#BBK8: ಯೋಗ, ಡ್ರೆಸ್ ಮಾಡ್ಕೊಂಡೇ ವೈಷ್ಣವಿ ಸೈಲೆಂಟ್ ಆಗಿದ್ರೆ ಬೇಗ ಎಲಿಮಿನೇಟ್ ಆಗ್ತಾರಾ?

First Published | Mar 8, 2021, 1:14 PM IST

ಅಗ್ನಿಸಾಕ್ಷಿ ನಟಿ ಸನ್ನಿಧಿ ಅಲಿಯಾಸ್ ವೈಷ್ಣವಿ ಬಿಗ್‌ಬಾಸ್‌ ಮನೆಯಲ್ಲಿ ತುಂಬಾನೇ ಸೈಲೆಂಟ್‌ ಆಗಿರುವುದನ್ನು ನೋಡಿ ನೆಟ್ಟಿಗರದ್ದು ಸಿಕ್ಕಾಪಟ್ಟೆ ಪ್ರಶ್ನಿಸುತ್ತಿದ್ದಾರೆ. ಲವಲವಿಕೆಯಿಂದ ಆಟವಾಡಿಕೊಂಡು ಇರಬೇಕಾದ ಈ ಕಿರುತೆರೆ ನಟಿ ಹಿಂಗ್ಯಾಕೆ ಆಡುತ್ತಿದ್ದಾರೋ ಗೊತ್ತಾಗ್ತಾ ಇಲ್ಲ. 
ಫೋಟೋಕೃಪೆ: ವೈಷ್ಣವಿ ಇನ್‌ಸ್ಟಾಗ್ರಾಂ

ಬಿಗ್‌ ಬಾಸ್‌ ಮನೆಯಲ್ಲಿ ಗುಳಿಕೆನ್ನೆ ಚೆಲುವೆ ವೈಷ್ಣವಿ.
ಬಿಬಿ ಮನೆಯಲ್ಲಿ ಒಂದು ವಾರ ಕಳೆದುರೂ ವೈಷ್ಣವಿ ಇರುವುದೇ ಗೊತ್ತಾಗುತ್ತಿಲ್ಲ.
Tap to resize

ಯಾವುದೇ ಕಾಂಟ್ರೋವರ್ಸಿ ಅಥವಾ ಜಗಳ ಇಲ್ಲ ಅಂದ್ರೆ ಎಲಿಮಿನೇಟ್ ಆಗುತ್ತೀರಾ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ನೆಟ್ಟಿಗರು.
ಸದಾ ಮಾತನಾಡುತ್ತಾ, ಏನಾದರೂ ಮಾಡುತ್ತಿದ್ದರೆ ಮಾತ್ರ ಬಿಬಿ ಮನೆಯಲ್ಲಿ ಬರಲು ಸಾಧ್ಯ. ನೀವು ಇಷ್ಟ ಸೈಲೆಂಟ್ ಆದರೆ ಇರುವುದು ಗೊತ್ತಾಗುವುದಿಲ್ಲ ಎಂದು ಪ್ರೀತಿಯ ಎಚ್ಚರಿಕೆ ನೀಡಿದ್ದಾರೆ ಅಭಿಮಾನಿಗಳು.
ಟ್ರೆಡಿಷನಲ್‌ ಹಾಗೂ ವೆಸ್ಟ್ರನ್‌ ಉಡುಗಳಲ್ಲಿ ವೈಷ್ಣವಿ ಸುಂದರವಾಗಿ ಕಾಣಿಸುತ್ತಾರೆ.
ವೈಷ್ಣವಿ ಬಿಗ್ ಬಾಸ್‌ ಪ್ರವೇಶಿಸುವುದರ ಬಗ್ಗೆ ಈ ಹಿಂದೆಯೇ ಮಾಹಿತಿ ಲಭ್ಯವಾಗಿತ್ತು.
ಬೆಳಗ್ಗೆ ಪ್ರತಿಸ್ಪರ್ಧಿಗಳ ಜೊತೆ ಯೋಗ ಮಾಡುವ ವೈಷ್ಣವಿ ಮತ್ತೆಲ್ಲೂ ಕಾಣಿಸಿಕೊಳ್ಳುವುದಿಲ್ಲ, ಯಾಕೆ?
ಈ ವಾರ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಗಳಲ್ಲಿ ವೈಷ್ಣವಿಯನ್ನೇ ಆರಿಸಬೇಕೆಂದು ಶಂಕರ್ ಅಶ್ವತ್ಥ್‌ ಹೇಳಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ವೈಷ್ಣವಿ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ವೈಷ್ಣವಿ ಇಷ್ಟೊಂದು ಸೈಲೆಂಟ್ ಆಗಿರುವುದು ಯಾಕೆ ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.

Latest Videos

click me!