ಹೂವಿನ ಡ್ರೆಸ್‌ನಲ್ಲಿ ಗೊಂಬೆಯಂತೆ ಕಂಡ ಸೂಪರ್ ಸ್ಟಾರ್ ರಚನಾ: ಕ್ಯೂಟ್‌ ಫೋಟೋಸ್ ವೈರಲ್!

Published : Sep 13, 2024, 09:15 PM IST

ನಟಿ ದಿವ್ಯಾ ಉರುಡುಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ಇದೀಗ ಹೊಸ ಫೋಟೋಸ್‌ಗಳನ್ನು ಶೇರ್ ಮಾಡಿದ್ದಾರೆ. ಹೂವಿನ ಡ್ರೆಸ್‌ನಲ್ಲಿ ದಿವ್ಯಾ ಉರುಡುಗ ಕಂಗೊಳಿಸುತ್ತಿದ್ದಾರೆ.

PREV
17
ಹೂವಿನ ಡ್ರೆಸ್‌ನಲ್ಲಿ ಗೊಂಬೆಯಂತೆ ಕಂಡ ಸೂಪರ್ ಸ್ಟಾರ್ ರಚನಾ: ಕ್ಯೂಟ್‌ ಫೋಟೋಸ್ ವೈರಲ್!

ಕಿರುತೆರೆಯಲ್ಲಿ ಕೆಲವು ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ದಿವ್ಯಾ ಉರುಡುಗ, ಹುಲಿರಾಯ ಸಿನಿಮಾದಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.

27

ಕನ್ನಡ ಚಂದನವನದ ನಟಿ ದಿವ್ಯಾ ಉರುಡುಗ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇವರು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಯುವ ಪ್ರತಿಭಾನ್ವಿತ ನಟಿ.

37

ಇದೀಗ ನಟಿ ದಿವ್ಯಾ ಉರುಡುಗ ಸಾಮಾಜಿಕ ಜಾಲತಾಣದಲ್ಲಿ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೌದು! ಹೂವಿನ ಡ್ರೆಸ್‌ನಲ್ಲಿ ಗೊಂಬೆಯಂತೆ ದಿವ್ಯಾ ಮಿಂಚಿದ್ದು, ಪೋಟೋಸ್ ಸಖತ್ ವೈರಲ್ ಆಗಿದೆ.

47

ನೇರಳೆ ಬಣ್ಣದ ಹೂವಿನ ಡ್ರೆಸ್‌ನಲ್ಲಿ ನಟಿ ದಿವ್ಯಾ ಉರುಡುಗ ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಕ್ಯೂಟ್‌ ಆಗಿ ಪೋಸ್ ಕೊಟ್ಟಿದ್ದಾರೆ. ವಿಶೇಷವಾಗಿ ಅವರ ಹೇರ್‌ಸ್ಟೈಲ್ ಹಾಗೂ ಮೇಕಪ್ ಸಖತ್ ಹೈಲೈಟ್ ಆಗಿತ್ತು.

57

ದಿವ್ಯಾ ಉರುಡುಗ ಫೋಟೋಸ್ ನೋಡಿದ ನೆಟ್ಟಿಗರು, ಲೈಕ್ಸ್‌ ಹಾಗೂ ಕಮೆಂಟ್‌ಗಳ ಸುರಿಮಳೆಯನ್ನೆ ಸುರಿಸಿದ್ದಾರೆ. ಚಂದನವನದ ಚೆಂದದ ಗೊಂಬೆ, ತುಂಬಾ ಮುದ್ದಾಗಿ ಕಾಣ್ತೀರಾ, ನೀವು ಯಾವತ್ತಿದ್ರೂ ಸುಂದ್ರಿ ಅಂತೆಲ್ಲಾ ಸೇರಿದಂತೆ ರೆಡ್ ಹಾರ್ಟ್ ಎಮೋಜಿ ಹಾಕಿ ಕಮೆಂಟ್ ಮಾಡಿದ್ದಾರೆ.
 

67

ಬಿಗ್‌ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಗಳಾಗಿ ದೊಡ್ಮನೆ ಪ್ರವೇಶಿಸಿದ ದಿವ್ಯಾ ಮತ್ತು ಅರವಿಂದ್ ಲವರ್ಸ್‌ಗಳಾಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ರು. 100 ದಿನಗಳ ಬಿಗ್‌ಬಾಸ್ ಜರ್ನಿಯಲ್ಲಿ ದಿವ್ಯಾ-ಅರವಿಂದ್ ನಡುವೆ ಪ್ರೀತಿ ಚಿಗುರಿತ್ತು. 

77

ಇನ್ನು ನಿನಗಾಗಿ ಧಾರಾವಾಹಿಯಲ್ಲಿ ಸೂಪರ್ ಸ್ಟಾರ್ ರಚನಾ ಆಗಿ ದಿವ್ಯಾ ಉರುಡುಗ ಅಭಿನಯಸುತ್ತಿದ್ದಾರೆ. ಮಾತ್ರವಲ್ಲದೇ ಈ ಸೀರಿಯಲ್‌ನ ರಚನಾ ಆಲಿಯಾಸ್ ರಚ್ಚು ಪಾತ್ರವೆಂದರೆ ಅವರಿಗೆ ತುಂಬಾ ಇಷ್ಟ ಎಂದು ಈ ಹಿಂದೆ ಹೇಳಿದ್ದರು.

Read more Photos on
click me!

Recommended Stories