ಮಾಲಾಶ್ರೀ ಆಯ್ತು ಈಗ ನಟಿ ಆರತಿ ಲುಕ್‌ನಲ್ಲಿ ಕಾಣಿಸಿಕೊಂಡ ನಿರೂಪಕಿ ಅನುಪಮಾ ಗೌಡ!

First Published | Sep 27, 2021, 1:25 PM IST

ವಿಭಿನ್ನ ಗೆಟಪ್‌ನಲ್ಲಿ ನಿರೂಪಣೆ ಮಾಡುತ್ತಿರುವ ನಟಿ ಅನುಪಮಾ ಗೌಡ. ಮಾಲಾಶ್ರೀ ಆಯ್ತು ಈಗ ಆರತಿ ಗೆಟ್ ಅಪ್‌ನಲ್ಲಿ ನೆಕ್ಸ್ಟ್ ಯಾರು ಎಂದು ಪ್ರಶ್ನಿಸಿದ ನೆಟ್ಟಿಗರು... 
 

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ (Raja Rani) ರಿಯಾಲಿಟಿ ಶೋ ದಿನೇ ದಿನೇ ವೀಕ್ಷಕರ ಗಮನ ಸೆಳೆಯುತ್ತಿದೆ. 
 

ರಿಯಲ್ ಕಪಲ್‌ಗಳು ಸ್ಪರ್ಧಿಸುತ್ತಿರುವ ರಿಯಾಲಿಟಿ ಶೋಗೆ ನಟಿ ಅನುಪಮಾ ಗೌಡ (Anupama Gowda) ನಿರೂಪಣೆ ಮಾಡುತ್ತಿದ್ದಾರೆ. 

Tap to resize

ಕಳೆದ ವಾರ ಹಳ್ಳಿ ರೌಂಡ್ ಆಗಿದ್ದ ಕಾರಣ ಮಾಲಾಶ್ರೀ (Malashree) ಅವರ ರಾಮಚಾರಿ (Ramachari Film) ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. 

 ಈ ವಾರ ರೆಟ್ರೋ ಲುಕ್ ಆಗಿದ್ದ ಕಾರಣ ನಟಿ ಆರತಿ (Arati) ಲುಕ್‌ನಲ್ಲಿ ಮಿಂಚಿದ್ದಾರೆ. ಫೋಟೋಶೂಟ್‌ನ ಇನ್‌ಸ್ಟಾಗ್ರಾಂನಲ್ಲಿ (Instagram) ಹಂಚಿಕೊಂಡಿದ್ದಾರೆ. 

ಎಲಿಫ್ಯಾಂಟ್‌ ಗ್ರೇ (Elephant Grey) ಬಣ್ಣದ ಸೀರೆಗೆ ಕಪ್ಪು ಬ್ಲೌಸ್ ಮ್ಯಾಚ್ ಮಾಡಿಕೊಂಡು ಮಲ್ಲಿಗೆ ಹೂವು, ಗುಲಾಬಿ ಮುಡಿದಿದ್ದಾರೆ. 
 

ಅನುಪಮಾ ಅವರ ರೆಟ್ರೋ ಲುಕ್‌ ನೋಡಿ ಕೆಲವು ನಿರ್ದೇಶಕರು ದಿವಂಗತ ನಟಿ ಆರತಿ ಬಯೋಪಿಕ್ ಮಾಡಬೇಕು ಎಂದು ಪ್ಲಾನ್ ಮಾಡುವುದಕ್ಕೆ ಮುಂದಾಗಿದ್ದಾರಂತೆ.

Latest Videos

click me!