ಮಿಸ್ ಇಂಡಿಯಾ ಸೌತ್ ಕಿರೀಟ ಪಡೆದಿರುವ ಕನ್ನಡತಿ ದಿವ್ಯಾ ಸುರೇಶ್.
ಕನ್ನಡ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ದಿವ್ಯಾಗೆ ಸಿಕ್ಕಾಪಟ್ಟೆ ಹಠ ಹಾಗೂ ಕೋಪ ಜಾಸ್ತಿ ಅಂತೆ. ಈ ಎರಡನ್ನೂ ಕಡಿಮೆ ಮಾಡಿಕೊಳ್ಳಲು ಬಿಗ್‌ಬಾಸ್‌ಗೆ ಬಂದಿದ್ದಾರಂತೆ.
ತಾಯಿ ಹಾಗೂ ಅಣ್ಣಂದಿರ ಜೊತೆಗಿರುವ ದಿವ್ಯಾ ವೇದಿಕೆ ಮೇಲೆ ತಂದೆ ಬಗ್ಗೆ ಮಾತನಾಡಿದ್ದಾರೆ.
ಕುಟುಂಬದಿಂದ ದೂರ ಉಳಿದ ತಂದೆ ಬಿಟ್ಟೋದ ಬೇಜಾರು ನನಗಿಲ್ಲ. ಆದರೆ ಇಷ್ಟು ವರ್ಷ ಅವರು ತೋರಿಸಿದ ಪ್ರೀತಿ ಸುಳ್ಳು ಎಂದು ತಿಳಿದುಕೊಳ್ಳಲು ಸಮಯ ಬೇಕಾಗಿತ್ತು, ಎಂದಿದ್ದಾರೆ.
2017ರಲ್ಲಿ 'ಹಿಲ್ಟನ್ ಹೌಸ್' ಚಿತ್ರದ ಮೂಲಕ ದಿವ್ಯಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
2019ರಲ್ಲಿ ಡಿಗ್ರಿ ಕಾಲೇಜ್ ಮೂಲಕ ಟಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟರು.
'ನನ್ನ ಹೆಂಡ್ತಿ ಎಂಬಿಬಿಎಸ್' ಹಾಗೂ 'ಜೋಡಿಹಕ್ಕಿ' ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ.