ಭೂಮಿಕಾ- ಸುಧಾ ರಕ್ಷಿಸೋಕೆ ಎಂಟ್ರಿ ಕೊಟ್ಟ ಆಪತ್ಭಾಂಧವ ಯಾರು? ಸುಧಾ ಗಂಡ!
ಹಣದ ದುರಾಸೆಗಾಗಿ ಸುಧಾ, ಆಕೆಯ ಮಗಳು ಲಚ್ಚಿ ಹಾಗೂ ಭೂಮಿಕಾಳನ್ನು ಕೊಲ್ಲೋದಕ್ಕೆ ಜೈ ದೇವ್ ಪ್ಲ್ಯಾನ್ ಮಾಡಿದ್ದು, ಈಗ ಅವರನ್ನು ರಕ್ಷಿಸೋಕೆ ಹೊಸ ಪಾತ್ರದ ಎಂಟ್ರಿಯಾಗಿದೆ. ಇವರೇನೆ ಸುಧಾ ಗಂಡ ಅಂತಿದ್ದಾರೆ ಜನ.
ಹಣದ ದುರಾಸೆಗಾಗಿ ಸುಧಾ, ಆಕೆಯ ಮಗಳು ಲಚ್ಚಿ ಹಾಗೂ ಭೂಮಿಕಾಳನ್ನು ಕೊಲ್ಲೋದಕ್ಕೆ ಜೈ ದೇವ್ ಪ್ಲ್ಯಾನ್ ಮಾಡಿದ್ದು, ಈಗ ಅವರನ್ನು ರಕ್ಷಿಸೋಕೆ ಹೊಸ ಪಾತ್ರದ ಎಂಟ್ರಿಯಾಗಿದೆ. ಇವರೇನೆ ಸುಧಾ ಗಂಡ ಅಂತಿದ್ದಾರೆ ಜನ.
ಅಮೃತಧಾರೆ ಧಾರಾವಾಹಿ (Amruthadhare serial) ದಿನದಿಂದ ದಿನಕ್ಕೆ ಒಂದೊಂದು ಟ್ವಿಸ್ಟ್ ಗಳನ್ನು ನೀಡುವ ಮೂಲಕ ವೀಕ್ಷಕರು ತುದಿಗಾಲಲ್ಲಿ ನಿಂತು ಸೀರಿಯಲ್ ನೋಡುವಂತೆ ಮಾಡುತ್ತಿದೆ. ಈಗಷ್ಟೇ ಮಲ್ಲಿ ಮತ್ತೆ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ. ಇದನ್ನು ನೋಡಿ ಭೂಮಿಕಾ ತುಂಬಾನೆ ಖುಷಿ ಪಟ್ಟಿದ್ದಳು. ಇದಕ್ಕೂ ಮುನ್ನ ಗೌತಮ್ ದಿವಾನ್ ಮುಂದೆ ದೊಡ್ಡದೊಂದು ರಹಸ್ಯವೇ ಬಯಲಾಗಿದೆ.
ಮಲ್ಲಿಯನ್ನ ಊರಿನಿಂದ ವಾಪಾಸ್ ಕರೆದುಕೊಂಡು ಬರೋದಕ್ಕೆ ಊರಿಗೆ ಹೋಗಿದ್ದ ಗೌತಮ್ ದಿವಾನ್ ಗೆ ಮಲ್ಲಿನೆ ಭೂಪತಿ ಮಗಳು ಅನ್ನೋ ಸತ್ಯ ಗೊತ್ತಾಗಿದೆ. ಅಷ್ಟೇ ಅಲ್ಲ, ಮಲ್ಲಿಯ ತಾತನಿಗೆ ಬಾಯಿ ಬರುತ್ತೆ ಹಾಗೂ ಮಲ್ಲಿಯನ್ನು ಭೂಪತಿ ನೆರಳಲ್ಲಿ ಬೆಳೆಸಬಾರದು ಎನ್ನುವ ಮಲ್ಲಿ ತಾಯಿಯ ಕೊನೆಯ ಆಸೆಯನ್ನು ಈಡೇರಿಸೋದಕ್ಕೆ ತಾತ ಮೂಕನಾಗಿ, ಭೂಪತಿಯಿಂದ ಮಲ್ಲಿಯನ್ನು ದೂರ ಇಟ್ಟಿರುವ ವಿಷ್ಯವೂ ಗೊತ್ತಾಗಿದೆ.
ಎರಡೆರಡು ಟ್ವಿಸ್ಟ್ ಗಳನ್ನು (twist in serial) ನೋಡಿ ಶಾಕ್ ಆಗಿರುವ ವೀಕ್ಷಕರಿಗೆ ಇದೀಗ ಅಮೃತಧಾರೆ ಸೀರಿಯಲ್ ಮತ್ತೊಂದು ಟ್ವಿಸ್ಟ್ ನೀಡಿದೆ. ಅದೇನೆಂದರೆ ಸೀರಿಯಲ್ ಗೆ ಇದೀಗ ಹೊಸ ವ್ಯಕ್ತಿಯ ಆಗಮನ ಆಗಿದೆ. ಆ ವ್ಯಕ್ತಿ ಯಾರು? ಯಾಕೆ ಬಂದ ಅನ್ನೋದು ಮಾತ್ರ ತಿಳಿದಿಲ್ಲ. ಆದರೆ ಎಂಟ್ರಿ ಮಾತ್ರ ವೀಕ್ಷಕರಿಗೆ ಇಷ್ಟ ಆಗಿದೆ.
ಗೌತಮ್ ದಿವಾನ್ ಆಸ್ತಿಯೆಲ್ಲಾ ತನ್ನ ಪಾಲಾಗಬೇಕು ಎಂದು ಯೋಚನೆ ಮಾಡುವ ಜೈ ದೇವ್ ಸುಧಾ ಮತ್ತು ಅವಳ ಮಗಳು ಲಚ್ಚಿಯನ್ನು ಕೊಲ್ಲೋದಕ್ಕೆ ಪ್ಲ್ಯಾನ್ ಮಾಡ್ತಾನೆ. ಲಚ್ಚಿಯನ್ನು ಶಾಲೆಯಿಂದ ಕರೆದುಕೊಂಡು ಬರೋದಕ್ಕೆ ಸುಧಾ ಹೊರಟಾಗ ಭೂಮಿ ಕೂಡ ತಾನು ಬರೋದಾಗಿ ಹೇಳಿ ಸುಧಾ ಜೊತೆ ಹೋಗಿದ್ದಾಳೆ.
ಸುಧಾ ಮತ್ತು ಮಗಳನ್ನು ಕೊಲ್ಲೋದಕ್ಕೆ ರೌಡಿಗಳನ್ನು ಕಳುಹಿಸಿದ ಜೈ ದೇವ್ (Jaidev), ಅಲ್ಲಿ ಭೂಮಿಕಾ ಇರೋದನ್ನು ನೋಡಿ ಮತ್ತಷ್ಟು ಖುಷಿ ಪಟ್ಟು, ಮೂರು ಜನರನ್ನು ಕೊಲ್ಲುವಂತೆ ಆದೇಶ ನೀಡುತ್ತಾನೆ. ಭೂಮಿ ಮತ್ತು ಸುಧಾ ಇಬ್ಬರು ಮಗುವಿನ ಕೈ ಹಿಡಿದು ಹೋಗಬೇಕಾದರೆ ರೌಡಿಗಳು ಕಾರಲ್ಲಿ ಬಂದು ಇನ್ನೇನು ಗುದ್ದಬೇಕು ಅನ್ನುವಷ್ಟರಲ್ಲಿ ಟ್ವಿಸ್ಟ್ ಸಿಗುತ್ತೆ.
ಹೌದು, ಇನ್ನೇನು ಕಾರು ಗುದ್ದಿ, ಏನೋ ದೊಡ್ಡ ಅಪಾಯ ಉಂಟಾಗುತ್ತೆ ಎನ್ನುವಷ್ಟರಲ್ಲಿ ಅಲ್ಲಿಗೆ ರೌಡಿಗಳ ಕಾರಿನ ಮುಂದೆ ಇನ್ನೊಂದು ಕಾರು ಸಡನ್ ಆಗಿ ಬಂದು ನಿಲ್ಲುತ್ತೆ. ಇದನ್ನ ನೋಡಿ ಭೂಮಿಕಾ- ಸುಧಾ ಇಬ್ಬರೂ ಕೂಡ ಶಾಕ್ ಆಗ್ತಾರೆ. ಹಾಗಿದ್ರೆ ಅಪಾಯದಲ್ಲಿರೋ ಇವರನ್ನು ಕಾಪಾಡೋಕೆ ಬಂದ ಆ ಅಪಾದ್ಭಾಂಧವ ಯಾರು ಎನ್ನುವ ಕುತೂಹಲಕಾರಿ ಪ್ರಶ್ನೆ ಮೂಡುತ್ತದೆ.
ಅಮೃತಧಾರೆ ಪ್ರೊಮೋ (Amruthadhaare promo) ನೋಡಿರುವ ವೀಕ್ಷಕರು ಈಗ ಎಂಟ್ರಿ ಕೊಟ್ಟಿರೋದು ಸುಧಾ ಗಂಡನೇ ಇರಬೇಕು ಎನ್ನುತ್ತಿದ್ದಾರೆ. ಹೊಸ ಎಂಟ್ರಿ ಮೋಸ್ಲಿ ಸುಧಾ ಗಂಡ ಇರ್ಬೇಕು, ಹೊಸ ವಿಲ್ಲನ್ ಅಥವಾ ಒಳ್ಳೆವನ ನೋಡ್ಬೇಕು, ಈ ಧಾರಾವಾಹಿ ಲೀ ಟ್ವಿಸ್ಟ್ ಮೇಲೇ ಟ್ವಿಸ್ಟ್. ಸೂಪರ್. ಆಲ್ವಾ ನೋಡೇಕೆ ತುಂಬಾ ಇಂಟ್ರೆಸ್ಟ್ ಆಗಿರುತ್ತೆ ಅಂತಾನೂ ಹೇಳಿದ್ದಾರೆ ಜನ. ಈ ಜೈ ಪ್ಲಾನ್ ಯಾವತ್ತೂ ಠುಸ್ ಪಟಾಕಿ ಆಗೋದು, ಜೈ ಗೆದ್ದಿರೋ ಹಿಸ್ಟರೀನೆ ಇಲ್ಲ ಅಂತಾನೂ ಹೇಳ್ತಿದ್ದಾರೆ. ಇನ್ನು ಯಾವುದಕ್ಕೂ ಇದು ಸುಧಾ ಗಂಡನೇನಾ? ಅಥವಾ ಸುಧಾ ಗಂಡ ಸತ್ತು ಹೋಗಿದ್ದು, ಇದು ಬೇರೆ ವ್ಯಕ್ತಿ ಸುಧಾ ಜೀವನಕ್ಕೆ ಎಂಟ್ರಿ ಕೊಡ್ತಿದ್ದಾರ ಕಾದು ನೋಡಬೇಕು.