ಈ ಟ್ರೋಫಿನ ಮನೆಗೆ ತೆಗೊಂಡೋಗೊಕೆ ಆಗಲ್ಲ ಎಂದು ಹಾಟೆಸ್ಟ್ ಫೋಟೋ ಶೇರ್ ಮಾಡಿದ ಸಾನ್ಯಾ!

Published : Jul 05, 2024, 04:56 PM IST

ಬಿಗ್ ಬಾಸ್ ಮೂಲಕ ಸದ್ದು ಮಾಡಿದ ಸುಂದರಿ ಸಾನ್ಯಾ ಅಯ್ಯರ್, ತಮ್ಮ ಹೊಸ ಫೋಟೋಶೂಟ್ ಮೂಲಕ ಇಂಟರ್ನೆಟ್ ನಲ್ಲಿ ಮತ್ತೆ ಸದ್ದು ಮಾಡ್ತಿದ್ದಾರೆ.   

PREV
17
ಈ ಟ್ರೋಫಿನ ಮನೆಗೆ ತೆಗೊಂಡೋಗೊಕೆ ಆಗಲ್ಲ ಎಂದು ಹಾಟೆಸ್ಟ್ ಫೋಟೋ ಶೇರ್ ಮಾಡಿದ ಸಾನ್ಯಾ!

ಪುಟ್ಟ ಗೌರಿಯ ಮದುವೆ ಧಾರಾವಾಹಿಯಲ್ಲಿ ಪುಟ್ಟ ಗೌರಿಯಾಗಿ ಖ್ಯಾತಿ ಪಡೆದ ನಟಿ ಸಾನ್ಯಾ ಅಯ್ಯರ್ (Saanya Iyer), ಇದೀಗ ಗೌರಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಹೆಜ್ಜೆಯನ್ನಿಡೋದಕ್ಕೆ ತಯಾರಿ ನಡೆಸಿದ್ದಾರೆ. 
 

27

ಇಂದ್ರಜಿತ್ ಲಂಕೇಶ್ (Indrajith Lankesh) ನಿರ್ದೇಶನದ ಗೌರಿ ಸಿನಿಮಾ ರಿಲೀಸಿಗೆ ಭರ್ಜರಿ ತಯಾರಿ ನಡೆಯುತ್ತಿದ್ದು, ಈ ಸಿನಿಮಾ ಮೂಲಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ. ಈ ಸಿನಿಮಾಗೆ ಸಾನ್ಯಾ ಅಯ್ಯರ್ ನಾಯಕಿ.

37

ಕಳೆದ ಹಲವು ದಿನಗಳಿಂದ ಸಿನಿಮಾದ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದು, ಸಾನ್ಯಾ ಅಯ್ಯರ್ ಕೂಡ ಪ್ರಚಾರ ಕಾರ್ಯದಲ್ಲಿ ತಮ್ಮ ಸ್ಟೈಲಿಶ್ ಲುಕ್ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ಒಂದು ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ (social media) ವೈರಲ್ ಆಗಿದೆ. 
 

47

ಬಿಗ್ ಬಾಸ್ ಒಟಿಟಿ ಮತ್ತು ಬಿಗ್ ಬಾಸ್ ಸೀಸನ್ 9ರ ಮೂಲಕ ಜನಪ್ರಿಯತೆ ಪಡೆದ ನಟಿ ಸಾನ್ಯಾ ಅಯ್ಯರ್ ಇದೀಗ ಗೌರಿ ಸಿನಿಮಾದ ಮೂಲಕ ಸದ್ದು ಮಾಡ್ತಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ, ಆದ್ರೆ ಈ ಸಿನಿಮಾಗಾಗಿ ನಟಿ ಭರ್ಜರಿ ಫೋಟೋ ಶೂಟ್ ಮಾಡಿಸಿದ್ದಂತೂ ಸುಳ್ಳಲ್ಲ. 
 

57

ಇತ್ತಿಚಿಗೆ ಸಾನ್ಯಾ ಬಾಡಿ ಹಗ್ಗಿಂಗ್ ಬ್ಲ್ಯಾಕ್ ಬಣ್ಣದ ಡ್ರೆಸ್ಸಲ್ಲಿ ಕಾಣಿಸಿಕೊಂಡಿದ್ದು, ಹೊಸ ಫೋಟೋ ಶೂಟಿನಲ್ಲಿ (photoshoot) ನಟಿ ತುಂಬಾ ಹಾಟ್ ಆಗಿ ಕಂಡು ಬಂದಿದ್ದಾರೆ. ಈ ಫೋಟೋ ಸದ್ಯ ವೈರಲ್ ಆಗುತ್ತಿದ್ದು, ಸಿಕ್ಕಾಪಟ್ಟೆ ಲೈಕ್ಸ್ ಪಡೆದುಕೊಂಡಿದೆ. ಇವರ ಬೋಲ್ಡ್ ಲುಕ್ ಗೆ ಅಭಿಮಾನಿಗಳು ಉಫ್ ಉಫ್ ಅನ್ನುತ್ತಿದ್ದಾರೆ. 
 

67

ಸೆಲೆಬ್ರಿಟಿ ಕಾಸ್ಟ್ಯೂಮ್ ಡಿಸೈನರ್ ಆಗಿರುವ ಲಕ್ಷ್ಮೀ ಕೃಷ್ಣ ಅವರ ವಿನ್ಯಾಸದ ಡ್ರೆಸ್ ಧರಿಸಿರುವ ಸಾನ್ಯಾ, ಫೋಟೋ ಶೂಟ್ ಮಾಡಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಅದಕ್ಕೆ The trophy you can’t take home ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. ಸುಹಾಸ್ ಸಪ್ತಗಿರಿ ಫೋಟೋ ಶೂಟಿನಲ್ಲಿ ನಟಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. 
 

77

ಸಾನ್ಯಾ ಫೋಟೋಸ್ ಮತ್ತು ಕ್ಯಾಪ್ಶನ್ ನೋಡಿ, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಯಾರ್ ಹೇಳಿದ್ದು ಈ ಟ್ರೋಫಿನ ಮನೆಗೆ ತೆಗೆದುಕೊಂಡು ಹೋಗೋದಕ್ಕೆ ಆಗಲ್ಲ ಅಂತ, ನಾನು ತೆಗೊಂದು ಹೋಗ್ತಿನಿ ಎಂದು ನಟಿ ಅಂಕಿತಾ ಅಮರ್ ಕಾಮೆಂಟ್ ಮಾಡಿದ್ದಾರೆ. ಇನ್ನು ಹಲವು ಜನ ಬೋಲ್ಡ್, ಹಾಟೆಸ್ಟ್, ಬ್ಯೂಟಿಫುಲ್, ಬೆಂಕಿ, ಉಫ್ ಉಫ್, ಗಾರ್ಜಿಯಸ್, ಗಾಡೆಸ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories