ಕರ್ನಾಟಕವೇ ಬೆಚ್ಚಿ ಬೀಳಿಸುವ ಸುದ್ದಿ ಓದಿದವಳಿಗೆ ಶೋಕಿಯೇ ಮುಳುವಾಯಿತಾ?

First Published | Jul 6, 2024, 10:24 AM IST

ಕನ್ನಡ ನ್ಯೂಸ್ ಚಾನೆಲ್ ಒಂದರಲ್ಲಿ ಸ್ಯಾಂಡಲ್ ವುಡ್ ನಟಿಯೊಬ್ಬಳ ತಾಯಿಯಾಗುತ್ತಿರುವ ಸುದ್ದಿಯನ್ನು ಇಡೀ ಕರ್ನಾಟಕವೇ ಸಂಭ್ರಮಿಸುವ ಸುದ್ದಿ ಎಂದು ಓದಿ, ಸೋಷಿಯಲ್ ಮೀಡಿಯಾದಲ್ಲಿ ನಗೆಪಾಟಾಲಾಗಿದ್ದ ದಿವ್ಯಾ ವಸಂತ ಇದೀಗ ಸುಲಿಗೆ ಪ್ರಕರಣಣವೊಂದರಲ್ಲಿ ಸಿಕ್ಕಿ ಬಿದ್ದಿದ್ದು, ಹನಿ ಟ್ರ್ಯಾಪ್ ರೀತಿ ಮಾಡಿ ದುಡ್ಡು ವಸೂಲಿ ಮಾಡಲು ಟ್ರೈ ಮಾಡುತ್ತಿದ್ದರೆನ್ನಲಾಗುತ್ತಿದೆ. ಪೊಲೀಸರು ಈಕೆಗಾಗಿ ಬಲೆ ಬೀಸಿದ್ದು, ಸದ್ಯಕ್ಕೆ ನಾಪತ್ತೆಯಾಗಿದ್ದಾರೆ. 

ಕನ್ನಡದ ಸುದ್ದಿ ವಾಹಿನಿಯೊಂದರಲ್ಲಿ ನಿರೂಪಕಿಯಾಗಿ, ಚಿತ್ರ ವಿಚಿತ್ರ ಹಾವಭಾವಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದ ದಿವ್ಯಾ ವಸಂತ ಅವರೀಗ ಹನಿ ಟ್ರಾಪ್ ರೀತಿ ಮಾಡಿ, ಸುಲಿಗೆಗೆ ಯತ್ನಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. 

6 ತಿಂಗಳ ಹಿಂದೆ ದಿವ್ಯಾ ಸವಂತ್ ಖಾಸಗಿ ಸುದ್ದಿ ವಾಹಿನಿಯಲ್ಲಿ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಲ್ಲದೇ, ತಮ್ಮ ಐಷಾರಾಮಿ ಜೀವನಶೈಲಿ ನಡೆಸಲು ಕಳ್ಳ ದಾರಿ ಹಿಡಿದಿದ್ದರೆ ಎನ್ನಲಾಗುತ್ತಿದೆ. 

Tap to resize

ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ನಂತರ ಯೂಟ್ಯೂಬ್ ಚಾನೆಲ್ ಸಹ ಆರಂಭಿಸಿದ್ದರು. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಹಾಗೂ ಬೇರೆ ಬೇರೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪಾದನೆ ಶುರು ಮಾಡಿಕೊಂಡಿದ್ದರು. 

ಖಾಸಗಿ ಸುದ್ದಿವಾಹಿನಿಯಲ್ಲಿ ಆಕೆಗೆ 15 ಸಾವಿರ ರೂಪಾಯಿ ಸಂಬಳವಿತ್ತು. ಆದರೆ, ಯಾವಾಗ ದಿವ್ಯಾ ವಸಂತ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಲು ಶುರು ಮಾಡಿದರೋ, ಆಗ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ವೀಡಿಯೋ, ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಶುರು ಮಾಡಿದ್ದವು. 

ಐಷಾರಾಮಿ ಜೀವನಕ್ಕೆ ಮನ ಸೋತಿದ್ದ ದಿವ್ಯಾ ವಸಂತ್ ಸುಲಭವಾಗಿ ಹಣ ಸಂಪಾದಿಸಲು ಅಡ್ಡ ದಾರಿ ತುಳಿದು ಸಂಕಷ್ಟಕ್ಕೆ ತುತ್ತಾಗಿದ್ದಾಲೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಕೆಲವು ಸ್ನೇಹಿತರ ಜೊತೆಗೂಡಿ ಸ್ಪಾ ಹಾಗೂ ಪ್ರತಿಷ್ಠಿತ ವೈದ್ಯರನ್ನು ವಂಚಿಸಿ, ಸುಲಿಗೆ ಮಾಡಲು ಯತ್ನಿಸುತ್ತಿದ್ದ ಆರೋಪ ಇವರ ಮೇಲಿದೆ. 

ಸುಮಾರು 72 ಸಾವಿರ ಇನ್‌ಸ್ಟಾಗ್ರಾಂ ಫಾಲೋವರ್ಸ್ ಹೊಂದಿರುವ ದಿವ್ಯಾ ವಸಂತ್ ಯಾವುದೇ ಬ್ರ್ಯಾಂಡ್‌ ಸಂಪರ್ಕಿಸಿದರೂ ಅವರೊಟ್ಟಿಗೆ  collaboration ಮಾಡಿಕೊಳ್ಳುತ್ತಿದ್ದರು. ರಿಯಾಲಿಟಿ ಶೋನಲ್ಲಿ ಅಲ್ಪ ಸ್ವಲ್ಪ, ಇಂಥ ಕಾರ್ಯಗಳಿಂದ ತುಸು ಹಣ ಸೇರಿದರೂ ತಮ್ಮ ಐಶಾರಾಮಿ ಬದುಕಿಗೆ ಸಾಕಾಗುತ್ತಿರಲಿಲ್ಲ. 

ಯೂಟ್ಯೂಬ್ ಕಾಮಿಡಿ ಸ್ಟಾರ್‌ಗಳ ಜೊತೆ ಸೇರಿಕೊಂಡು ಬಿತ್ರಿಬಿಲ್ಲಿ ಶೀರ್ಷಿಕೆ ಇರುವ ಕಿರುಚಿತ್ರದಲ್ಲಿ ದಿವ್ಯಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ದಾರಿಯಲ್ಲಿ ನಡೆದಿದ್ದರೆ ಹಲವು ಅವಕಾಶಗಳು ಇವರನ್ನು ಹುಡುಕಿಕೊಂಡು ಬರುತ್ತಿತ್ತು. ಆದರೆ, ಬಣ್ಣದ ಬದುಕಿಗೆ ಕಟ್ಟು ಬಿದ್ದು, ಪೋಲೀಸರ ಅತಿಥಿಯಾಗುವ ಕಾಲ ಬಂದಿದೆ. 

ಪಟಪಟ ಮಾತನಾಡುವ ದಿವ್ಯ ವಸಂತ ಇನ್‌ಸ್ಟಾಗ್ರಾಂ ಖಾತೆ ನೋಡಿದರೆ ಒಮ್ಮೆ ಹಾಕಿದ ಬಟ್ಟೆ ಮತ್ತೊಮ್ಮೆ ಹಾಕಿಲ್ಲ, ಐಷಾರಾಮಿ ಕಾರುಗಳ ಜೊತೆ ಪೋಸ್ಟ್ ಹಾಕಿದ್ದಾರೆ. ಬಡ ಕುಚುಂಬದಿಂದ ಬಂದ ಇವರಿಗೆ ಇಷ್ಟು ದುಡ್ಡು ಎಲ್ಲಿಂದ ಬರುತ್ತೆ ಎನ್ನುವುದೇ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು. 

Latest Videos

click me!