ಗಣೇಶನ ಮುಂದೆ ಟ್ರಾನ್ಸ್‌ಪರೆಂಟ್ ಸೀರೆ ಹಾಕ್ಬೇಕಾ?; ಭವ್ಯಾ ಗೌಡ ಫೋಟೋ ವೈರಲ್ ಮಾಡಿದ ನೆಟ್ಟಿಗರು!

First Published | Sep 13, 2024, 11:29 AM IST

ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಿದ ಭವ್ಯಾ ಗೌಡ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೋ ನೋಡಿ ನೆಟ್ಟಿಗರು ಗರಂ...

ಗೀತಾ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಭವ್ಯಾ ಗೌಡ ಅತ್ಯಂತ ಜನಪ್ರಿಯತೆ ಪಡೆದ ನಟಿಯಲ್ಲಿ ಒಬ್ಬರು. ಟಿಕ್ ಟಾಕ್‌, ರೀಲ್ಸ್‌ ಮೂಲಕ ಅವಕಾಶ ಗಿಟ್ಟಿಸಿಕೊಂಡರು.

ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುವ ಭವ್ಯಾ ಗೌಡ ಇತ್ತೀಚಿಗೆ ಯೂಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದರು. ತಮ್ಮ ಜೀವನದ ಪ್ರತಿಯೊಂದು ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಾರೆ. 

Tap to resize

ಭವ್ಯಾ ಗೌಡ ಈ ವರ್ಷ ಗೌರಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ತಾಯಿ ಧರಿಸುತ್ತಿದ್ದ ಹಳೆಯ ಸೀರೆಯನ್ನು ಈಗ ಭವ್ಯಾ ಗೌಡ ಧರಿಸಿ ಮಿಂಚಿದ್ದಾರೆ. 

'ಅಮ್ಮನ ಸೀರೆ ಧರಿಸುವುದು ಜೀವನದ ಬೆಸ್ಟ್‌ ಕ್ಷಣ' ಎಂದು ಭವ್ಯಾ ಗೌಡ ಬರೆದುಕೊಂಡಿದ್ದಾರೆ.  ಸಖತ್ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರೂ ನೆಟ್ಟಿಗರು ಮಾತ್ರ ಗರಂ ಆಗಿದ್ದಾರೆ.

ದೇವರ ಮುಂದೆ ನಿಂತು ಪೂಜೆ ಮಾಡುವಾಗ ಕೂದಲು ಕಟ್ಟಬೇಕು, ಕೈ ತುಂಬಾ ಬಳೆ, ಕತ್ತಿಗೊಂದು ಸರ ಹಾಕಬೇಕು ಅದೆಲ್ಲಾ ಬಿಟ್ಟು ಟ್ರಾನ್ಸ್‌ಪರೆಂಟ್ ಸೀರೆ ಹಾಕುವುದು ಯಾಕೆ ಎಂದು ಟ್ರೋಲ್ ಮಾಡಿದ್ದಾರೆ.

ಇತ್ತೀಚೆಗೆ ಯಾವುದೇ ಸಿನಿಮಾ ಅಥವಾ ಸೀರಿಯಲ್ ಕಾರ್ಯಕ್ರಮ ನಡೆದರೂ ಭವ್ಯಾ ಗೌಡ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೆಲ್ಲಾ ಅವಕಾಶ ಗಿಟ್ಟಿಸಿಕೊಳ್ಳಲು ಮಾಡುತ್ತಿರುವ ಗಿಮಿಕ್ ಎಂದು ಮತ್ತೆ ಟ್ರೋಲ್ ಮಾಡುತ್ತಿದ್ದಾರೆ. 

Latest Videos

click me!