ಸಿದ್ದು ರಾಜೀನಾಮೆ, ಅರ್ಚನಾ ಪುರಾನ್ ಸಿಂಗ್‌ ಕುರ್ಚಿಗೆ ಕುತ್ತು -ಮೀಮ್‌ಗಳು ವೈರಲ್!

First Published | Sep 29, 2021, 4:53 PM IST

ಪಂಜಾಬಿನಲ್ಲಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ  ನವಜೋತ್ ಸಿಂಗ್ ಸಿಧು ಅವರು ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರವಲ್ಲದೆ, ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ, ಸಿದ್ದು ಅವರ ಈ ನಿರ್ಧಾರದಿಂದ, ರಾಜಕೀಯದ ಜೊತೆಗೆ, ಬಾಲಿವುಡ್‌ನಲ್ಲೂ ಸಂಚಲನ ಸೃಷ್ಟಿಸಿದೆ.  ಸಿದ್ದು ರಾಜೀನಾಮೆಗೆ ಸಂಬಂಧಿಸಿದ ಸುದ್ದಿಗಳು ಮತ್ತು ಮೀಮ್‌ಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ ಇದಷ್ಟೇ ಅಲ್ಲ, ಸಿದ್ದು ರಾಜೀನಾಮೆ ಸುದ್ದಿಯ ನಂತರ, ಅರ್ಚನಾ ಪುರಾನ್ ಸಿಂಗ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿದ್ದಾರೆ.
 

ಸಿದ್ದು ರಾಜೀನಾಮೆ ನೀಡಿದ ನಂತರ, ಜನರು ಈಗ ಅರ್ಚನಾ ಪುರಾನ್ ಸಿಂಗ್ (Archana Puran Singh) ಅವರ ಕುರ್ಚಿಗೆ ಅಪಾಯವಿದೆ ಹೇಳಿ ತಮಾಷೆಯ ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನವಜೋತ್ ಸಿಂಗ್ ಸಿಧು ರಾಜೀನಾಮೆ ನಂತರ, ಅರ್ಚನಾ ಪುರಾನ್ ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ (Social Media) ತಮಾಷೆಯ ಮೀಮ್ಸ್ (Memes) ವೈರಲ್ (Viral) ಆಗಿದೆ.

ನವಜೋತ್ ಸಿಂಗ್ ಸಿಧು ಹೊಂದೊಮ್ಮೆ 'ದಿ ಕಪಿಲ್ ಶರ್ಮಾ ಶೋ' (The Kapil Sharma Show) ನ ಜಡ್ಜ್‌ ಆಗಿದ್ದರು. ಆದಾಗ್ಯೂ, ಒಮ್ಮೆ ಅವರು ಪಾಕಿಸ್ತಾನದ (Pakistan) ಬಗ್ಗೆ  ನೀಡಿದ ಹೇಳಿಕೆಯಿಂದ ಸಾಕಷ್ಟು ಗದ್ದಲ ಉಂಟಾಯಿತು ಮತ್ತು ನಂತರ ಸಿದ್ದು ತಮ್ಮ ಜಡ್ಜ್‌ ಕುರ್ಚಿಯನ್ನು ಕಳೆದುಕೊಳ್ಳಬೇಕಾಯಿತು. 

Tap to resize

ಇದರ ನಂತರ, ಶೋ ತಯಾರಕರು ಸಿದ್ದು ಬದಲಿಗೆ ಅರ್ಚನಾ ಪುರಾನ್ ಸಿಂಗ್ ಅವರನ್ನು ಜಡ್ಜ್‌ (Judge) ಆಗಿ ನೇಮಿಸಿದರು. ಅಂದಿನಿಂದ, ಅರ್ಚನಾ ಜಡ್ಜ್‌ ಕುರ್ಚಿಯಲ್ಲಿ ಕಾಣಸಿಗುತ್ತಾರೆ. ಆದಾಗ್ಯೂ, ಸಿದ್ದು ರಾಜೀನಾಮೆ ನೀಡಿದ ನಂತರ, ಅರ್ಚನಾ ಕುರ್ಚಿಗೆ ತೊಂದರಯಾಗಿದೆ ಎಂದು ತಮಾಷೆಯ ಮೀಮ್ಸ್ ಮತ್ತು ಜೋಕ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ರಾಜೀನಾಮೆ (Resignation) ನಂತರ, ಸಾಮಾಜಿಕ ಮಾಧ್ಯಮ (Social Media) ಬಳಕೆದಾರರು (Users) ತಮಾಷೆಯ ಮೀಮ್ಸ್ ಮೂಲಕ ಅರ್ಚನಾ ಪುರಾನ್ ಸಿಂಗ್ ಭಾವನೆಗಳು ಹೇಗಿರಬಹುದೆಂಬುದನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗ ಅರ್ಚನಾ ಪುರಾನ್ ಸಿಂಗ್ ಅವರ ಕೆಲಸ ಅಪಾಯದಲ್ಲಿದೆ ಎಂದು ಜನರು ಹೇಳುತ್ತಿದ್ದಾರೆ.

ಮೀಮ್‌ ಗಳನ್ನು ಹಂಚಿಕೊಳ್ಳುವಾಗ, 'ಸಿಧು ರಾಜೀನಾಮೆ ನೀಡಿದ ನಂತರ ಅರ್ಚನಾ ಪುರಾನ್ ಸಿಂಗ್ ಉದ್ವೇಗಕ್ಕೆ ಒಳಗಾಗಿದ್ದಾರೆ ಮತ್ತು ನೌಕ್ರಿ.ಕಾಮ್‌ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಒಬ್ಬ ವ್ಯಕ್ತಿ ಬರೆದಿದ್ದಾರೆ. ಅರ್ಚನಾ ಪ್ರಸ್ತುತ ರಾಹುಲ್ ಗಾಂಧಿಗಿಂತ ಹೆಚ್ಚು ಒತ್ತಡದಲ್ಲಿದ್ದಾರೆ ಎಂಬ ಟ್ರೋಲ್‌ಗಳು social mediaದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. 

ಕಪಿಲ್ ಶರ್ಮಾ ಬಗ್ಗೆ ನಿಮಗೆ ಗೊತ್ತಿರದ ವಿಷಯಗಳು

ಅರ್ಚನಾ ಪುರಾನ್ ಸಿಂಗ್ 'ಆಗ್ ಕಾ ಗೋಲಾ' ಚಿತ್ರದಲ್ಲಿ ಸನ್ನಿ ಡಿಯೋಲ್ (Sunny Deol) ಜೊತೆ ಚುಂಬಿಸುವ (Kissing Scenes) ದೃಶ್ಯವನ್ನು ಮಾಡಿದ್ದರು. ಇದಲ್ಲದೇ, 'ರಾತ್ ಕೆ ಗುನ್ಹಾ' ದಂತಹ ಬಿ-ದರ್ಜೆಯ ಚಿತ್ರಗಳಲ್ಲಿಯೂ ಅವರು ಕೆಲಸ ಮಾಡಿದ್ದಾರೆ.

ಮುಂಬೈ(Mumbai) ನಲ್ಲಿ, ಅರ್ಚನಾ ತನ್ನ ವೃತ್ತಿಜೀವನದ ಆರಂಭದಲ್ಲಿ ಅನೇಕ ಜಾಹೀರಾತು (Advertisement)  ಮಾಡಿದರು. ನಿರ್ಮಾಪಕ ಜಲಾಲ್ ಆಘಾ ಅವರ 'ಬ್ಯಾಂಡ್ ಏಡ್' ಜಾಹೀರಾತಿನಿಂದ ಯಶಸ್ಸನ್ನು ಪಡೆದರು. ಇಲ್ಲಿ ಅವರ ಪ್ರತಿಭೆ ಗಮನಕ್ಕೆ ಬಂದಿತು ಮತ್ತು ಅವರು ಟಿವಿ ಶೋ 'ಮಿಸ್ಟರ್ ಅಂಡ್ ಮಿಸೆಸ್' ನಲ್ಲಿ ಪಾತ್ರವನ್ನು ಪಡೆದರು.

1987 ರಲ್ಲಿ, ಅರ್ಚನಾ ಆದಿತ್ಯ ಪಂಚೋಲಿ ಎದುರು ಟಿವಿ ಮೂವಿ 'ಅಭಿಷೇಕ್' ಮತ್ತು  ಇದರ ನಂತರ ಅವರು ನಸಿರುದ್ದೀನ್ ಶಾ ಎದುರು 'ಜಲ್ವಾ' (Jalwa) ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. 'ಜಲ್ವಾ' ಚಿತ್ರ ಸೂಪರ್ ಹಿಟ್ ಆಗಿತ್ತು ಮತ್ತು ಅರ್ಚನಾ ರಾತ್ರೋರಾತ್ರಿ ದೊಡ್ಡ ನಟಿಯಾದರು..

ಅರ್ಚನಾ ಪುರಾನ್ ಸಿಂಗ್ ಅವರು ಬಾಲಿವುಡ್‌ನಲ್ಲಿ 'ಕುಚ್ ಕುಚ್ ಹೋತಾ ಹೈ', 'ಮೊಹಬ್ಬತೀನ್' ಮತ್ತು 'ಬೋಲ್ ಬಚ್ಚನ್' ನಂತಹ ಚಿತ್ರಗಳಲ್ಲಿ ಹಾಸ್ಯದ ಮೂಲಕ ಜನರನ್ನು ನಗಿಸಿದ್ದಾರೆ. ಅರ್ಚನಾ ಶೋಲಾ ಔರ್ ಶಬ್ನಮ್, ಆಶಿಕ್ ಅವರಾ, ಟಕ್ಕರ್, ಬೇಡ ದಿಲ್ವಾಲಾ, ಮೇಳ, ಮಸ್ತಿ, ಇನ್ಸಾನ್, ಗುಡ್ಲಕ್, ದೇ ದನದನ್, ಕಿಕ್, ಡಾಲಿ ಕಿ ಡೋಲಿ ಮತ್ತು ಹೌಸ್‌ಫುಲ್ 4 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 

ಕಪಿಲ್ ಶರ್ಮಾ ಲವ್ ಸ್ಟೋರಿ

Latest Videos

click me!