ಬಿಗ್ ಬಾಸ್ ಸೀಸನ್ 12ಕ್ಕಾಗಿ ಎರಡು ಜನಪ್ರಿಯ ಧಾರಾವಾಹಿಗಳು ಅಂತ್ಯವಾಗಲಿವೆ ಎನ್ನುವ ಮಾಹಿತಿಯ ಜೊತೆಗೆ ರಾಮಾಚಾರಿ ಕೂಡ ಕೊನೆಯಾಗಲಿದೆ ಎನ್ನಲಾಗುತ್ತಿತ್ತು. ಇದೀಗ ಆ ಸಂಖ್ಯೆ ನಾಲ್ಕಕ್ಕೆ ಏರಿದೆ. ಹೌದು… ಮತ್ತೊಂದು ಜನಪ್ರಿಯ ಧಾರಾವಾಹಿಯೂ ಕೂಡ ಕೊನೆಯಾಗಲಿದೆ ಎನ್ನುವ ಸುದ್ದಿ ಕೇಳಿ ಬಂದಿದೆ.
ಬಿಗ್ ಬಾಸ್ ಸೀಸನ್ 12 (Bigg Boss Season-12) ಆರಂಭವಾಗಲು ಇನ್ನೇನು ಒಂದು ವಾರಗಳಷ್ಟೇ ಬಾಕಿ ಇದೆ. ಮುಂದಿನ ಶನಿವಾರದಿಂದ ಬಿಗ್ ಬಾಸ್ ಶುರುವಾಗಲಿದೆ. ಬಿಗ್ ಬಾಸ್ ಗಾಗಿ ಎರಡಲ್ಲ ಮೂರು ಧಾರಾವಾಹಿಗಳು ಅಂತ್ಯವಾಗುವ ಕುರಿತು ಕೂಡ ಈಗಾಗಲೇ ಸಾಕಷ್ತು ಮಾಹಿತಿಗಳು ವೈರಲ್ ಆಗುತ್ತಿವೆ.
26
ಬಿಗ್ ಬಾಸ್ 12 ಆರಂಭ
ಇಲ್ಲಿವರೆಗೆ ಬಂದ ಮಾಹಿತಿಯ ಪ್ರಕಾರ ಬಿಗ್ ಬಾಸ್ ಪ್ರಸಾರಕ್ಕಾಗಿ ದೃಷ್ಟಿ ಬೊಟ್ಟು ಮತ್ತು ಯಜಮಾನ ಧಾರಾವಾಹಿಗಳು ಅಂತ್ಯ ಕಾಣಲಿವೆ ಎನ್ನಲಾಗಿತ್ತು. ದೃಷ್ಟಿ ಬೊಟ್ಟು ಧಾರಾವಾಹಿಯಿಂದ ಈಗಾಗಲೇ ದತ್ತ ಭಾಯ್ ಅಂದ್ರೆ ವಿಜಯ್ ಸೂರ್ಯ ಹೊರ ಬಂದಾಗಿದೆ. ಸೀರಿಯಲ್ ನ ಕೊನೆಯ ಹಂತದ ಶೂಟಿಂಗ್ ಕೂಡ ನಡೆದಾಗಿದೆ ಎನ್ನಲಾಗುತ್ತಿದೆ.
36
ಜಾನ್ಸಿನ ಮೆಚ್ಚಿಕೊಂಡ ರಾಘು
ಇನ್ನೊಂದೆಡೆ ಬಿಗ್ ಬಾಸ್ ಗಾಗಿ ಯಜಮಾನ ಧಾರಾವಾಹಿ ಕೂಡ ಅಂತ್ಯ ಕಾಣಲಿದೆ ಎನ್ನುವ ಮಾಹಿತಿ ಇದೆ. ಆದರೆ ಈ ಬಗ್ಗೆ ವಾಹಿನಿ ಸ್ಪಷ್ಣನೆ ನೀಡಿಲ್ಲ. ಯಜಮಾನ ಧಾರಾವಾಹಿಯನ್ನು ನೋಡಿದ್ರೆ, ಈಗಲೇ ಮುಗಿಸುವ ಹಂತ ತಲುಪಿದಂತಿದೆ. ರಾಘು ಜಾನ್ಸಿಯನ್ನು ಹೆಂಡತಿ ಎಂದು ಒಪ್ಪಿಯಾಗಿದೆ. ಹಾಗಾಗಿ ಅದು ಕೂಡ ಕೊನೆಯಾಗಲಿದೆ.
ಇನ್ನು ರಾಮಾಚಾರಿ ಧಾರಾವಾಹಿ ಕೂಡ ಕೊನೆಯಾಗಲಿದೆ ಎನ್ನಲಾಗುತ್ತಿದೆ. ಆದರೆ ಇದು 1000 ಎಪಿಸೋಡ್ ಪ್ರಸಾರ ಕಂಡ ಬಳಿಕ ಅಂತ್ಯ ಕಾಣಲಿದೆ. ಅಂದ್ರೆ ಸದ್ಯಕ್ಕೆ ಮುಗಿಯೋದಿಲ್ಲ, ಇನ್ನೊಂದುವರೆ ತಿಂಗಳ ಬಳಿಕ ಸೀರಿಯಲ್ ಅಂತ್ಯ ಕಾಣಲಿದೆ. ಹಾಗಿದ್ರೆ ಮುಗಿಯಲಿರುವ ಇನ್ನೊಂದು ಧಾರಾವಾಹಿ ಯಾವುದು?
56
ನಿನಗಾಗಿ ಸೀರಿಯಲ್ ಕೂಡ ಶೀಘ್ರದಲ್ಲಿ ಮುಕ್ತಾಯ
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಮಾಹಿತಿಯ ಪ್ರಕಾರ ಸೂಪರ್ ಸ್ಟಾರ್ ರಚನಾ-ಜೀವಾ ಕಥೆಯನ್ನು ಹೊಂದಿರುವ ನಿನಗಾಗಿ ಧಾರಾವಾಹಿ ಅಂತ್ಯ ಕಾಣಲಿದೆಯಂತೆ. ಈ ಸೀರಿಯಲ್ ಕಥೆ ಇಂಟ್ರೆಸ್ಟಿಂಗ್ ಆಗಿ ಸಾಗುತ್ತಿದೆ. ಹಾಗಾಗಿ ಇದೂ ಕೂಡ ಇನ್ನೊಂದೆರಡು ತಿಂಗಳು ಮುಂದುವರೆದು ನಂತರ ಮುಕ್ತಾಯ ಕಾಣುವ ಸಾಧ್ಯತೆ ಹೆಚ್ಚಿದೆ.
66
ಗಂಧದ ಗುಡಿ ಆರಂಭ
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಗಂಧದ ಗುಡಿ ಧಾರಾವಾಹಿಯ ಪ್ರೊಮೋ ಬಂದು ಸಾಕಷ್ಟು ಸದ್ದು ಮಾಡಿದ್ದು, ಈ ಧಾರಾವಾಹಿ ನಾಲ್ಕು ಗಂಡು ಮಕ್ಕಳ ಕಥೆಯಾಗಿದ್ದು, ಅವರ ಜೀವನದಲ್ಲಿ ಒಂದು ಹೆಣ್ಣು ಬಂದಾಗ ಏನೆಲ್ಲಾ ಬದಲಾವಣೆಯಾಗುತ್ತೆ ಅನ್ನೋದೆ ಕಥೆ. ಹಾಗಾಗಿ ನಿನಗಾಗಿ ಧಾರಾವಾಹಿ ಅಂತ್ಯದ ಬಳಿಕ ಈ ಧಾರಾವಾಹಿ ಆರಂಭವಾಗಲಿದೆ ಎನ್ನಲಾಗುತ್ತಿದೆ.