ವರ್ಷಗಳ ಬಳಿಕ‌ ‘ನಿನ್ನ ಜೊತೆ ನನ್ನ ಕಥೆ’ ಮೂಲಕ ಕನ್ನಡ ಕಿರುತೆರೆಗೆ ಮರಳಿದ‌ ಕಮಲಿ ಸೀರಿಯಲ್ ರಿಷಿ ಸರ್

First Published | Sep 13, 2024, 3:56 PM IST

ಕಮಲಿ ಧಾರಾವಾಹಿ ಮೂಲಕ ಭಾರಿ ಜನಪ್ರಿಯತೆ ಪಡೆದ ರಿಷಿ ಸರ್ ಅಂದ್ರೆ, ನಿರಂಜನ್ ಇದೀಗ ಹೊಸ ಧಾರಾವಾಹಿ ಮೂಲಕ ಮತ್ತೆ ವೀಕ್ಷಕರನ್ನು ಮನರಂಜಿಸೋಕೆ ಬರ್ತಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿಯಲ್ಲಿ ರಿಷಿ ಸರ್ ಪಾತ್ರದ ಮೂಲಕ ನಟ ನಿರಂಜನ್ (Niranjan) ವೀಕ್ಷಕರ ಮನಸ್ಸು ಗೆದ್ದಿದ್ದರು. ಇದೀಗ ಸ್ಟಾರ್ ಸುವರ್ಣ (Star Suvarna) ವಾಹಿನಿಯಲ್ಲಿ ಹೊಸದೊಂದು ಸೀರಿಯಲ್ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಬಂದಿದ್ದಾರೆ. 
 

ಹೌದು ಸ್ಟಾರ್ ಸುವರ್ಣ ವಾಹಿನಿ ಪ್ರಸಾರವಾಗಲಿರುವ ಹೊಚ್ಚ ಹೊಸ ಸೀರಿಯಲ್ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ನಿರಂಜನ್ ನಾಯಕನಾಗಿ ನಟಿಸಲಿದ್ದಾರೆ. ವರ್ಷಗಳ ಬಳಿಕೆ ನಿರಂಜನ್ ಅವರನ್ನು ಕನ್ನಡ ಕಿರುತೆರೆಯಲ್ಲಿ ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. 
 

Tap to resize

ನಿನ್ನ ಜೊತೆ ನನ್ನ ಕಥೆ ಧಾರವಾಹಿಯಲ್ಲಿ ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗಂಡ ಹೆಂಡತಿ ಧಾರಾವಾಹಿ ನಾಯಕಿ ಸ್ವಾತಿ ಆಲಿಯಾಸ್ ನಿರುಷಾ ಗೌಡ (Nirusha Gowda) ನಾಯಕಿಯಾಗಿ ನಟಿಸುತ್ತಿದ್ದಾರೆ. ಗಂಡ ಹೆಂಡತಿ ಧಾರಾವಾಹಿಯಲ್ಲಿ ಸ್ವಾತಿ ನಟನೆಯಲ್ಲಿ ಜನರು ಇಷ್ಟ ಪಟ್ಟಿದ್ದರು. ಆದರೆ ಸೀರಿಯಲ್ ಬೇಗನೆ ಮುಗಿದಿತ್ತು. ಇದೀಗ ಹೊಸ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಬಂದಿದ್ದಾರೆ. 
 

ಈಗಾಗಲೇ ಸೀರಿಯಲ್ ಟೈಟಲ್ ಹಾಗೂ ಸ್ಟೋರಿ ಲೈನ್ ವೀಕ್ಷಕರಿಗೆ ತುಂಬಾನೆ ಇಷ್ಟವಾಗಿದೆ, ಯಾವಾಗ ಸೀರಿಯಲ್ ಆರಂಭವಾಗಲಿದೆ? ಅನ್ನೋದನ್ನ ಜನ ಕಾಯ್ತಿದ್ದಾರೆ. ಸೀರಿಯಲ್ ಕಥೆಯೂ ವಿಭಿನ್ನವಾಗಿ, ತುಂಬಾನೇ ಇಂಟ್ರೆಸ್ಟಿಂಗ್ ಆಗಿದೆ. ಕಿರುತೆರೆಯಲ್ಲಿ ಇಲ್ಲಿವರೆಗೆ ಬಾರದೆ ಇರುವಂತಹ ಕಥೆ ಇದಾಗಿದ್ದು, ಹೇಗೆ ಬರಲಿದೆ ಅನ್ನೋದನ್ನ ಜನ ಕಾಯ್ತಿದ್ದಾರೆ. 
 

ಮದುವೆ ಅಂದ್ರೇನೆ ವಿಶೇಷ ಸಂಭ್ರಮ, ಮದುವೆ ಬಗ್ಗೆ ಹುಡುಗಿಯ ಕನಸು, ಸಂಭ್ರಮದ ಬಗ್ಗೆ ಮೊದಲಿಗೆ ಹೇಳಿ, ನಂತರ ದೇವಾಲಯ ಒಂದರಲ್ಲಿ ಹುಡುಗ ಮತ್ತು ಹುಡುಗಿ ಮದುವೆಯಾಗೋದಕ್ಕೆ ಮಂಟಪಕ್ಕೆ ಬಂದು ಕುಳಿತುಕೊಳ್ತಾರೆ. ಅಲ್ಲಿ ಸಿಗುತ್ತೆ ದೊಡ್ಡ ಟ್ವಿಸ್ಟ್ ಅದೇನೆಂದರೆ, ಮದುವೆ ಮಂಟಪಕ್ಕೆ ಫೈಲ್ ಒಂದನ್ನು ಹಿಡಿದು ಬರುವ ವರ, ಮದುವೆಗೂ ಮುನ್ನ ಒಂದು ವಿಷ್ಯ ಹೇಳೊದಾಗಿ ಹೇಳಿ, ಫೈಲನ್ನು ಮದುಮಗಳ ಕೈಯಲ್ಲಿ ಕೊಡುತ್ತಾ ಮದುವೆಗೂ ಮುನ್ನ ಅಗ್ರಿಮೆಂಟ್ ಫೈಲ್ ಗೆ ಸಹಿ ಹಾಕುವಂತೆ ಹೇಳ್ತಾನೆ. 
 

ಇದು ಒಂದು ವರ್ಷದ  ಮದುವೆ ಬಗ್ಗೆ ಇರುವಂತಹ ಅಗ್ರಿಮೆಂಟ್ (marriage agreement). ನಾವು ಮೊದಲೇ ಮಾತಾಡಿರೋ ಹಾಗೇ ಮದುವೆ ಒಪ್ಪಂದ. ನಾವು ಒಂದು ವರ್ಷಗಳವರೆಗೆ ಮಾತ್ರ ಗಂಡ ಹೆಂಡ್ತಿ ಆಗಿರ್ತೀವಿ. ಈ ಒಪ್ಪಂದದ ಬಗ್ಗೆ ನಮ್ಮ ಮನೆಯವರಿಗೆ ಯಾರಿಗೂ ಗೊತ್ತಾಗಬಾರದು.  ನಿನ್ನ ತಾಯಿ ನಿರಪರಾಧಿ ಎಂದು ಸಾಬೀತು ಆಗೋದಕ್ಕೆ ಏನೆಲ್ಲಾ ಸಾಧ್ಯವೋ ಅದನ್ನೆಲ್ಲಾ ನಾನು ಮಾಡ್ತೀನಿ ಎಂದು ಹೇಳ್ತಾನೆ ನಾಯಕ. 
 

ಅಗ್ರಿಮೆಂಟ್ ಪೂರ್ತಿಯಾಗಿ ಓದಿ ನಂತರ ಸಹಿ ಮಾಡು ಅಂತಾನೆ ನಾಯಕ. ಆವಾಗ ಹುಡುಗಿಯ ಮುಖದ ಭಾವನೆಗಳೇ ಬದಲಾಗುತ್ತೆ. ಕೊನೆಗೆ ಹುಡುಗಿ ನಗುತ್ತಾ, ಹಿಂದೆ ಮುಂದೆ ಯೋಚಿಸದೇ ಒಪ್ಪಂದಕ್ಕೆ ಸಹಿ ಹಾಕುತ್ತಾಳೆ. ಪ್ರೀತಿ ಇಲ್ಲದೇ ಒಪ್ಪಂದದ ಮದುವೆಗೆ ಸಹಿ ಹಾಕುವ ಈ ಜೋಡಿ ಮುಂದೆ ಬೆಸ್ಟ್ ಜೋಡಿಯಾಗುವರಾ? ಇಬ್ಬರ ನಡುವೆ ಪ್ರೀತಿ ಬೆಳೆಯುತ್ತಾ ಅನ್ನೋದೆ ಕಥೆ ಇರಬಹುದು. 
 

Latest Videos

click me!