆಗೆ ತಮ್ಮ ಭಾವಿ ಪತಿ ಯಶವಂತ್‌ ಅವರ ಜನ್ಮದಿನಕ್ಕೆ ಅದ್ದೂರಿ ಉಡುಗೊರೆ ನೀಡಿದ್ದಾರೆ.

ನಟಿ ಶೋಭಾ ಶೆಟ್ಟಿ ಹ್ಯಾಪಿ ಮೂಡ್‌ನಲ್ಲಿದ್ದಾರೆ. ಅವರ ಜೀವನದಲ್ಲಿ ಇತ್ತೀಚಿನ ಕೆಲ ತಿಂಗಳುಗಳಲ್ಲಿ ಹೊಸ ಹೊಸ ಸಂಭ್ರಮಗಳೇ ಮನೆ ಮಾಡಿವೆ.

ವಿಡಿಯೋ ಕ್ರಿಯೇಟರ್‌ ಯಶವಂತ್‌ ಅವರೊಂದಿಗೆ ಇತ್ತೀಚೆಗೆ ಅದ್ದೂರಿಯಾಗಿ ಶೋಭಾ ಶೆಟ್ಟಿ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ದರು.

Tap to resize

ಅದಾದ ಕೆಲವೇ ದಿನಗಳಲ್ಲಿ ಅವರು ತಮ್ಮ ಹೊಸ ಮನೆಯ ಗೃಹಪ್ರವೇಶವನ್ನೂ ಅದ್ದೂರಿಯಾಗಿ ಮಾಡಿಕೊಂಡಿದ್ದರು. ಇದರ ಚಿತ್ರಗಳನ್ನೂ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಈಗ ತಮ್ಮ ಭಾವಿ ಪತಿ ಯಶವಂತ್‌ ಅವರ ಜನ್ಮದಿನಕ್ಕೆ ಅದ್ಭುತವಾದ ಉಡುಗೊರೆಯನ್ನು ಅವರು ನೀಡಿದ್ದಾರೆ. ಇದರ ವಿಡಿಯೋವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

ತೆಲುಗು ಬಿಗ್‌ ಬಾಸ್‌ನ ಮೂಲಕ ಸಾಕಷ್ಟು ಜನಮನ್ನಣೆ ಪಡೆದುಕೊಂಡ ನಟಿ ಶೋಭಾ ಶೆಟ್ಟಿ ತಮ್ಮ ಭಾವಿ ಪತಿಗೆ ಮಹೀಂದ್ರಾ ಎಕ್ಸ್‌ಯುವಿ 700 ಕಾರ್‌ಅನ್ನು ಜನ್ಮದಿನದಂದು ಉಡುಗೊರೆಯಾಗಿ ನೀಡಿದ್ದಾರೆ.

ಕಪ್ಪು ಬಣ್ಣದ ಎಕ್ಸ್‌ಯುವಿ 700 ಕಾರ್‌ಅನ್ನು ಜೂನ್‌ 21 ರಂದು ಅವರು ಖರೀದಿ ಮಾಡಿದ್ದಾರೆ. ನಾವೀಗ ಈ ಕಾರ್‌ನ ಮಾಲೀಕರಾಗಿದ್ದೇವೆ ಎಂದು ಅವರು ಬರೆದಿದ್ದಾರೆ.

ಇನ್ಸ್‌ಟಾಗ್ರಾಮ್‌ ಬಯೋದಲ್ಲಿ ತಮ್ಮನ್ನು ತಾವು ವಿಡಿಯೋ ಕ್ರಿಯೆಟರ್‌ ಎಂದು ಬರೆದುಕೊಂಡಿರುವ ಯಶವಂತ್‌, ತೆಲುಗಿನ ಕಾರ್ತಿಕ ದೀಪಂ ಧಾರವಾಹಿಯಲ್ಲಿ ಆದಿತ್ಯ ಪಾತ್ರದಲ್ಲಿ ನಟಿಸಿದ್ದರು.

ಕಾರ್ತಿಕ ದೀಪಂ ಸೀರಿಯಲ್‌ ವೇಳೆಯಲ್ಲಿಯೇ ಯಶವಂತ್‌ ಹಾಗೂ ಶೋಭಾ ಶೆಟ್ಟಿ ಆಪ್ತರಾಗಿದ್ದರು. ಇವರ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು.

ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರೂ, ಶೋಭಾ ಆಗಲಿ ಯಶವಂತ್‌ ಆಗಲಿ ಈ ಬಗ್ಗೆ ಎಲ್ಲೂ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. 

ಅಪರೂಪಕ್ಕೆ ಇನ್ಸ್‌ಟಾಗ್ರಾಮ್‌ನಲ್ಲಿ ಯಶವಂತ್‌ ಅವರ ಪೋಸ್ಟ್‌ಗೆ ಶೋಭಾ ಶೆಟ್ಟಿ ಕಾಮೆಂಟ್‌ ಮಾಡುತ್ತಿದ್ದರು. ಎಲ್ಲಿಯೂ ಇವರಿಬ್ಬರೂ ಪ್ರೀತಿ ಮಾಡುತ್ತಾರೆ ಎನ್ನುವ ಸೂಚನೆ ಸಿಕ್ಕಿರಲಿಲ್ಲ.

ಇನ್ನು ಶೋಭಾ ಶೆಟ್ಟಿ ಬಿಗ್‌ ಬಾಸಸ್‌ ತೆಲುಗು ಕಾರ್ಯಕ್ರಮಕ್ಕೆ ಹೋಗಿದ್ದಾಗ ಯಶವಂತ್‌ ಇನ್ಸ್‌ಟಾಗ್ರಾಮ್‌ನಲ್ಲಿ ಆಕೆಯ ಪರವಾಗಿ ಪೋಸ್ಟ್‌ ಹಾಗೂ ವಿಡಿಯೋಗಳನ್ನು ದಾಖಲಿಸುತ್ತಿದ್ದರು.

ಬಿಗ್‌ ಬಾಸ್‌ ನಡೆಯುವ ಸಮಯದಲ್ಲಿ ಶೋಭಾ ಶೆಟ್ಟಿ ಹಾಗೂ ತೇಜಾ ನಡುವೆ ರೊಮಾಂಟಿಕ್‌ ರಿಲೇಷನ್‌ಷಿಪ್‌ ಇದೆ ಎನ್ನಲಾಗಿತ್ತಾದರೂ, ಬಳಿಕ ಅದು ಸುಳ್ಳಾಯಿತು.

ಕರ್ನಾಟಕದ ಮಂಗಳೂರು ಮೂಲದ ಶೋಭಾ ಶೆಟ್ಟಿ ಕನ್ನಡದಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಆಂಧ್ರದಲ್ಲಿಯೇ ಅವರು ನೆಲೆ ಕಂಡುಕೊಂಡಿದ್ದಾರೆ.

Latest Videos

click me!