ರಾಧಾ ರಮಣ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿದ ನಟಿ ಶ್ವೇತಾ ಪ್ರಸಾದ್, ವಯಸ್ಸು ಹೆಚ್ಚಾಗುತ್ತಿರುವಂತೆ ಗ್ಲಾಮರ್ ಕೂಡ ಹೆಚ್ಚಾಗ್ತಿದೆ. ಜೊತೆಗೆ ನಟಿಯ ಫಿಟ್ನೆಸ್ ಅಭಿಮಾನಿಗಳ ಕಣ್ಣು ಕುಕ್ಕುತ್ತಿದೆ. ರಾಧಾ ಮಿಸ್ ಫಿಟ್ನೆಸ್ ಸೀಕ್ರೆಟ್ ಏನು ಗೊತ್ತಾ?
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಶ್ವೇತಾ ಆರ್ ಪ್ರಸಾದ್. ಸದ್ಯ ಸಿನಿಮಾದಲ್ಲೂ ನಟಿ ಮಿಂಚುತ್ತಿದ್ದಾರೆ. ಜೊತೆಗೆ ತಮ್ಮ ಸಮಾಜ ಸೇವೆಗಳಿಂದಲೂ ಶ್ವೇತಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ.
27
ಶ್ರೀರಸ್ತು ಶುಭಮಸ್ತು
ಹಲವು ವರ್ಷಗಳ ಹಿಂದೆ ಶ್ರೀರಸ್ತು ಶುಭಮಸ್ತು ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಶ್ವೇತಾ ಆರ್ ಪ್ರಸಾದ್, ತಮ್ಮ ನಟನೆಯ ಜೊತೆಗೆ ಸೌಂದರ್ಯದಿಂದಲೂ ಖ್ಯಾತಿ ಪಡೆದರು. ಅವರ ಸ್ಟೈಲ್, ಲುಕ್, ಗ್ಲಾಮರ್ ನೋಡಿದ್ರೆ ಇನ್ನೂ ಟೀನೇಜ್ ಹುಡುಗಿಯಂತೆ ಕಾಣಿಸ್ತಾರೆ ನಟಿ.
37
ರಾಧಾರಮಣದ ರಾಧಾ ಮಿಸ್
ರಾಧಾ ಧಾರಾವಾಹಿಯಲ್ಲಿ ರಾಧಾ ಮಿಸ್ ಆಗಿ ಗಮನ ಸೆಳೆದ ನಟಿ ಶ್ವೇತಾ ಪ್ರಸಾದ್, ಇವತ್ತಿಗೂ ಅದೇ ಫಿಟ್ನೆಸ್ ಕಾಯ್ದುಕೊಂಡಿರುವ ಶ್ವೇತಾ, ನೋಡಿ ಅಭಿಮಾನಿಗಳು ಶಾಕ್ ಆಗಿದ್ದು, ಫಿಟ್ನೆಸ್ ಸೀಕ್ರೆಟ್ ಏನು ಎಂದು ಕೇಳುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಶ್ವೇತಾ ಪ್ರಸಾದ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಗ್ಲಾಮರಸ್ ಆಗಿರುವ ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ. ಬ್ಯಾಕ್ ಲೆಸ್ ಗೌನ್, ಬಿಕಿನಿ ವೇರ್, ಹೀಗೆ ಸಖತ್ ಬೋಲ್ಡ್ ಆಗಿರುವ ಔಟ್ ಫಿಟ್ ಗಳನ್ನೆ ನಟಿ ಧರಿಸುತ್ತಿರುತ್ತಾರೆ. ಈ ಎಲ್ಲಾ ಲುಕ್ ನಲ್ಲೂ ನಟಿ ಫ್ಲೋಲೆಸ್ ಆಗಿ ಕಾಣಿಸುತ್ತಿದ್ದಾರೆ.
57
ಫಿಟ್ನೆಸ್ ಸೀಕ್ರೆಟ್ ಏನು?
ನಟಿ ಹಲವಾರು ಸಂದರ್ಶನಗಳಲ್ಲಿ ತಮ್ಮ ಫಿಟ್ನೆಸ್ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ತಾವು ಎಣ್ಣೆಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಬಳಕೆ ಮಾಡುತ್ತೇವೆ ಎಂದಿದ್ದಾರೆ. ಎಣ್ಣೆ ಕಡಿಮೆಯಾದಷ್ಟು ಆರೋಗ್ಯ ಉತ್ತಮವಾಗಿರುತ್ತೆ.
67
ತರಕಾರಿ ಹೆಚ್ಚು
ಕೆಲವರು ಸಣ್ಣಗಾಗಲು ಊಟ ಬಿಡುತ್ತಾರೆ. ಆದರೆ ಶ್ವೇತಾ ಪ್ರಸಾದ್ ಹಾಗಲ್ಲ, ಅವರು ತಮ್ಮ ಊಟದಲ್ಲಿ ಹೆಚ್ಚಿನ ಪ್ರಮಾಣದ ತರಕಾರಿ ಸೇವನೆ ಮಾಡುತ್ತಾರೆ. ಪುಲಾವ್ ಮಾಡಿದ್ರೆ, ಅದರಲ್ಲಿ ಅನ್ನದ ಅರ್ಧದಷ್ಟು ಪ್ರಮಾಣದಲ್ಲಿ ತರಕಾರಿಯೇ ಇರುತ್ತೆ. ಇದರಿಂದಲೇ ಆಕೆ ಫಿಟ್ ಆಗಿರೋದಕ್ಕೆ ಸಾಧ್ಯ ಆಗುತ್ತೆ.
77
ವರ್ಕೌಟ್ ಮಿಸ್ ಮಾಡಲ್ಲ
ಇನ್ನು ಶ್ವೇತಾ ಪ್ರಸಾದ್ ಯಾವತ್ತೂ ವರ್ಕೌಟ್ ಮತ್ತು ಯೋಗ ಮಿಸ್ ಮಾಡಿಕೊಳ್ಳೋದೆ ಇಲ್ಲ. ಆ ಮೂಲಕ ತಮ್ಮ ದೇಹವನ್ನು ಕರಗಿಸುತ್ತಾರೆ. ಇದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುತ್ತಲೆ ಇರುತ್ತಾರೆ. ಇದು ಕೂಡ ಅವರನ್ನು ಫಿಟ್ ಆಗಿರಲು ಸಹಾಯ ಮಾಡುತ್ತದೆ.