ನನ್ನರಸಿ ರಾಧೆ ನಟಿ ಕೌಸ್ತುಭ ಮಣಿಯ Pre-Wedding Photo Shoot ಹೇಗಿದೆ ನೋಡಿ…

Published : Apr 24, 2024, 05:31 PM IST

ನನ್ನರಸಿ ರಾಧೆ ಸೀರಿಯಲ್‌ನಲ್ಲಿ ಇಂಚರಾ ಪಾತ್ರದಲ್ಲಿ ನಟಿಸಿದ ನಟಿ ಕೌಸ್ತುಭ ಮಣಿ ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದಾರೆ.   

PREV
17
ನನ್ನರಸಿ ರಾಧೆ ನಟಿ ಕೌಸ್ತುಭ ಮಣಿಯ Pre-Wedding Photo Shoot ಹೇಗಿದೆ ನೋಡಿ…

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ನನ್ನರಸಿ ರಾಧೆ. ಇದರಲ್ಲಿ ಅಗಸ್ತ್ಯ ಮತ್ತು ಇಂಚರಾ ಜೋಡಿ, ಜನಕ್ಕೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಇಂಚರ ಪಾತ್ರದಲ್ಲಿ ಕೌಸ್ತುಭ ಮಣಿ ನಟಿಸಿದ್ದರು. 
 

27

ಇತ್ತೀಚೆಗಷ್ಟೇ ಮನಮೆಚ್ಚಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ಪ್ರೀವೆಡ್ಡಿಂಗ್ ಫೋಟೋ ಶೂಟ್ (pre wedding photoshoot) ಮಾಡಿಸಿಕೊಂಡಿದ್ದು, ಚಾಪರ್ ಬಳಸಿ ಶೂಟ್ ಮಾಡಿಸಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ. 
 

37

ಕೌಸ್ತುಭ ಕೆನಾಡಾದಲ್ಲಿ ವರ್ಕ್ ಮಾಡುತ್ತಿರುವ ಹುಡುಗ ಸಿದ್ಧಾಂತ್ ಜೊತೆ ಮಾರ್ಚ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆ ಯಾವಾಗ ಎನ್ನುವುದನ್ನು ನಟಿ ತಿಳಿಸಿಲ್ಲ. ಆದರೆ ಈಗಾಗಲೇ ಪ್ರೀವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆಯೋ ಎನ್ನುವ ಸಂಶಯ ಮೂಡಿದೆ. 
 

47

ನನ್ನರಸಿ ರಾಧೆ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಕೌಸ್ತುಭ ಮಣಿ (Kaustubha Mani), ಬಳಿಕ ತೆಲುಗು ಸೀರಿಯಲ್‌ಗಳಲ್ಲೂ ನಟಿಸಿದ್ದರು. ಬಳಿಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೌರಿ ಶಂಕರ ಧಾರಾವಾಹಿಯಲ್ಲಿ ಗೌರಿಯಾಗಿಯೂ ಕೆಲಕಾಲ ಮಿಂಚಿದ್ದರು. ಆದರೆ ಮದುವೆ ನಿಶ್ವಯವಾಗುತ್ತಿದ್ದಂತೆ ಸೀರಿಯಲ್‌ನಿಂದ ಹೊರ ಬಂದಿದ್ದರು. 
 

57

ಇನ್ನು ಸ್ಯಾಂಡಲ್ ವುಡ್ ನಲ್ಲೂ ಕೌಸ್ತುಭ ಮಣಿ ಮಿಂಚಿದ್ದರು. ಇವರು ರಾಮಾಚಾರಿ 2.0 (Ramachari 2.0) ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾದಲ್ಲಿ, ರಾಜ್ ಬಿ ಶೆಟ್ಟಿ ಮತ್ತು ಡಾ. ಶಿವರಾಜ್ ಕುಮಾರ್ ಜೊತೆ ಕೂಡ ಕೌಸ್ತುಭ ನಟಿಸಿದ್ದರು. 
 

67

ನಟನೆಗೆ ಕಾಲಿಡುವ ಮೊದಲು ಕೌಸ್ತುಭ ಎಂಜಿನಿಯರ್​ ಆಗಿದ್ದರು. ಫ್ಯಾಷನ್ ಶೋ ಒಂದರಲ್ಲಿ ಭಾಗವಹಿಸುವ ವೇಳೆ ಕೌಸ್ತುಭ ಅವರು ಮಾನ್ವಿತಾ ಕಾಮತ್ ಅವರನ್ನು ಭೇಟಿ ಮಾಡಿದ್ದು, ಅವರೇ ಕೌಸ್ತುಭಗೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಕಲ್ಪಿಸಿಕೊಟ್ಟರು ಎಂದು ಸ್ವತಃ ಕೌಸ್ತುಭ ಹೇಳಿದ್ದರು. 
 

77

ನನ್ನರಸಿ ರಾಧೆಯಲ್ಲಿ (Nannarasi Radhe) ಮುದ್ದು ಮುಖದ ಮತ್ತು ಮುದ್ದಾಗಿ ಮಾತನಾಡುವ ಮೂಲಕ ಇಂಚರಾ ಕನ್ನಡ ವೀಕ್ಷಕರ ಮನ ಗೆದ್ದಿದ್ದರು. ಸದ್ಯ ಸೀರಿಯಲ್, ಸಿನಿಮಾದಿಂದ ಕೌಸ್ತುಭ ದೂರ ಉಳಿದಿದ್ದಾರೆ. ಮದುವೆಯಾದ ಬಳಿಕ ಮತ್ತೆ ನಟನೆ ಮಾಡ್ತಾರೋ ಇಲ್ವೋ? ಕಾದು ನೋಡಬೇಕು.
 

Read more Photos on
click me!

Recommended Stories