Karna Kannada Serial: ಅಷ್ಟು ದಿನ ನಿತ್ಯಾ-ಕರ್ಣ ಫಾರೆವರ್ ಅನ್ನುತ್ತಿದ್ದವರೇ, ನೋ.. ನಿಧಿ-ಕರ್ಣ ಎಂದು ಹಾರ್ಟ್ ಇಮೋಜಿ ಬಿಡಲು ಪ್ರಾರಂಭಿಸಿದರು. ಇದು ಯಾವ ಮಟ್ಟಕ್ಕೆ ಫಜೀತಿಗೀಡಾಯ್ತು ಅಂದರೆ ವೀಕ್ಷಕರು ನಾವು ಧಾರಾವಾಹಿ ನೋಡುವುದನ್ನು ಬಿಡುತ್ತೇವೆ ಎಂದು ಸ್ಟ್ರೈಕ್ ಮಾಡಲು ಶುರು ಮಾಡಿದರು.
ಹುಂ..ಧಾರಾವಾಹಿಗಳಲ್ಲಾಗಲೀ, ಸಿನಿಮಾಗಳಲ್ಲಾಗಲೀ ಪಾತ್ರಧಾರಿಗಳದ್ದು ತಪ್ಪೇನಿರುತ್ತೆ. ಆದ್ರೂ ನಾವು ನಮಗಿಷ್ಟವಾದದ್ದನ್ನು ತೋರಿಸದೆ ಹೋದರೆ ಬ್ಲೈಂಡ್ ಆಗಿ ಒಂದೇ ಸಮನೆ ಬಯ್ಯುತ್ತಾ ಹೋಗುತ್ತೇವೆ. ಹೀಗಾಗಬಾರದಿತ್ತು, ಹಾಗಾಗಬಾರದಿತ್ತು ಅನ್ನುತ್ತೇವೆ. ವಿಶೇಷವಾಗಿ ಧಾರಾವಾಹಿ ವೀಕ್ಷಕರು ಯಾವಾಗ, ಯಾರ ಪರವಾಗಿರುತ್ತಾರೆ, ಯಾಕೆ ಅಂತ ಹೇಳೋಕೆ ಬರಲ್ಲ. ಈಗ ಕರ್ಣ ಧಾರವಾಹಿಯಲ್ಲಿ ಆಗುತ್ತಿರುವುದು ಅದೇ ನೋಡಿ.
26
ಸ್ಟ್ರೈಕ್ ಮಾಡಲು ಶುರು
ಯೆಸ್. ನಿತ್ಯಾ-ಕರ್ಣ ಮದುವೆಯಾಗುವ ಪ್ರೊಮೊ ಬಿಟ್ಟಿದ್ದೇ ಬಿಟ್ಟಿದ್ದು ಅಷ್ಟು ದಿನ ನಿತ್ಯಾ-ಕರ್ಣ ಫಾರೆವರ್ ಅನ್ನುತ್ತಿದ್ದವರೇ, ನೋ.. ನಿಧಿ-ಕರ್ಣ ಎಂದು ಹಾರ್ಟ್ ಇಮೋಜಿ ಬಿಡಲು ಪ್ರಾರಂಭಿಸಿದರು. ಇದು ಯಾವ ಮಟ್ಟಕ್ಕೆ ಫಜೀತಿಗೀಡಾಯ್ತು ಅಂದರೆ ವೀಕ್ಷಕರು ನಾವು ಧಾರಾವಾಹಿ ನೋಡುವುದನ್ನು ಬಿಡುತ್ತೇವೆ ಎಂದು ಸ್ಟ್ರೈಕ್ ಮಾಡಲು ಶುರು ಮಾಡಿದರು.
36
ಅಭಿಪ್ರಾಯ ಬದಲಾಯಿಸಿದ ವೀಕ್ಷಕ
ಕೊನೆಗೆ ಸ್ವತಃ ನಿತ್ಯಾ ಪಾತ್ರ ವಹಿಸುತ್ತಿರುವ ನಮ್ರತಾ ಗೌಡ, ನಿಧಿ ಪಾತ್ರ ವಹಿಸುತ್ತಿರುವ ಭವ್ಯ ಗೌಡ ಸೋಶಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದರು. ಇದನ್ನೆಲ್ಲಾ ಗಮನಿಸಿದ ಬುದ್ಧಿವಂತ ಪ್ರೇಕ್ಷಕರು ತಮ್ಮ ನಿಲುವನ್ನು ಬದಲಾಯಿಸಿದ್ದಾರೆ. ಮೊದಲಿನಿಂದ ನಿತ್ಯಾ-ಕರ್ಣ ಜೋಡಿ ಸೂಪರ್ ಎನ್ನುತ್ತಿದ್ದವರ ಜೊತೆಗೆ ಈಗೀಗ ನಿಧಿ-ಕರ್ಣ ಜೋಡಿಯಾಗಬೇಕೆನ್ನುವವರೂ ತಮ್ಮ ಅಭಿಪ್ರಾಯ ಬದಲಾಯಿಸಿರುವುದನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಬಹುದು.
ಹೌದು. ನಿಧಾನವಾಗಿ ಜನರು ನಿತ್ಯಾ-ಕರ್ಣ ಜೋಡಿಯನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ. ಹೇಗಿದ್ದರೂ ನಿತ್ಯಾ ಮದುವೆಯಾಗಬೇಕಾದ ತೇಜಸ್ ಓಡಿ ಹೋಗುತ್ತಾನೆ. ಆಗ ಕರ್ಣನೇ ನಿತ್ಯಾ ಕೈ ಹಿಡಿಯುತ್ತಾನೆ. ಆಗೋದೆಲ್ಲಾ ಒಳ್ಳೇದಕ್ಕೆ ಎನ್ನಲು ಶುರು ಮಾಡಿದ್ದಾರೆ.
56
ನಿತ್ಯಾ ಪರವಾಗಿದ್ದಾರೆ ಫ್ಯಾನ್ಸ್
ನಿರ್ದೇಶಕರು ಎರಡೂ ಪಾತ್ರಗಳನ್ನು ಸಮಾನವಾಗಿ ಎತ್ತಿ ಹಿಡಿದ್ದಾರೆ. ಆದರೆ ಅವರವರ ಭಾವಕ್ಕೆ ಎನ್ನುವ ಹಾಗೆ ಇಲ್ಲಿ ಜೋಡಿಯನ್ನು ಹೊಂದಿಸಿಕೊಳ್ಳಲಾಗಿದೆ ಅಷ್ಟೇ. ನಿತ್ಯಾ ಕೂಡ ಯಾವುದರಲ್ಲಿ ಕಡಿಮೆ ಇಲ್ಲ. ಮೊದಲಿನಿಂದಲೂ ಕಿರುತೆರೆ ವೀಕ್ಷರಿಗೆ ಚಿರಪರಿಚಿತ ಮುಖ. ಈ ಎಲ್ಲಾ ಕಾರಣಗಳಿಂದಾಗಿ ಮತ್ತೆ ನಿತ್ಯಾ ಪರವಾಗಿದ್ದಾರೆ ಫ್ಯಾನ್ಸ್.
66
ವೀಕ್ಷಕರ ಅನಿಸಿಕೆ ಏನು?
*ನೋಡಿ ಸ್ವಲ್ಪ ಅರ್ಥ ಮಾಡಿಕೊಳ್ಳಿ ದಯವಿಟ್ಟು ಯಾರು ಕೆಟ್ಟದಾಗಿ ಕಮೆಂಟ್ ಮಾಡುವ ಅವಶ್ಯಕತೆ ಇಲ್ಲಾ!!! ಅವರದ್ದು ಅವ್ರು ನೋಡಿಕೊಂಡರೆ ಸಾಕು ಇಷ್ಟ ಆದ್ರೆ ನೋಡಿ ಇಲ್ಲಾ ನೋಡಬೇಡಿ !!! ಏನೇ ಬೈದುಕೊಂಡರು ನಿರ್ದೇಶಕರನ್ನ ಬೈದುಕೊಳ್ಳಿ ಯಾರನ್ನು ಬಂದು ಕೈ ಕಾಲು ಹಿಡಿದು ನೋಡಿ ನೋಡಿ ಅಂಥ ಬೇಡಿಕೊಂಡಿಲ್ಲ ಅವ್ರು!!! ನಿಧಿ and ನಿತ್ಯಾ we always with you. *ಅದೇನೇ ಆಗಲಿ ನಿತ್ಯ ಜೊತೆ ನಾವು ಇರ್ತೀವಿ. * ನಿತ್ಯಾ, ನಿತ್ಯಾ ...ಅಂತೆಲ್ಲಾ ಹಾರ್ಟ್ ಇಮೋಜಿ ಸಮೇತ ಕಾಮೆಂಟ್ ಮಾಡಿರುವುದನ್ನ ನೀವಿಲ್ಲಿ ನೋಡಬಹುದು. *ಕರ್ಣ ಅನ್ನೋ ಹೆಸರಲ್ಲಿ ಇದೆ .ಕರ್ಣ ಪ್ರೀತಿನ ತ್ಯಾಗ ಮಾಡುತ್ತಾನೆ.